ಮಹಿಳಾ ಲೊಕೊ ಪೈಲಟ್ ಒಳಗೊಂಡ ತಂಡದಿಂದ ಕರ್ನಾಟಕಕ್ಕೆ ಜೀವ ರಕ್ಷಕ ಆಮ್ಲಜನಕ!

ಇದೇ ಮೊದಲ ಬಾರಿಗೆ ಸೌತ್ ವೆಸ್ಟರ್ನ್ ರೈಲ್ವೆ ವಿಭಾಗದ ಮಹಿಳೆಯೊಬ್ಬರು ರಾಜ್ಯಕ್ಕೆ ಆಮ್ಲಜನಕ ಸರಬರಾಜು ಮಾಡುತ್ತಿದ್ದ ನಾಲ್ಕನೇ ಆಕ್ಸಿಜನ್ ಎಕ್ಸ್ ಪ್ರೆಸ್ ನ ತಂಡದ ಭಾಗವಾಗಿದ್ದಾರೆ. 
ಕರ್ನಾಟಕಕ್ಕೆ ಆಕ್ಸಿಜನ್ ಸರಬರಾಜು ರೈಲಿನಲ್ಲಿದ್ದ ಲೋಕೋ ಸಿಬ್ಬಂದಿ
ಕರ್ನಾಟಕಕ್ಕೆ ಆಕ್ಸಿಜನ್ ಸರಬರಾಜು ರೈಲಿನಲ್ಲಿದ್ದ ಲೋಕೋ ಸಿಬ್ಬಂದಿ
Updated on

ಬೆಂಗಳೂರು: ಇದೇ ಮೊದಲ ಬಾರಿಗೆ ಸೌತ್ ವೆಸ್ಟರ್ನ್ ರೈಲ್ವೆ ವಿಭಾಗದ ಮಹಿಳೆಯೊಬ್ಬರು ರಾಜ್ಯಕ್ಕೆ ಆಮ್ಲಜನಕ ಸರಬರಾಜು ಮಾಡುತ್ತಿದ್ದ ನಾಲ್ಕನೇ ಆಕ್ಸಿಜನ್ ಎಕ್ಸ್ ಪ್ರೆಸ್ ನ ತಂಡದ ಭಾಗವಾಗಿದ್ದಾರೆ. 

ಆಕ್ಸಿಜನ್ ಎಕ್ಸ್ ಪ್ರೆಸ್ ನ ರೈಲು ಜಾರ್ಖಂಡ್ ನಿಂದ ವೈಟ್ ಫೀಲ್ಡ್ ಗೆ ಆಕ್ಸಿಜನ್ ಹೊತ್ತು ಬಂದಿತ್ತು. ಸಹಾಯಕ ಲೋಕೋ ಪೈಲಟ್ ಆಗಿ ಬೆಂಗಳೂರಿನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಟೆಕ್ ಪದವೀಧರರಾದ ನೀರಮ್ ಕುಮಾರಿ ಈ ರೈಲು ಬೆಂಗಳೂರು ವಿಭಾಗ ಪ್ರವೇಶಿಸುತ್ತಿದ್ದಂತೆಯೇ 120 ಟನ್ ಗಳಷ್ಟು ದ್ರುವೀಕೃತ ವೈದ್ಯಕೀಯ ಆಕ್ಸಿಜನ್ ನ್ನು ಹೊತ್ತು ತಂದಿದ್ದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲಿನಲ್ಲಿದ್ದ ಸಿಬ್ಬಂದಿ ತಂಡದೊಂದಿಗೆ ಸೇರ್ಪಡೆಯಾಗಿದ್ದಾರೆ.  

ಈ ರೈಲು ವೈಟ್ ಫೀಲ್ಡ್ ನಲ್ಲಿರುವ ಇನ್ಲ್ಯಾಂಡ್ ಕಂಟೇನರ್ ಡಿಪೋ ಗೆ ಮಂಗಳವಾರದಂದು ತಲುಪಿದೆ. 

ಬಿಹಾರ ಮೂಲದ ನೀಲಂ ಕುಮಾರಿ ಗೆ 5 ವರ್ಷದ ಮಗುವಿದ್ದು, ವೃತ್ತಿ ಜೀವನದಲ್ಲಿ ಒಂದು ವರ್ಷ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

ಆಕ್ಸಿಜನ್ ಎಕ್ಸ್ ಪ್ರೆಸ್ ನಲ್ಲಿದ್ದ ಲೋಕೋ ಪೈಲಟ್ ಧೀರೇಂದ್ರ ಕುಮಾರ್ ಹಾಗೂ ವಿಹೆಚ್ ವಾಲಿ, ಮುಖ್ಯ ಲೋಕೋ ಇನ್ಸ್ ಪೆಕ್ಟರ್ ಅವರೊಂದಿಗೆ ನೀಲಮ್ ಕುಮಾರಿ ಜೋಲಾರ್ ಪೇಟ್ ನಿಂದ ಪ್ರಾರಂಭವಾಗುವ ಬೆಂಗಳೂರು ವಿಭಾಗದಿಂದ ತಂಡವನ್ನು ಸೇರ್ಪಡೆಯಾದರು, ಮೂವರೂ ಬೆಳಿಗ್ಗೆ 7.04 ಕ್ಕೆ ಪ್ರಾರಂಭಿಸಿ ಪ್ರತಿ ಗಂಟೆಗೆ 100 ಕಿ.ಮೀ ಸಂಚರಿಸಿ ವೈಟ್ ಫೀಲ್ಡ್ ಗೆ 8:31 ಕ್ಕೆ ತಲುಪಿದರು. ಅಂತಿಮವಾಗಿ 8.39 ರ ವೇಳೆಗೆ ಐಸಿಡಿಗೆ ರೈಲು ತಲುಪಿತು. 

"ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ಸಂಕಷ್ಟ ಎದುರಿಸುತ್ತಿರುವಾಗ ನಾನು ಸಹಾಯ ಮಾಡುವ ತಂಡದ ಭಾಗವಾಗಿದ್ದಕ್ಕೆ ಅತ್ಯಂತ ತೃಪ್ತಿಯಾಗುತ್ತಿದೆ. ಇದು ಅತ್ಯಂತ ಗೌರವದ ವಿಷಯವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಲಮ್ ಕುಮಾರಿ ಹೇಳಿದ್ದಾರೆ. 

ನಾವು ಕೊಂಡೊಯ್ಯುತ್ತಿರುವ ಪ್ರಮುಖವಾದ ಸರಕನ್ನು ಗಮನದಲ್ಲಿಟ್ಟುಕೊಂಡು, ಆಂಬುಲೆನ್ಸ್ ಚಾಲಕರಂತೆ ಭಾಸವಾಗುತ್ತಿತ್ತು. ಇಡೀ ಮಾರ್ಗವೇ ಎಲ್ಲೂ ಅಡೆತಡೆಗಳಿಲ್ಲದೇ ನಮಗಾಗಿ ತೆರೆದಿತ್ತು. 

ಲೋಕೋ ಪೈಲಟ್ ಗಳಿಗೆ ಸಿಗ್ನಲ್ ಗಳು ಹಾಗೂ ಟ್ರ್ಯಾಕ್ ಮೇಲೆ ಗಮನ ಹರಿಸುವುದಕ್ಕಾಗಿ ಸಹಾಯ ಮಾಡಲು ಸಹಾಯಕ ಲೋಕೋ ಪೈಲಟ್ ಅತ್ಯಂತ ಎಚ್ಚರದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಇಡೀ ಪ್ರಯಾಣದಲ್ಲಿ ಲೋಕೋ ಪೈಲಟ್ ಗೆ ಮಾಹಿತಿ ನೀಡುತ್ತಿರಬೇಕಾಗುತ್ತದೆ" ಎಂದು ನೀಲಮ್ ಕುಮಾರಿ ಹೇಳಿದ್ದಾರೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com