ಮೂಡಬಿದಿರೆ: 'ಕಂಬಳದ ಉಸೇನ್ ಬೋಲ್ಟ್' ಖ್ಯಾತಿಯ ಶ್ರೀನಿವಾಸ ಗೌಡರಿಗೆ ಜೀವ ಬೆದರಿಕೆ!

'ಕಂಬಳದ  ಉಸೇನ್ ಬೋಲ್ಟ್' ಹೆಸರಿನಿಂದ ಜನಪ್ರಿಯವಾಗಿರುವ ಮತ್ತು 'ಕರ್ನಾಟಕ ಕ್ರೀಡಾ ರತ್ನ' ಪ್ರಶಸ್ತಿ ವಿಜೇತ ಅಶ್ವತ್ ಪುರ ಶ್ರೀನಿವಾಸ್ ಗೌಡ ಅವರ ಮೊಬೈಲ್ ಗೆ ಬೆದರಿಕೆ ಕರೆಯೊಂದು ಬಂದಿದೆ. ಅತ್ತ ಕಡೆಯಿಂದ ಕರೆ ಮಾಡಿರುವ ವ್ಯಕ್ತಿ ಬೆದರಿಕೆ ಹಾಕಿದ್ದಲ್ಲದೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನೆಂದು ವರದಿಯಾಗಿದೆ. ಈ ಕರೆಯ ರೆಕಾರ್ಡಿಂಗ್ ಸೋಶಿಯಲ್ ಮೀಡಿಯಾದಲ್ಲ
ಶ್ರೀನಿವಾಸ ಗೌಡ
ಶ್ರೀನಿವಾಸ ಗೌಡ

ಮೂಡಬಿದಿರೆ: 'ಕಂಬಳದ  ಉಸೇನ್ ಬೋಲ್ಟ್' ಹೆಸರಿನಿಂದ ಜನಪ್ರಿಯವಾಗಿರುವ ಮತ್ತು 'ಕರ್ನಾಟಕ ಕ್ರೀಡಾ ರತ್ನ' ಪ್ರಶಸ್ತಿ ವಿಜೇತ ಅಶ್ವತ್ ಪುರ ಶ್ರೀನಿವಾಸ್ ಗೌಡ ಅವರ ಮೊಬೈಲ್ ಗೆ ಬೆದರಿಕೆ ಕರೆಯೊಂದು ಬಂದಿದೆ. ಅತ್ತ ಕಡೆಯಿಂದ ಕರೆ ಮಾಡಿರುವ ವ್ಯಕ್ತಿ ಬೆದರಿಕೆ ಹಾಕಿದ್ದಲ್ಲದೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನೆಂದು ವರದಿಯಾಗಿದೆ. ಈ ಕರೆಯ ರೆಕಾರ್ಡಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕರೆ ಮಾಡಿದವರು ಶ್ರೀರಾಮ ಸೇನೆ ಜತೆಗೆ ಸಂಬಂಧ ಹೊಂದಿರುವ ಪ್ರಶಾಂತ್ ಬಂಗೇರ ಎಂದು ಹೇಳುವುದು ರೆಕಾರ್ಡಿಂಗ್ ನಲ್ಲಿ ಕೇಳಿದೆ. ಅವನು ಶ್ರೀನಿವಾಸ ಗೌಡರಿಗೆ ಕಾರ್ ಸ್ಟ್ರೀಟ್ ಮಂಗಳೂರಿನಲ್ಲಿರುವ ರಿಯಲ್ ಎಸ್ಟೇಟ್ ಕಚೇರಿಗೆ ಆಹ್ವಾನಿಸಿದ್ದಲ್ಲದೆ ಕಂಬಳದ ಇತಿಹಾಸವನ್ನು ಹೇಳಲು ಮುಂದಾಗಿದ್ದಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ ಶ್ರೀನಿವಾಸ ಗೌಡ ಮಂಗಳೂರಿಗೆ ಭೇಟಿ ನೀಡಲು ನನಗೆ ಸದ್ಯಕ್ಕೆ ಅಸಾಧ್ಯ ಎಂದಿದ್ದಾರೆ. ಬದಲಿಗೆ ಕರೆ ಮಾಡಿದಾತನಿಗೇ ಮೂಡಬಿದಿರೆಯ ಒಂಟಿಕಟ್ತೆ ಎಂಬಲ್ಲಿಗೆ ಬರಲು ಹೇಳಿದ್ದಾರೆ "ನಾನು ಬರುತ್ತೇನೆ. ಆದರೆ ನೀವು ಅಲ್ಲಿಗೆ ಬಂದಾಗ, ನೀವು ಬೆನ್ನನ್ನು ಅಡಿಕೆ ಹಾಳೆಗಳಿಂದ ರಕ್ಷಿಸಬೇಕಾಗುತ್ತದೆ. ನಿಮಗೆ ಕೆಲವು ಬೆಂಬಲಿಗರು ಸಹ ಬೇಕಾಗುತ್ತಾರೆ" ಎಂದು ಪ್ರಶಾಂತ್ ಬೆದರಿಸುವ ಸ್ವರದಲ್ಲಿ ಹೇಳುವುದನ್ನು ಹೇಳಬಹುದು. ಈ ಸಂಭಾಷಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಶ್ರೀನಿವಾಸ ಗೌಡ ಮೂಡಬಿದಿರೆ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳನ್ನು ಕರೆ ಕಳಿಸಿದ್ದಾರೆ.

ಈ ಘಟನೆಯನ್ನು ಖಂಡಿಸಿದ ಶಾಸಕ ಉಮಾನಾಥ್ ಕೋಟ್ಯಾನ್ ದು ತುಳುನಾಡಿಗೆ ಮಾಡಿದ ಅವಮಾನ ಎಂದು ಅಭಿಪ್ರಾಯಪಟ್ಟರು. ಆರೋಪಿ ಪ್ರಶಾಂತ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡುವುದಾಗಿ ಹೇಳಿದರು. ಮಾಜಿ ಸಚಿವ ಅಭಯಚಂದ್ರ ಜೈನ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com