ಟ್ರೇಡಿಂಗ್ ಸೋಗಿನಲ್ಲಿ ಹಣ ಹೂಡಿಕೆ ಆಮಿಷ: ಸೈಬರ್ ಖದೀಮರಿಂದ ಸಾರ್ವಜನಿಕರಿಗೆ ವಂಚನೆ

ಟ್ರೇಡಿಂಗ್ ಸೋಗಿನಲ್ಲಿ ಹಣ ಹೂಡಿಕೆ ಆಮಿಷವೊಡ್ಡಿ ವಂಚಿಸಿರುವ ಸೈಬರ್​ ಖದೀಮರು ಸಾರ್ವಜನಿಕರಿಂದ ಲಕ್ಷಾಂತರ ರೂ. ದೋಚಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಟ್ರೇಡಿಂಗ್ ಸೋಗಿನಲ್ಲಿ ಹಣ ಹೂಡಿಕೆ ಆಮಿಷವೊಡ್ಡಿ ವಂಚಿಸಿರುವ ಸೈಬರ್​ ಖದೀಮರು ಸಾರ್ವಜನಿಕರಿಂದ ಲಕ್ಷಾಂತರ ರೂ. ದೋಚಿದ್ದಾರೆ.

ಈ ಸಂಬಂಧ ನಗರದ ಪಶ್ಚಿಮ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಮೊಬೈಲ್​ಗೆ ಮೇಸೆಜ್ ಕಳುಹಿಸಿ ಸಾರ್ವಜನಿಕರಿಗೆ ಗಾಳ ಹಾಕುತ್ತಿದ್ದಾರೆ. ನಾಗರಭಾವಿ ನಿವಾಸಿ ರಮೇಶ್ ಎಂಬುವವರಿಗೆ ಮೇಸೆಜ್ ಕಳುಹಿಸಿ ಟ್ರೇಡಿಂಗ್ ವ್ಯವಹಾರಕ್ಕೆ ಹಣ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ್ದಾರೆ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಿದ್ರೆ, ಡಾಲರ್ ರೂಪದಲ್ಲಿ ಹೆಚ್ಚು ಹಣ ಗಳಿಸಬಹುದೆಂದು ಹೇಳಿದ್ದಾರೆ.

ಮೊಬೈಲ್​ಗೆ ಲಿಂಕ್ ಕಳಿಸಿ ಎಂದು ಹೇಳಿ ಹಂತ ಹಂತವಾಗಿ 2.87 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದಾರೆ. ಬಳಿಕ ಲಾಭಾಂಶ ಹಾಗೂ ಹೂಡಿಕೆ ಹಣ ಕೊಡದೇ ಆ್ಯಪ್ ಸ್ಥಗಿತಗೊಳಿಸಿ ವಂಚಿಸಿದ್ದಾರೆ.

ಇದೇ ರೀತಿ ಗೋಲ್ಡ್ ಟ್ರೇಡಿಂಗ್​ನಲ್ಲಿ ಹಣ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ, ವಿಜಯನಗರದ ಹಾಗೂ ಕೆಂಗೇರಿಯ ನಿವಾಸಿಗೆ ವಂಚಿಸಿದ್ದಾರೆ. ಇಬ್ಬರಿಂದ ಒಟ್ಟು 27 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ಪಶ್ಚಿಮ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com