ರಾಮಮಂದಿರಕ್ಕಾಗಿ ಸ್ವಾಧೀನ ಪಡಿಸಿಕೊಂಡ ಅಯೋಧ್ಯೆಯ ಭೂ ವಿವರ ಶೀಘ್ರದಲ್ಲೇ ಬಹಿರಂಗ: ಪೇಜಾವರ ಶ್ರೀ
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರವನ್ನು ನಿರ್ಮಿಸಲು ಸ್ವಾಧೀನಪಡಿಸಿಕೊಂಡ ಜಮೀನಿನ ವಿವರಗಳನ್ನು ಒಂದೆರಡು ದಿನಗಳಲ್ಲಿ ಬಹಿರಂಗಪಡಿಸಲಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
Published: 01st July 2021 12:24 PM | Last Updated: 01st July 2021 03:49 PM | A+A A-

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಉಡುಪಿ: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರವನ್ನು ನಿರ್ಮಿಸಲು ಸ್ವಾಧೀನಪಡಿಸಿಕೊಂಡ ಜಮೀನಿನ ವಿವರಗಳನ್ನು ಒಂದೆರಡು ದಿನಗಳಲ್ಲಿ ಬಹಿರಂಗಪಡಿಸಲಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಸ್ವಾಮೀಜಿ ಜೂನ್ 30ರ ಬುಧವಾರ ಅಯೋಧ್ಯೆಗೆ ಭೇಟಿ ನೀಡಿ ಇತರ ಟ್ರಸ್ಟಿಗಳೊಂದಿಗೆ ಸಭೆ ನಡೆಸಿದರು. ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಖಜಾಂಚಿ ಶ್ರೀ ಗೋವಿಂದಗಿರಿ ಸರಸ್ವತಿ ಮತ್ತು ಅನಿಲ್ ಮಿಶ್ರಾ ಮತ್ತು ಕಾಮೇಶ್ವರರಂ ಈ ಸಭೆಯಲ್ಲಿ ಭಾಗವಹಿಸಿದ್ದರು.
ಭೂಸ್ವಾಧೀನ ದಾಖಲೆಗಳನ್ನು ಪರಿಶೀಲಿಸಲು ಟ್ರಸ್ಟಿಗಳು ಕೆಲವು ದಿನಗಳ ಕಾಲ ಅಯೋಧ್ಯೆಯಲ್ಲಿ ಉಳಿಯುತ್ತಾರೆ. ಈ ವಿಷಯವನ್ನು ಬುಧವಾರ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು. ಎಲ್ಲಾ ಕೋನಗಳಿಂದ ಚರ್ಚೆಗಳನ್ನು ನಡೆಸಿದ ನಂತರ, ಟ್ರಸ್ಟ್ ಎಲ್ಲಾ ವಿವರಗಳನ್ನು ಬಹಿರಂಗಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
"ಭಗವಾನ್ ರಾಮನಿಗೆ ಸಮರ್ಪಿತವಾದದೇವಾಲಯದ ನಿರ್ಮಾಣಕ್ಕಾಗಿ ಭೂಮಿಯನ್ನು ಮಟ್ಟಗೊಳಿಸುವ ಕೆಲಸ ಪ್ರಗತಿಯಲ್ಲಿದೆ ಮತ್ತು ಇದು ಸೆಪ್ಟೆಂಬರ್ ವರೆಗೆ ಮುಂದುವರಿಯುತ್ತದೆ. ಇಲ್ಲಿಯವರೆಗೆ 3,200 ಕೋಟಿ ರೂ.ಗಳ ದೇಣಿಗೆ ಸ್ವೀಕರಿಸಲಾಗಿದೆ. ಈಗಲೂ ದಾನಿಗಳು ಕೊಡುಗೆ ನೀಡಲು ಮುಂದೆ ಬರುತ್ತಿದ್ದಾರೆ" ಶ್ರೀಗಳು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪೆಜಾವರ ಸ್ವಾಮೀಜಿ ಅಯೋಧ್ಯೆಯ ರಾಮ್ ಲಲ್ಲಾ ವಿಗ್ರಹಕ್ಕೆ ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ.