ಕೊರೋನಾ ವಿರುದ್ಧ ಹೋರಾಟಕ್ಕೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ 100 ಕೋಟಿ ರೂ. ದೇಣಿಗೆ
ನಿರಂತರವಾಗಿ ಹೆಚ್ಚುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ 100 ಕೋಟಿ ರೂ. ದೇಣಿಗೆ ನೀಡಿದ್ದಾರೆ.
Published: 10th May 2021 12:59 PM | Last Updated: 10th May 2021 01:57 PM | A+A A-

ಸುಧಾ ಮೂರ್ತಿ
ಬೆಂಗಳೂರು: ನಿರಂತರವಾಗಿ ಹೆಚ್ಚುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ 100 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಕಳೆದ ವರ್ಷವೂ ಸಹ ಸುಧಾ ಮೂರ್ತಿಯವರು 100 ಕೋಟಿ ರೂ ದೇಣಿಗೆಯನ್ನು ನೀಡಿದ್ದರು.
ಈ ಬಾರಿಯ ದೇಣಿಗೆಯನ್ನು ಕೋವಿಡ್ ರೋಗಿಗಳಿಗೆ ಆಮ್ಲಜನಕ, ವೆಂಟಿಲೇಟರ್ ಮತ್ತು ಇತರ ಔಷಧಿ ಖರೀದಿಗೆ ಬಳಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಮಂಗಳೂರು, ಹೈದರಾಬಾದ್, ಪುಣೆ, ನಾಗ್ಪುರ, ನವದೆಹಲಿ ಮತ್ತು ತಿರುವನಂತಪುರಂಗೆ ಇನ್ಫೋಸಿಸ್ ಫೌಂಡೇಶನ್ ಹಣ ಒದಗಿಸುತ್ತದೆ ಎಂದು ಅವರು ಘೋಷಿಸಿದರು