ಬಿಟ್ ಕಾಯಿನ್ ಹಗರಣ: ಡಿಜಿಟಲ್ ಟ್ರಯಲ್ ಪತ್ತೆಹಚ್ಚಲು ಇಂಟರ್‌ಪೋಲ್ ನೆರವು?

ಸೈಬರ್ ಕ್ರೈಂ ಬಗ್ಗೆ ಹೆಚ್ಚಿನ ಅರಿವಿಗಾಗಿ ಡಿಜಿಟಲ್ ಸಾಕ್ಷ್ಯಗಳನ್ನು ಪತ್ತೆ ಹಚ್ಚಬೇಕಾಗುತ್ತದೆ. ಈ ಎಲ್ಲ ಎಕ್ಸ್‌ಚೇಂಜ್‌ಗಳು ಮತ್ತು ವೆಬ್‌ಸೈಟ್‌ಗಳ ಸರ್ವರ್‌ಗಳು ವಿದೇಶದಲ್ಲಿರುವುದರಿಂದ ಇಂಟರ್‌ಪೋಲ್‌ನ ನೆರವು ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಬಿಟ್ ಕಾಯಿನ್ ಹಗರಣದ ಬಗ್ಗೆ ಚರ್ಚೆಯಾಗುತ್ತಿದೆ, ಪ್ರಕರಣದ ಪ್ರಮುಖ ರೂವಾರಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಅಲಿಯಾಸ್ ಎಪಿ(ಆತನ ಇಂಟರ್ ನೆಟ್ ಗುರುತು) ಸ್ಕೈಪ್ ಚಾಟ್‌, ಫೇಸ್‌ಬುಕ್ ಮುಂತಾದವುಗಳಲ್ಲಿ ತನ್ನ ಅಪರಾಧದ ಡಿಜಿಟಲ್ ಮಾಹಿತಿಗಳಿವೆ ಎಂದು ಹೇಳಿಕೊಂಡಿದ್ದಾನೆ.

ಸೈಬರ್ ಕ್ರೈಂ ಬಗ್ಗೆ ಹೆಚ್ಚಿನ ಅರಿವಿಗಾಗಿ ಡಿಜಿಟಲ್ ಸಾಕ್ಷ್ಯಗಳನ್ನು ಪತ್ತೆ ಹಚ್ಚಬೇಕಾಗುತ್ತದೆ. ಈ ಎಲ್ಲ ಎಕ್ಸ್‌ಚೇಂಜ್‌ಗಳು ಮತ್ತು ವೆಬ್‌ಸೈಟ್‌ಗಳ ಸರ್ವರ್‌ಗಳು ವಿದೇಶದಲ್ಲಿರುವುದರಿಂದ ಇಂಟರ್‌ಪೋಲ್‌ನ ನೆರವು ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಯುಎಸ್, ಚೀನಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಉಕ್ರೇನ್ ಮುಂತಾದ ದೇಶಗಳಲ್ಲಿ ಗೇಮಿಂಗ್ ಪೋರ್ಟಲ್‌ಗಳು, ಅಂತರಾಷ್ಟ್ರೀಯ ವೆಬ್‌ಸೈಟ್‌ಗಳು ಮತ್ತು ಕ್ರಿಪ್ಟೋ ಎಕ್ಸ್‌ಚೇಂಜ್ ಸರ್ವರ್‌ಗಳ ಹ್ಯಾಕಿಂಗ್ ರೈಟ್ಸ್ ಹಕ್ಕುಗಳು ಸದ್ಯ ತನಿಖೆಯ ವಿಷಯವಾಗಿದೆ.

ಸಿಟಿ ಪೊಲೀಸರ ನಂತರ ಬಿಟ್ ಕಾಯಿನ್ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಶ್ರೀಕೃಷ್ಣನ ನೆಟ್ ವರ್ಕ್ ಪತ್ತೆ ಹಚ್ಚಲು ಇಂಟರ್ ಪೋಲ್ ನೆರವು ಕೇಳುತ್ತಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ, ತಾನು ಇಟಲಿ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳಲ್ಲಿ ನಡೆದಿರುವ ಹ್ಯಾಕಿಂಗ್ ಕೇಸ್ ಗಳಲ್ಲಿ ಭಾಗಿಯಾಗಿರುವುದಾಗಿ ಶ್ರೀಕಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಬಿಟ್ ಕಾಯಿನ್ ಆರೋಪಿ ಶ್ರೀಕಿ, ಟೆಂಡರ್ ಬಿಡ್‌ಗಳನ್ನು ಡೌನ್‌ಲೋಡ್ ಮಾಡಿದ್ದಾನೆ, ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳು, ಬಿಟ್‌ ಕ್ಲಬ್‌ಗಳನ್ನು ಹ್ಯಾಕ್ ಮಾಡಿ ಡೇಟಾ ಕದ್ದು ಡಂಪಿಂಗ್ ಮಾಡಿದ್ದಾನೆ. ಡಾರ್ಕ್‌ನೆಟ್ ಮಾರುಕಟ್ಟೆ ವೆಬ್‌ಸೈಟ್‌ನಲ್ಲಿ ಡ್ರಗ್ಸ್ ಖರೀದಿಸಿ ಭಾರತದಲ್ಲಿನ ಕೋಲ್ಡ್ ವ್ಯಾಲೆಟ್‌ಗಳಿಂದ ಯುರೋಪ್‌ಗೆ 80,000 ಯುರೋಗಳನ್ನು ಸಾಗಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿ ಶ್ರೀಕಿ ಪೊಲೀಸರ ಬಳಿ ನೀಡಿರುವ ಹೇಳಿಕೆ ಕೋರ್ಟ್ ಗೆ ಸಾಕ್ಷ್ಯವಾಗಲು ಸಾಧ್ಯವಿಲ್ಲ, ಆತನ ಹೇಳಿಕೆಯಲ್ಲಿ ಅಸಂಬದ್ಧವಿದ್ದು, ಅದರ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆ ಮೂಡುತ್ತದೆ.

ಹಣಕ್ಕೆ ಆಸೆ ಪಡದೆ ಸ್ನೇಹಿತರಿಗೆ ಸಹಾಯ ಮಾಡುವ ಸಲುವಾಗಿ ಕಾಲೇಜಿನ ಪೋರ್ಟಲ್ ಹ್ಯಾಕ್ ಮಾಡಿ, ಸ್ನೇಹಿತರಿಗೆ ಹಾಜರಾತಿ ಮತ್ತು ಅಂಕ ನೀಡಿದ್ದಾಗಿ ಹೇಳಿದ್ದಾನೆ, ಮತ್ತೆ ಪ್ರತಿ ಸಬ್ಜೆಕ್ಟ್ ಗೆ 30 ಸಾವಿರ ರೂಪಾಯಿಯಂತೆ ಒಟ್ಟು 500 ವಿಷಯಗಳಲ್ಲಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿಸಿ, ಅದರಿಂದ ಒಂದೂವರೆ ಕೋಟಿ ರು. ಹಣ ಗಳಿಸಿದ್ದಾಗಿ ತಿಳಿಸಿದ್ದಾನೆ.

ವಾಲಿದ್ ನನ್ನು ಬಂಧಿಸಿ ನೆದರ್ ಲ್ಯಾಂಡ್ಸ್ ನಲ್ಲಿರಿಸಲಾಗಿದೆ, ಭಾರತದಲ್ಲಿನ ಕೋಲ್ಡ್ ವಾಲೆಟ್ ನಿಂದ  80 ಸಾವಿರ ಯುರೋಗಳನ್ನು ಯುರೋಪ್ ಗೆ ಶಿಫ್ಟ್ ಮಾಡಿದ್ದ ಬಗ್ಗೆ ಸ್ನೇಹಿತರೊಂದಿಗೆ ಸ್ಕೈಪ್ ಚಾಟ್ ನಲ್ಲಿದೆ ಎಂದು ಹೇಳಿದ್ದಾನೆ. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಶ್ರೀಕೃಷ್ಣ ತನಗೆ ಭದ್ರತೆ ಕೇಳಿಲ್ಲ ಎಂದು ಹೇಳಿರುವ ಮೂಲಗಳು ಆತನ ಮೇಲೆ ತೀವ್ರಾ ನಿಗಾ ವಹಿಸಲಾಗಿದೆ ಎಂದು ತಿಳಿಸಿವೆ.

ದೇಶದಲ್ಲಿ ಕ್ರಿಪ್ಟೋಕರೆನ್ಸಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬುದು ಈಗ ಗೊತ್ತಾಗಿದೆ. ಆದರೆ ನಿಯಂತ್ರಣದ ಅವಶ್ಯಕತೆಯಿದೆ ಎಂದು ಸಂಸತ್ ಸದಸ್ಯರು (ಸಂಸದರು) ಸೋಮವಾರ ಸಂಸತ್ ಸಮಿತಿ ಸಭೆಯಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪೂರ್ಣ ಪುಟದ ಕ್ರಿಪ್ಟೋ ಜಾಹೀರಾತುಗಳನ್ನು ನೀಡುತ್ತಿರುವಾಗ, ಹೂಡಿಕೆದಾರರ ಹಣದ ಭದ್ರತೆಯು ಎಲ್ಲ ಸದಸ್ಯರಿಗೆ ಅತ್ಯಂತ ಗಂಭೀರವಾದ ಕಾಳಜಿ ವಿಷಯವಾಗಿದೆ ಎಂದು ಸಂಸದರು ಹೇಳಿದ್ದಾರೆ.  ಕ್ರಿಪ್ಟೋಕರೆನ್ಸಿಯನ್ನು ನಿಯಂತ್ರಿಸಲು ನಿಯಂತ್ರಕ ಕಾರ್ಯ ವಿಧಾನವನ್ನು ಜಾರಿಗೆ ತರಬೇಕು ಎಂಬ ಒಮ್ಮತವಿದ್ದರೂ ಉದ್ಯಮ ಸಂಘಗಳು ಮತ್ತು ಮಧ್ಯಸ್ಥಗಾರರಿಗೆ ನಿಯಂತ್ರಕ ಯಾರಾಗಿರಬೇಕು ಎಂಬುದರ ಕುರಿತು ಸ್ಪಷ್ಟವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com