ಕರ್ನಾಟಕದಲ್ಲಿ ಮತ್ತೆ ಐವರಲ್ಲಿ ಓಮಿಕ್ರಾನ್: ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ

ಕರ್ನಾಟಕದಲ್ಲಿ ಮತ್ತೆ 5 ಓಮಿಕ್ರಾನ್ ಕೇಸುಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳು 19ಕ್ಕೇರಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ 5 ಓಮಿಕ್ರಾನ್ ಕೇಸುಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳು 19ಕ್ಕೇರಿದೆ. 

ಧಾರವಾಡದಲ್ಲಿ 54 ವರ್ಷದ ಪುರುಷರಿಗೆ, ಭದ್ರಾವತಿಯಲ್ಲಿ 20 ವರ್ಷದ ಯುವತಿಗೆ, ಉಡುಪಿಯಲ್ಲಿ 82 ವರ್ಷದ ವಯೋವೃದ್ಧರಿಗೆ ಮತ್ತು 73 ವರ್ಷದ ವೃದ್ಧೆಗೆ ಹಾಗೂ ಮಂಗಳೂರಿಗೆ 19 ವರ್ಷದ ಯುವತಿಯಲ್ಲಿ ಸೋಂಕು ಬಂದಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. 

ಧಾರವಾಡದಲ್ಲಿ ಪತ್ತೆಯಾಗಿರುವ ಓಮಿಕ್ರಾನ್ ಸೋಂಕಿತ ವ್ಯಕ್ತಿ ಪ್ರಯಾಣ ಮಾಡಿ ಬಂದಿಲ್ಲ. ಆದರೂ ಓಮಿಕ್ರಾನ್ ಕೋವಿಡ್ ರೂಪಾಂತರಿ ಸೋಂಕು ಹರಡಿರುವುದು ಆತಂಕವನ್ನುಂಟುಮಾಡಿದೆ. ಪ್ರಸ್ತುತ 55 ವರ್ಷದ ವ್ಯಕ್ತಿ ಹೋಂ ಐಸೊಲೇಷನ್ ನಲ್ಲಿದ್ದಾರೆ. ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ಸೋಂಕು ಹಬ್ಬಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 
ಈ ಮೂಲಕ ಹುಬ್ಬಳ್ಳಿ-ಧಾರವಾಡದಲ್ಲಿ ಮೊದಲ ಓಮಿಕ್ರಾನ್ ಸೋಂಕು ವರದಿ ಪತ್ತೆಯಾದಂತಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com