ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ರದ್ಧುಗೊಳಿಸಿದ ಕರ್ನಾಟಕ ಹೈಕೋರ್ಟ್

ಮೂರುವರ್ಷಗಳ ಹಿಂದೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದ 62 ವರ್ಷದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ಪೋಕ್ಸೋ ಕಾಯ್ದೆ ಯಡಿ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.  
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಮೂರುವರ್ಷಗಳ ಹಿಂದೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದ 62 ವರ್ಷದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ಪೋಕ್ಸೋ ಕಾಯ್ದೆ ಯಡಿ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.  

ಟ್ರಯಲ್​ ಕೋರ್ಟ್​ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಆರೋಪಿ ವೆಂಕಟೇಶಪ್ಪ (62) ಕ್ರಿ​ ಅಪೀಲ್​ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್​ ನ್ಯಾಯಮೂರ್ತಿ ಜಿ.ನರೇಂದರ್​ ನೇತೃತ್ವದ ಪೀಠ, ಮರಣದಂಡನೆ ರದ್ದುಗೊಳಿಸಿ, ಪ್ರಕರಣವನ್ನು ಹೊಸದಾಗಿ ತನಿಖೆ ಮಾಡಬೇಕು. ಆರು ತಿಂಗಳ ಒಳಗೆ ತನಿಖೆ ಮುಗಿಯಬೇಕು ಎಂದು ಆದೇಶ ನೀಡಿದೆ.  

ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿಗಳು ಆರೋಪಿ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಈ ಚಾರ್ಜ್​ಶೀಟ್​ ಜತೆಗೆ ಡಿಎನ್​ಎ ಪರೀಕ್ಷೆ ವರದಿಯನ್ನೂ ಟ್ರಯಲ್​ ಕೋರ್ಟ್​ಗೆ ಸಲ್ಲಿಸಿದ್ದರು. ಅದನ್ನೇ ಈಗ ಹೈಕೋರ್ಟ್​ ಮರುಪರಿಶೀಲನೆ ಮಾಡಿದೆ.

ಈ ಡಿಎನ್​ಎ ಪರೀಕ್ಷೆ ವರದಿಯ ಅಷ್ಟೊಂದು ನಂಬಿಕಾರ್ಹವಲ್ಲ ಎಂದು ಹೈಕೋರ್ಟ್​ ಹೇಳಿದೆ. ಅಲ್ಲದೆ, ರಕ್ತ ಮತ್ತು ವೀರ್ಯದ ಪರೀಕ್ಷೆಯನ್ನು ಹೊಸದಾಗಿ ಮಾಡಬೇಕು ಎಂದು ಆರೋಪಿ ಟ್ರಯಲ್​ ಕೋರ್ಟ್​ಗೆ ಸಲ್ಲಿಸಿದ್ದ ಮನವಿಯನ್ನೂ ಆ ನ್ಯಾಯಾಲಯ ವಜಾಗೊಳಿಸಿದ್ದರ ಬಗ್ಗೆ ಹೈಕೋರ್ಟ್​ ಆಕ್ಷೇಪ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com