ಕರ್ನಾಟಕ ಹೈಕೋರ್ಟ್ ವಿಡಿಯೋ ವಿಚಾರಣೆ ವೇಳೆ ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿ: ನೊಟೀಸ್ ಜಾರಿ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸೆಕ್ಸ್ ಸಿ.ಡಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ವೇಳೆ ವ್ಯಕ್ತಿಯೋರ್ವ ಅರೆನಗ್ನವಾಗಿ ಕಾಣಿಸಿಕೊಂಡಿದ್ದ ಎಂದು ಹಿರಿಯ ಅಡ್ವೊಕೇಟ್ ಇಂದಿರಾ ಜೈಸಿಂಗ್ ಆರೋಪಿಸಿದ್ದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ನ ಎಲೆಕ್ಟ್ರಾನಿಕ್ ಡೇಟಾ ಮರಳಿ ಪಡೆಯುವುದಕ್ಕೆ ಆದೇಶ ನೀಡಿದೆ. 
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸೆಕ್ಸ್ ಸಿ.ಡಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ವೇಳೆ ವ್ಯಕ್ತಿಯೋರ್ವ ಅರೆನಗ್ನವಾಗಿ ಕಾಣಿಸಿಕೊಂಡಿದ್ದ ಎಂದು ಹಿರಿಯ ಅಡ್ವೊಕೇಟ್ ಇಂದಿರಾ ಜೈಸಿಂಗ್ ಆರೋಪಿಸಿದ್ದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ನ ಎಲೆಕ್ಟ್ರಾನಿಕ್ ಡೇಟಾ ಮರಳಿ ಪಡೆಯುವುದಕ್ಕೆ ಆದೇಶ ನೀಡಿದೆ. 

ಆನ್ ಲೈನ್ ಕೋರ್ಟ್ ಕಲಾಪದ ವೇಳೆ ಸುಮಾರು 20 ನಿಮಿಷಗಳ ಕಾಲ ವ್ಯಕ್ತಿಯೋರ್ವ ಅರೆನಗ್ನವಾಗಿ ಕಾಣಿಸಿಕೊಂಡಿದ್ದ ಎಂದು  ಇಂದಿರಾ ಜೈಸಿಂಗ್ ಆರೋಪಿಸಿದ್ದರು. 

ವಿಚಾರಣೆಗೆ 80 ಕ್ಕೂ ಹೆಚ್ಚು ಮಂದಿ ಆನ್ ಲೈನ್ ಮೂಲಕ ಹಾಜರಾಗಿದ್ದರು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿಯನ್ನು ಪತ್ತೆ ಮಾಡುವುದಕ್ಕಾಗಿ ಕೋರ್ಟ್ ಆದೇಶ ನೀಡಿದೆ. 
 
ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾ. ಸಚಿನ್ ಶಂಕರ್ ಮಗದುಮ್ ಅವರು ವಿಚಾರಣೆ ನಡೆಸುತ್ತಿದ್ದ ವೇಳೆ ಅರೆನಗ್ನನಾಗಿ ಕಾಣಿಸಿಕೊಂಡಿದ್ದ ವ್ಯಕ್ತಿ ಸ್ನಾನ ಮಾಡುತ್ತಿದ್ದ ಸ್ಥಿತಿಯಲ್ಲಿ ಲಾಗ್ ಇನ್ ಆಗಿದ್ದ ಎಂದು ಪಿಐಎಲ್ ವಿಚಾರಣೆ ಪ್ರಕರಣದಲ್ಲಿ ಸಂತ್ರಸ್ತೆಯ ಪರ ವಾದ ಮಂಡಿಸುತ್ತಿದ್ದ ಹಿರಿಯ ಅಡ್ವೊಕೇಟ್ ಹೇಳಿದ್ದಾರೆ. 

ಉದ್ದೇಶಪೂರ್ವಕವಾಗಿ ಈ ವ್ಯಕ್ತಿ ಈ ರೀತಿ ಮಾಡಿದ್ದಾನೆ. ಇನ್ನೆಂದಿಗೂ ಈ ರೀತಿಯಾಗಬಾರದು. ಆತನ ನಡವಳಿಕೆ ನ್ಯಾಯಾಂಗ ನಿಂದನೆ ಅಡಿಯಲ್ಲಿ ಬರುತ್ತದೆ. ಝೂಮ್ ಆಪ್ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದ ವ್ಯಕ್ತಿಯ ಹೆಸರು ಶ್ರೀಧರ್ ಭಟ್ ಎಸ್ ಡಿಎಂ ಸಿ ಉಜಿರೆ ಎಂದು ತೋರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com