2022 ರ ಜನವರಿ-ಫೆಬ್ರವರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

ಹಾವೇರಿಯಲ್ಲಿ ನಿಗದಿಯಾಗಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2022 ರ ಜನವರಿ-ಫೆಬ್ರವರಿಯಲ್ಲಿ  ಆಯೋಜನೆ ಮಾಡಲಾಗುತ್ತದೆ. 
ಕನ್ನಡ ಸಾಹಿತ್ಯ ಸಮ್ಮೇಳನ (ಸಂಗ್ರಹ ಚಿತ್ರ)
ಕನ್ನಡ ಸಾಹಿತ್ಯ ಸಮ್ಮೇಳನ (ಸಂಗ್ರಹ ಚಿತ್ರ)

ಹಾವೇರಿ: ಹಾವೇರಿಯಲ್ಲಿ ನಿಗದಿಯಾಗಿ ಮುಂದೂಡಲ್ಪಟ್ಟಿದ್ದ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2022 ರ ಜನವರಿ-ಫೆಬ್ರವರಿಯಲ್ಲಿ  ಆಯೋಜನೆ ಮಾಡಲಾಗುತ್ತದೆ. 

ಸಮ್ಮೇಳನವನ್ನು ಆಯೋಜನೆ ಮಾಡುವುದಕ್ಕೆ ಯಾವುದೇ ಆರ್ಥಿಕ ಮುಗ್ಗಟ್ಟು ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರದಿಂದ ಬಜೆಟ್ ನ್ನು ನಿಗದಿಪಡಿಸಿಲ್ಲ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದಕ್ಕೆ ನಿಧಿಯನ್ನು ನೀಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಡಳಿತ ಹಾಗೂ ಪರಿಷತ್ ಸಮ್ಮೇಳನವನ್ನು ಆಯೋಜನೆ ಮಾಡುವುದರ ಬಗ್ಗೆ ಗೊಂದಲದಲ್ಲಿವೆ. 

ಸಮ್ಮೇಳನ ಫೆ.26-28 ರ ವರೆಗೆ ನಿಗದಿಯಾಗಿತ್ತು ಇದಕ್ಕಾಗಿ ಜಾಗವನ್ನೂ ಅಂತಿಮಗೊಳಿಸಿ ಪ್ರಕ್ರಿಯೆಗಳನ್ನೂ ಪ್ರಾರಂಭಿಸಲಾಗಿತ್ತು. ಫೆಬ್ರವರಿ ಮೊದಲ ವಾರದಲ್ಲಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕೋವಿಡ್-19 ನಿಯಮಗಳು ಹಾಗೂ ತಯಾರಿಯ ಕೊರತೆಯ ಕಾರಣದಿಂದಾಗಿ ಸಮ್ಮೇಳನವನ್ನು ಮುಂದೂಡುತ್ತಿರುವುದಾಗಿ ಘೋಷಿಸಿದ್ದರು. 

ಸಮ್ಮೇಳನ ಮುಂದೂಡಲಾಗುತ್ತಿದ್ದಂತೆಯೇ ಕೋವಿಡ್-19 ಎರಡನೇ ಅಲೆ ಎದುರಾಗಿ ತೀವ್ರ ಜೀವ ಹಾನಿಯಾಗಿತ್ತು. ಇನ್ನು ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಘೋಷಣೆಯಾಗಿ ಭಾನುವಾರ ಮುಕ್ತಾಯಗೊಂಡಿದೆ. ಪರಿಷತ್ ನ ಸದಸ್ಯರು ಚುನಾವಣೆಯಲ್ಲಿ ಮಗ್ನರಾಗಿದ್ದರಿಂದ ಸಮ್ಮೇಳನದ ಬಗ್ಗೆ ಹೆಚ್ಚು ಗಮನ ಹರಿಸಲಾಗಿರಲಿಲ್ಲ.

ಈಗ ಕೆಲವು ತಿಂಗಳಿನಿಂದ ಕೋವಿಡ್-19 ಪ್ರಕರಣಗಳು ನಿಯಂತ್ರಣದಲ್ಲಿದ್ದು, ಸಮ್ಮೇಳನ ಆಯೋಜಿಸುವುದಕ್ಕೆ ಇದು ಸೂಕ್ತ ಸಮಯವಾಗಿದೆ. ಸಮ್ಮೇಳನ ಆಯೋಜನೆಗೆ ಉಂಟಾಗುತ್ತಿರುವ ವಿಳಂಬ ಕನ್ನಡ ಸಾಹಿತ್ಯ ಪ್ರೇಮಿಗಳಲ್ಲಿ ಅಸಮಾಧಾನ ಉಂಟುಮಾಡಿದೆ. 

ಮೂಲಗಳ ಪ್ರಕಾರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೆಚ್ಚು ಅರ್ಥಪೂರ್ಣ ರೀತಿಯಲ್ಲಿ ಆಯೋಜನೆ ಮಾಡುವುದಕ್ಕೆ ಸಿಎಂ ಬೊಮ್ಮಾಯಿ ಉತ್ಸುಕರಾಗಿದ್ದಾರೆ. ಮೂರು ದಿನಗಳ ಸಮ್ಮೇಳನ 2022 ರ ಜನವರಿ ಅಥವಾ ಫೆಬ್ರವರಿಯ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಆದರೆ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಂತಿಮ ದಿನಾಂಕವನ್ನು ಘೋಷಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com