ಐಡಿಯಲ್ ಐಸ್ ಕ್ರೀಂ ಸಂಸ್ಥೆ ಸ್ಥಾಪಕ ಎಸ್. ಪ್ರಭಾಕರ ಕಾಮತ್ ನಿಧನ
ಬೆಂಗಳೂರು: ಐಡಿಯಲ್ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ, ಉದ್ಯಮಿ ಎಸ್. ಪ್ರಭಾಕರ ಕಾಮತ್ (79) ಶನಿವಾರ ನಸುಕಿನ ಜಾವ 3.30 ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅ.28 ರಂದು ರಾತ್ರಿ ಪ್ರಭಾಕರ ಕಾಮತ್ ಅವರು ಬಿಜೈ ಕಾಪಿಕಾಡ್‌ನ 1ನೇ ಅಡ್ಡರಸ್ತೆಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕೆಎಸ್‌ಆರ್‌ಟಿಸಿ ಕಡೆಯಿಂದ ಬಿಜೈ ಕಾಪಿಕಾಡ್ ಕಡೆಗೆ ಅತಿ ವೇಗದಿಂದ ಬಂದ ಸ್ಕೂಟರ್ ಡಿಕ್ಕಿ ಹೊಡೆದಿತ್ತು. ಕಾಮತ್ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿ 1974ರ ಮೇ 1 ರಲ್ಲಿ ಆರಂಭವಾದ ಐಡಿಯಲ್ ಐಸ್ ಕ್ರೀಮ್ ಪಾರ್ಲರ್, ಕರಾವಳಿಯಾದ್ಯಂತ ಜನಪ್ರಿಯ ಉದ್ಯಮವಾಗಿ ಬೆಳೆದು ನಿಂತಿದೆ.
ಸ್ವತಃ ಐಸ್ ಕ್ರೀಮ್ ತಯಾರಿ ಕಲಿತಿದ್ದ ಪ್ರಭಾಕರ್ ಕಾಮತ್ ಅವರು 14 ಫ್ಲೇವರ್ ಗಳೊಂದಿಗೆ ಮೊದಲ ಬಾರಿಗೆ ಐಡಿಯಲ್ ಐಸ್ ಕ್ರೀಮ್ ಪಾರ್ಲರ್ ತೆರೆದಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ