ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗಕ್ಕೆ ಸಚಿವ ಸಂಪುಟದಿಂದ ಆಡಳಿತಾತ್ಮಕ ಅನುಮೋದನೆ

ಕಿತ್ತೂರು ಮೂಲಕ ಹಾದುಹೋಗುವ ಬೆಳಗಾವಿ-ಧಾರವಾಡ ನಡುವಿನ 73 ಕಿ.ಮೀ ಉದ್ದದ ಹೊಸ ರೈಲು ಮಾರ್ಗಕ್ಕೆ ಮಂಗಳವಾರ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಕಿತ್ತೂರು ಮೂಲಕ ಹಾದುಹೋಗುವ ಬೆಳಗಾವಿ-ಧಾರವಾಡ ನಡುವಿನ 73 ಕಿ.ಮೀ ಉದ್ದದ ಹೊಸ ರೈಲು ಮಾರ್ಗಕ್ಕೆ ಮಂಗಳವಾರ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

927.4 ಕೋಟಿ ರೂ. ವೆಚ್ಚದ ಈ ಹೊಸ ರೈಲ್ವೆ ಯೋಜನೆಯು ಬೆಳಗಾವಿ ಮತ್ತು ಧಾರವಾಡ ನಡುವಿನ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಈ ಹೊಸ ರೈಲು ಮಾರ್ಗದಲ್ಲಿ ಐತಿಹಾಸಿಕ ಕಿತ್ತೂರು ಪಟ್ಟಣ ಸೇರಿದಂತೆ 11 ಹೊಸ ರೈಲು ನಿಲ್ದಾಣಗಳನ್ನು ಹೊಂದಿರುತ್ತದೆ.

ಪ್ರಸ್ತುತ ಎರಡು ನಗರಗಳ ನಡುವಿನ ರೈಲು ಮಾರ್ಗದಲ್ಲಿ ಮೂರು ಗಂಟೆಗಳ ಪ್ರಯಾಣದ ಸಮಯಕ್ಕೆ ಹೋಲಿಸಿದರೆ ಬೆಳಗಾವಿ ಮತ್ತು ಧಾರವಾಡ ನಡುವಿನ ಹೊಸ ಮಾರ್ಗ ಪ್ರಯಾಣದ ಅವಧಿ ಒಂದು ಗಂಟೆ ಕಡಿಮೆಯಾಗುತ್ತದೆ.

ನೀರಾವರಿ ಇಲಾಖೆಯ ಅಡಿಯಲ್ಲಿ ಬರುವ ಸಂಸ್ಥೆಗಳಿಗೆ 1,650 ಕೋಟಿ ರೂ.ಗಳ ಸಾಲ ನೀಡುವ ಪ್ರಸ್ತಾವನೆ ಸೇರಿದಂತೆ ಹಲವಾರು ಇತರ ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com