
ನಮ್ಮ ಮೆಟ್ರೋ ರೈಲು(ಸಾಂದರ್ಭಿಕ ಚಿತ್ರ)
ಬೆಂಗಳೂರು: ಬೆಂಗಳೂರು ಮೆಟ್ರೋ ಟ್ರಿಪ್ ಟಿಕೆಟ್ ಗಳನ್ನು ನೀಡುವ ಯೋಜನೆ ಜಾರಿಗೆ ತರಲು ಮುಂದಾಗಿದೆ. ವಿಭಿನ್ನ ಟಿಕೆಟಿಂಗ್ ವ್ಯವಸ್ಥೆ ಹಾಗೂ ಸಾರ್ವಜನಿಕ ಟಿಕೆಟ್ ಕೌಂಟರ್ ಗಳಲ್ಲಿ ಜನದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಹೊಸ ಯೋಜನೆಯನ್ನು ಪರಿಚಯಿಸುವುದು ನಮ್ಮ ಮೆಟ್ರೋ ಉದ್ದೇಶವಾಗಿದೆ.
ಮಾ. 2022 ರಿಂದ ಟ್ರಿಪ್ ಟಿಕೆಟ್ ಗಳು ಜಾರಿಗೆ ಬರಲಿದೆ. ಮೆಟ್ರೋ ಕಾರ್ಡ್ ಗಳ ಮಾದರಿಯಲ್ಲೇ ಇರಲಿರುವ ಟ್ರಿಪ್ ಟಿಕೆಟ್ ಗಳು 25, 50, 100 ಹೀಗೆ ನಿರ್ದಿಷ್ಟ ಟ್ರಿಪ್ ಗಳನ್ನು ಹೊಂದಿರುತ್ತವೆ. ಇದಕ್ಕಾಗಿ ಮುಂಗಡ ಪಾವತಿ ಮಾಡಬೇಕಾಗುವುದು. ಇದಕ್ಕೆ ಟ್ರಿಪ್ ದೂರದ ಮಿತಿ ಇಲ್ಲ. ಅದು ಎರಡು ಸ್ಟೇಷನ್ ಗಳ ಅಂತರ ಇರಬಹುದು ಅಥವಾ ದೂರದ ಅಂತರ ಇರಬಹುದು ಎರಡಕ್ಕೂ ಟ್ರಿಪ್ ಟಿಕೆಟ್ ಗಳು ಅನ್ವಯವಾಗಲಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಬಿಎಂಆರ್ ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ "ಟ್ರಿಪ್ ಟಿಕೆಟ್ ಗಳು ಬೆಂಗಳೂರಿಗೆ ಕಿರು ಪ್ರವಾಸ ಕೈಗೊಳ್ಳುವವರಿಗೆ ಅಥವಾ ಪೂರ್ವನಿಗದಿಯಾಗ ಮಾರ್ಗಕ್ಕೆ ನಿಯಮಿತವಾಗಿ ಸಂಚರಿಸುವವರಿಗೆ ಸಹಕಾರಿಯಾಗಿರಲಿದೆ. ಇಂತಹ ವ್ಯಕ್ತಿಗಳು ಹೊಸ ಕಾರ್ಡ್ ನ್ನು ಪಡೆಯುವುದಾಗಲೀ ಅಥವಾ ಆ ಕಾರ್ಡ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಯ ಅಗತ್ಯವಿರುವುದಿಲ್ಲ.
ಕಾರ್ಡ್ ನಿಂದ ಟ್ರಿಪ್ ಗಳ ಸಂಖ್ಯೆ ಪ್ರತಿ ಬಾರಿ ಪ್ರಯಾಣಿಸಿದಾಗಲೂ ಸ್ವಯಂ ಚಾಲಿತವಾಗಿ ಕಡಿತಗೊಳ್ಳುತ್ತದೆ.
ಬೆಲೆ ಅಂಶ ಪ್ರಮುಖವಾಗಿದ್ದು ಬಿಎಂಆರ್ ಸಿಎಲ್ ಅದರೆಡೆಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಕಿ.ಮೀ ಆಧಾರದಲ್ಲಿ ಬೆಲೆ ನಿಗದಿಪಡಿಸುವುದಕ್ಕೆ ಸಾಧ್ಯವೇ? ಹಾಗೂ ರಿಯಾಯಿತಿ ನೀಡಲು ಸಾಧ್ಯವೆ? ಎಂಬುದನ್ನೂ ಪರಿಶೀಲಿಸುತ್ತಿದ್ದೇವೆ ಎಂದು ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.