ಜಿಎಸ್ ಟಿ ದರಗಳ ಬಗ್ಗೆ ನವೆಂಬರ್ ಅಂತ್ಯಕ್ಕೆ ಸಿಎಂ ಬೊಮ್ಮಾಯಿ ನೇತೃತ್ವದ ಸಚಿವರ ಗುಂಪಿನಿಂದ ಸಲಹೆ

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯನ್ನು ತರ್ಕಬದ್ಧಗೊಳಿಸುವಿಕೆ ಬಗ್ಗೆ ಸಚಿವರ ಗುಂಪಿನ(ಜಿಒಎಮ್)ಎರಡನೇ ಸಭೆ ನಡೆದಿದ್ದು ಕರ್ನಾಟಕದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.
ಸರಕು ಮತ್ತು ಸೇವಾ ತೆರಿಗೆ ಸಂಬಂಧಪಟ್ಟಂತೆ ನಿನ್ನೆ ಬೆಂಗಳೂರಿನಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸರಕು ಮತ್ತು ಸೇವಾ ತೆರಿಗೆ ಸಂಬಂಧಪಟ್ಟಂತೆ ನಿನ್ನೆ ಬೆಂಗಳೂರಿನಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯನ್ನು ತರ್ಕಬದ್ಧಗೊಳಿಸುವಿಕೆ ಬಗ್ಗೆ ಸಚಿವರ ಗುಂಪಿನ(ಜಿಒಎಮ್)ಎರಡನೇ ಸಭೆ ನಡೆದಿದ್ದು ಕರ್ನಾಟಕದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು. ಟ್ಯಾಕ್ಸ್ ಸ್ಲ್ಯಾಬ್ಸ್ ಗಳನ್ನು ಸೇರಿಸುವುದರಿಂದ ಹಿಡಿದು ತೆರಿಗೆಯನ್ನು ಸರಳೀಕರಣಗೊಳಿಸುವುದು, ರಾಜ್ಯಗಳಿಗೆ ಕೇಂದ್ರಗಳಿಂದ ಬರುವ ಪರಿಹಾರಗಳ ಮುಂದುವರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. 

ಸರಕು ಮತ್ತು ಸೇವಾ ತೆರಿಗೆ(GST) ದೇಶದಲ್ಲಿ ಜಾರಿಗೆ ಬಂದು ಮುಂದಿನ ವರ್ಷ ಜುಲೈಗೆ 5 ವರ್ಷಗಳಾಗುತ್ತಿದೆ. ತೆರಿಗೆ ನಷ್ಟಕ್ಕೆ ರಾಜ್ಯಗಳಿಗೆ ಕೇಂದ್ರದಿಂದ ಬರಬೇಕಾದ ಪರಿಹಾರ ಕೂಡ ಕೊನೆಯಾಗಲಿದೆ. ಈ ಸಂದರ್ಭದಲ್ಲಿ ರಾಜ್ಯಗಳ ಸಚಿವರ ಗುಂಪು ನೀಡುವ ಶಿಫಾರಸುಗಳು ಮುಖ್ಯವಾಗುತ್ತದೆ. ಆದರೆ ಈ ಬಗ್ಗೆ ತಿಂಗಳಾಂತ್ಯದಲ್ಲಿ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿಯಷ್ಟೇ ಸ್ಪಷ್ಟತೆ ಸಿಗಲಿದೆ. ಪ್ರಸ್ತಾವನೆಯನ್ನು ಜಿಎಸ್ ಟಿ ಮಂಡಳಿಗೆ ಕಳುಹಿಸಲಾಗುತ್ತದೆ, ಅಲ್ಲಿ ಅಂತಿಮ ನಿರ್ಧಾರವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ ನವೆಂಬರ್ 12ರಂದು ಸಭೆಯನ್ನು ವರ್ಚುವಲ್ ಆಗಿ ನಡೆಸಲಾಗಿತ್ತು. ನಿನ್ನೆ ನಡೆದ ಸಭೆಯಲ್ಲಿ ಭೌತಿಕವಾಗಿ ಗೋವಾ, ಬಿಹಾರ, ರಾಜಸ್ತಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೇರಳ ರಾಜ್ಯಗಳ ಸಚಿವರು ಭಾಗಿಯಾಗಿದ್ದರು.

ರಾಜ್ಯದಲ್ಲಿ ಬೊಮ್ಮಾಯಿ ಅಧ್ಯಕ್ಷರಾಗಿ ತೆರಿಗೆ ವ್ಯವಸ್ಥೆಯನ್ನು ಪುನರ್ರಚಿಸಲು ಜಿಎಸ್ ಚಿ ಕೌನ್ಸಿಲ್ ಸೆಪ್ಟೆಂಬರ್ 24, 2021 ರಂದು ಸಚಿವರ ಗುಂಪನ್ನು ರಚಿಸಿತ್ತು. ಅದರ ಶಿಫಾರಸನ್ನು ನೀಡಲು ಎರಡು ತಿಂಗಳ ಗಡುವನ್ನು ನಿಗದಿಪಡಿಸಿತ್ತು. ವ್ಯಾಪಾರ ಮತ್ತು ವಾಣಿಜ್ಯ ವಲಯವು ಜಿಎಸ್‌ಟಿಯನ್ನು ಸರಳಗೊಳಿಸುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರ ಮೇಲೆ ಗಮನ ಹರಿಸಿದೆ. ಬೊಮ್ಮಾಯಿ ಅವರು ಹಿಂದೆ ಗೃಹ ಸಚಿವರಾಗಿದ್ದಾಗ ಜಿಎಸ್ ಟಿಗೆ ಸಂಬಂಧಪಟ್ಟ ಸಚಿವರ ಗುಂಪಿನ ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com