ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸಂಚಾರಿ ಚಿಕಿತ್ಸಾ ಕೇಂದ್ರಕ್ಕೆ ವನ್ಯಜೀವಿ ಪ್ರೇಮಿಗಳ ಒತ್ತಾಯ

ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ಗಾಯಗೊಂಡ ವನ್ಯಜೀವಿಗಳಿಗೆ ತ್ವರಿತವಾಗಿ ರಕ್ಷಣೆ ಹಾಗೂ ಚಿಕಿತ್ಸೆಗೆ ನೆರವಾಗಲು ಸಂಚಾರಿ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಬೇಕೆಂದು ವನ್ಯಜೀವಿ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿನ ಹುಲಿಯ ಚಿತ್ರ
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿನ ಹುಲಿಯ ಚಿತ್ರ

ಮೈಸೂರು: ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ಗಾಯಗೊಂಡ ವನ್ಯಜೀವಿಗಳಿಗೆ ತ್ವರಿತವಾಗಿ ರಕ್ಷಣೆ ಹಾಗೂ ಚಿಕಿತ್ಸೆಗೆ ನೆರವಾಗಲು ಸಂಚಾರಿ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಬೇಕೆಂದು ವನ್ಯಜೀವಿ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಹೋಗುವಾಗ ಗಾಯಗೊಂಡ ಕಾಡು ಪ್ರಾಣಿಗಳು ಸಾಯುತ್ತಿರುವ ಘಟನೆಗಳು ವರದಿಯಾಗುತ್ತಿರುವ ಸಮಯದಲ್ಲಿ ಈ ರೀತಿಯ ಒತ್ತಾಯ ಕೇಳಿಬಂದಿದೆ.

ಜುಲೈ 9 ರಂದು ಗಾಯಗೊಂಡಿದ್ದ ಐದು ವರ್ಷದ ಗಂಡು ಹುಲಿಯನ್ನು ಸೆರೆಹಿಡಿಯಲಾಯಿತು ಆದರೆ ಕಾಡಿನಿಂದ 200 ಕಿ.ಮೀ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ  ಚಿಕಿತ್ಸೆಗಾಗಿ ಹೋಗುವಾಗ ಅದು ಮೃತಪಟ್ಟಿತ್ತು. ಇದೊಂದೆ ಘಟನೆಯಲ್ಲ, ಇಂತಹ ಅನೇಕ ಘಟನೆಗಳು ಸಂಭವಿಸಿವೆ. ಪುನರ್ವಸತಿ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಾಗ, ಹುಲಿ, ಚಿರತೆ, ಆನೆಗಳು ಸೇರಿದಂತೆ ಅನೇಕ ವನ್ಯಜೀವಿಗಳು ಮೃತಪಟ್ಟಿವೆ.

ಮೈಸೂರಿನಲ್ಲಿ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಐದು ವರ್ಷದ ಚಿರತೆಯೊಂದು ಕಳೆದ ವರ್ಷ ಡಿಸೆಂಬರ್ ನಲ್ಲಿ ಬನ್ನೇರುಘಟ್ಟ ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿ ಮೃತಪಟ್ಟರೆ, ಹಡಿಯಾಳ ವಲಯದಿಂದ ರಕ್ಷಿಸಲ್ಪಟ್ಟ 9 ವರ್ಷದ ಗಂಡು ಹುಲಿಯೊಂದು ಜೂನ್ 2018ರಲ್ಲಿ ಕೂರ್ಗಳಿ ಪುನರ್ವಸತಿ ಕೇಂದ್ರದಲ್ಲಿ ಸಾವನ್ನಪ್ಪಿತ್ತು. ಕೊಡಗಿನಲ್ಲಿ ಗಾಯಗೊಂಡಿದ್ದ ಮತ್ತೊಂದು ಹುಲಿ ಮರಿ ಇದೇ ರೀತಿಯಲ್ಲಿ ಕೂರ್ಗಳ್ಳಿಯಲ್ಲಿ ಮೃತಪಟ್ಟಿತ್ತು. 

ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸಂಚಾರಿ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಬೇಕೆಂದು ತಜ್ಞರು ಹಾಗೂ ವನ್ಯಜೀವಿ ಪ್ರೇಮಿಗಳು ಒತ್ತಾಯಿಸಿದ್ದಾರೆ. ಹುಲಿ ಸಂರಕ್ಷಿತಾರಣ್ಯದಲ್ಲಿ ಸಂಚಾರಿ ಕೇಂದ್ರವನ್ನು ಸ್ಥಾಪಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಇದು ಗಾಯಗೊಂಡ ಪ್ರಾಣಿಗಳಿಗೆ ಪ್ರಥಮ ಚಿಕಿತ್ತೆ ಮತ್ತಿತರ ತುರ್ತು ಚಿಕಿತ್ಸೆ ನೀಡಲು ನೆರವಾಗಲಿದೆ ಎಂದು ಪೊರೆನ್ ಸಿಕ್ ತಜ್ಞ ಹಾಗೂ ಬೆಂಗಳೂರಿನ ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರೊಫೆಸರ್ ಡಾ. ಪ್ರಯಾಗ್ ಹೇಳಿದ್ದಾರೆ. 

ಇದಲ್ಲದೆ, ಅಂತಹ ಕೇಂದ್ರವನ್ನು ಸ್ಥಾಪಿಸಿದರೆ, ಪಶುವೈದ್ಯರು ಕಾಡು ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ವೈದ್ಯರನ್ನು 24/7 ಸೌಲಭ್ಯದಲ್ಲಿ ಲಭ್ಯವಾಗುವಂತೆ ಮಾಡಬಹುದು. ಈ ರೀತಿಯ ಪ್ರೋಟೋಕಾಲ್‌ಗಳನ್ನು ಅನುಸರಿಸಿದ ನಂತರ ಚೇತರಿಸಿಕೊಂಡ ಪ್ರಾಣಿಗಳನ್ನು ಕೂಡಲೇ ತಮ್ಮ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲು ಸಹಕಾರಿಯಾಗಲಿದೆ ಎಂದು ಡಾ. ಪ್ರಯಾಗ್ ಎಚ್ ಎಸ್ ತಿಳಿಸಿದರು. 

ಏತನ್ಮಧ್ಯೆ, ಇತ್ತೀಚೆಗೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಗಾಯಗೊಂಡ ಹುಲಿಯನ್ನು ಸೆರೆಹಿಡಿಯುವಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಸ್ಟ್ಯಾಂಡರ್ಡ್ ಆಪರೇಷನ್ ಕಾರ್ಯವಿಧಾನವನ್ನು (ಎಸ್‌ಒಪಿ) ಅನುಸರಿಸಲಾಗಿಲ್ಲ ಎಂದು ವನ್ಯಜೀವಿ ಪ್ರೇಮಿಗಳು ಆರೋಪಿಸಿದ್ದಾರೆ.

ಕುರ್ಗಳ್ಳಿ ಪುನರ್ವಸತಿ ಕೇಂದ್ರವು ಸಮೀಪದಲ್ಲಿದ್ದಾಗ ಗಾಯಗೊಂಡ ಪ್ರಾಣಿಯ ಮೇಲೆ ಎರಡು ಬಾಣಗಳನ್ನು ಏಕೆ ಹಾರಿಸಲಾಯಿತು ಎಂದು ಯುನೈಟೆಡ್ ಕನ್ಸರ್ವೇಶನ್ ಮೂವ್‌ಮೆಂಟ್‌ನ ಕಾರ್ಯಕರ್ತ ಜೋಸೆಫ್ ಹೂವರ್ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com