ಪಂಚಮಸಾಲಿಗಳಿಗೆ ಮೀಸಲಾತಿ ಖಚಿತಪಡಿಸಿ ಇಲ್ಲವೇ ಪ್ರತಿಭಟನೆ ಎದುರಿಸಿ: ಸಿಎಂಗೆ ಶ್ರೀಗಳ ಎಚ್ಚರಿಕೆ

ತಮ್ಮ ಬೇಡಿಕೆಗಳನ್ನು ಸಮರ್ಪಕವಾಗಿ ಈಡೇರಿಸಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶ್ವಾಸನೆ ನೀಡಿದ ನಂತರ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2 ಎ ಮೀಸಲಾತಿಯಲ್ಲಿ ಸೇರಿಸುವ ಬೇಡಿಕೆಯನ್ನು ಗಡುವಿಗೆ ಮುನ್ನ ಈಡೇರದಿದ್ದರೆ ಮತ್ತೆ ಸಾಮೂಹಿಕ ಪ್ರತಿಭಟನೆಯನ್ನು ಪ್ರಾರಂಭಿಸುವುದಾಗಿ ಎಚ್ಚರಿಕೆ ನೀಡಿದೆ.
ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿ,
ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿ,

ಮೈಸೂರು: ತಮ್ಮ ಬೇಡಿಕೆಗಳನ್ನು ಸಮರ್ಪಕವಾಗಿ ಈಡೇರಿಸಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶ್ವಾಸನೆ ನೀಡಿದ ನಂತರ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2 ಎ ಮೀಸಲಾತಿಯಲ್ಲಿ ಸೇರಿಸುವ ಬೇಡಿಕೆಯನ್ನು ಗಡುವಿಗೆ ಮುನ್ನ ಈಡೇರದಿದ್ದರೆ ಮತ್ತೆ ಸಾಮೂಹಿಕ ಪ್ರತಿಭಟನೆಯನ್ನು ಪ್ರಾರಂಭಿಸುವುದಾಗಿ ಎಚ್ಚರಿಕೆ ನೀಡಿದೆ.

ಪ್ರಾದೇಶಿಕ ಧಾರ್ಮಿಕ ಮತ್ತು ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸುವುದಕ್ಕಾಗಿ ಮೈಸೂರಿನಲ್ಲಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿ, ರಾಜ್ಯ ಮತ್ತು ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸಮುದಾಯವನ್ನು ಸೇರಿಸುವ ಬಗ್ಗೆ ಮುಖ್ಯಮಂತ್ರಿಗಳು ನೀಡೀದ್ದ ಭರವಸೆ ಬಗ್ಗೆ ನೆನಪಿಸಿದ್ದಾರೆ. ತಮ್ಮ ಸಮುದಾಯಕ್ಕೆ 2 ಎ ಮೀಸಲಾತಿ ದೊರಕಿಸುವ ಮೂಲಕ  “ಯಡಿಯೂರಪ್ಪ ತನ್ನ ಭರವಸೆಯಂತೆ ಕೆಲಸ ಮಾಡಬೇಕು" ಎಂದರು.

"ಒಂದೊಮ್ಮೆ ಯಡಿಯೂರಪ್ಪ ಈ ಭರವಸೆ ಈಡೇರಿಸುವುದಕ್ಕೆ ವಿಫಲವಾದರೆ ದೊಡ್ಡ ಮಟ್ಟದ ಪ್ರತಿಭಟನೆ ಅನಿವಾರ್ಯ.ನಾವು 20 ಲಕ್ಷಕ್ಕೂ ಹೆಚ್ಚು ಜನರನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಟ್ಟುಗೂಡಿಸುತ್ತೇವೆ. ನಮ್ಮ ಕೂಗಿಗೆ ನಿರ್ಲಕ್ಷ್ಯವನ್ನು ತೋರಿಸುವ ಮೂಲಕ, ಬಿಜೆಪಿ ಉಪಚುನಾವಣೆಯಲ್ಲಿ ಸ್ಥಾನಗಳನ್ನು ಕಳೆದುಕೊಂಡಿತು, ಅದು ಮತ್ತೆ ಅದೇ ತಪ್ಪನ್ನು ಮಾಡುವುದಿಲ್ಲ ಎಂದು ಭಾವಿಸುತ್ತೇವೆ, ”ಎಂದು ಶ್ರೀಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com