ಜಿಮ್ ತರಬೇತುದಾರರಿಗೆ ಮಣಿಪಾಲ ಆಸ್ಪತ್ರೆಯಿಂದ ಸಿಪಿಆರ್ ಕಾರ್ಯಾಗಾರ

ಯುವಕರಲ್ಲಿ ಹೃದಯಸ್ತಂಭನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಣಿಪಾಲ ಆಸ್ಪತ್ರೆ ಜಿಮ್ ತರಬೇತುದಾರರಿಗೆ ಸಿಪಿಆರ್ ಕಾರ್ಯಗಾರವನ್ನು ಆಯೋಜನೆ ಮಾಡಿದೆ.
ಜಿಮ್ (ಸಂಗ್ರಹ ಚಿತ್ರ)
ಜಿಮ್ (ಸಂಗ್ರಹ ಚಿತ್ರ)

ಬೆಂಗಳೂರು: ಯುವಕರಲ್ಲಿ ಹೃದಯಸ್ತಂಭನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಣಿಪಾಲ ಆಸ್ಪತ್ರೆ ಜಿಮ್ ತರಬೇತುದಾರರಿಗೆ ಸಿಪಿಆರ್ ಕಾರ್ಯಗಾರವನ್ನು ಆಯೋಜನೆ ಮಾಡಿದೆ.

ಹೃದಯ ಮತ್ತು ಶ್ವಾಸಕೋಶ ಪ್ರಚೋದಕ (ಸಿಪಿಆರ್) ತುರ್ತು ಪರಿಸ್ಥಿತಿಗಳಲ್ಲಿ, ಹೃದಯ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಹೃದಯ ಬಡಿತ ನಿಂತಲ್ಲಿ ಇದು  ಜೀವ ಉಳಿಸುವ ಪ್ರಥಮ ಚಿಕಿತ್ಸೆಯಾಗಿದೆ. 

"ಹೃದಯಸ್ತಂಭನ ಉಂಟಾದಾಗ ಆ ವ್ಯಕ್ತಿಯ ಜೀವ ಉಳಿಸುವುದು ಸಾಧ್ಯವಾಗುದು ಪಕ್ಕದಲ್ಲಿರುವವರಿಗೆ ಮಾತ್ರ, ಆದ್ದರಿಂದ ಸಾಧ್ಯವಾದಷ್ಟೂ ಮಂದಿಗೆ ಈ ಮೂಲಭೂತ ಲೈಫ್ ಸಪೋರ್ಟ್ ತರಬೇತಿ ನೀಡಬೇಕು ಎನ್ನುತ್ತಾರೆ ವರ್ತೂರಿನ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ತಜ್ಞವೈದ್ಯ ಡಾ. ನವೀನ್ ಚಂದ್ರ. 

ಡಾ.ನವೀನ್ ಚಂದ್ರ ಅವರು ಡಾ. ರಾಮ್ ಕುಮಾರ್ ಜಯಪ್ರಕಾಶ್, ಕನ್ಸಲ್ಟೆಂಟ್, ಕ್ರಿಟಿಕಲ್ ಕೇರ್ ಇವರೊಂದಿಗೆ ತರಬೇತಿ ಕಾರ್ಯಗಾರವನ್ನು ನಡೆಸಲಿದ್ದಾರೆ. 

ತೀವ್ರ ವರ್ಕ್ ಔಟ್ ನಂತದಲ್ಲಿ ಪುನೀತ್ ರಾಜ್ ಕುಮಾರ್ ಗೆ ಹೃದಯಸ್ತಂಭನವಾಗಿತ್ತು ಎಂದು ಹೇಳಲಾಗುತ್ತಿತ್ತು. ಈ ಘಟನೆಯ ಬಳಿಕ ಜಿಮ್ ಟ್ರೈನರ್ ಗಳಿಗೆ ಸಿಪಿಆರ್ ಜ್ಞಾನದ ಅಗತ್ಯವಿರಬೇಕು ಹಾಗೂ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಬಳಕೆ ತಿಳಿದಿರಬೇಕೆಂಬ ಜಾಗೃತಿ ಮೂಡಲಾರಂಭಿಸಿದೆ.

ಪಶ್ಚಿಮ ದೇಶಗಳಲ್ಲಿ ಬಹುತೇಕ ಮಂದಿಗೆ ಸಿಪಿಆರ್ ಹೇಗೆ ನೀಡಬೇಕೆಂಬ ಬಗ್ಗೆ ಅರಿವಿದ್ದು ಹಲವಾರು ಮಂದಿ ಜೀವ ಉಳಿಸುತ್ತಾರೆ ಎಂದು ಡಾ.ನವೀನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com