'ಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟಿವ್' ಪ್ರಸಾರ ಮಾಡದಂತೆ ನೆಟ್ ಫ್ಲಿಕ್ಸ್ ಗೆ ಹೈಕೋರ್ಟ್ ಸೂಚನೆ

ಮರ್ಡರಡ್ ಮದರ್ ಎಂಬ ಶೀರ್ಷಿಕೆಯ 'ಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟಿವ್' ಸರಣಿಯ ಮೊದಲ ಸರಣಿಯನ್ನು ನಿರ್ಬಂಧಿಸುವಂತೆ ಕರ್ನಾಟಕ ಹೈಕೋರ್ಟ್ ನೆಟ್ ಫ್ಲಿಕ್ಸ್ ಗೆ ಸೂಚಿಸಿದೆ.
'ಕ್ರೈಂ ಸ್ಟೋರೀಸ್: ಇಂಡಿಯಾ ಡಿಟೆಕ್ಟಿವ್'
'ಕ್ರೈಂ ಸ್ಟೋರೀಸ್: ಇಂಡಿಯಾ ಡಿಟೆಕ್ಟಿವ್'

ಬೆಂಗಳೂರು: ಮರ್ಡರಡ್ ಮದರ್ ಎಂಬ ಶೀರ್ಷಿಕೆಯ 'ಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟಿವ್' ಸರಣಿಯ ಮೊದಲ ಸರಣಿಯನ್ನು ನಿರ್ಬಂಧಿಸುವಂತೆ ಕರ್ನಾಟಕ ಹೈಕೋರ್ಟ್ ನೆಟ್ ಫ್ಲಿಕ್ಸ್ ಗೆ ಸೂಚಿಸಿದೆ.

ಸುಬ್ಬಣ್ಣಪಾಳ್ಯ ನಿವಾಸಿ ಎಸ್ ಶ್ರೀಧರ್ ರಾವ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ನೆಟ್‌ಫ್ಲಿಕ್ಸ್ ಎಂಟರ್‌ಟೈನ್‌ಮೆಂಟ್ ಸರ್ವಿಸಸ್ ಇಂಡಿಯಾ ಮತ್ತು ಮಿನ್ನೋ ಫಿಲ್ಮ್ಸ್ ಲಿಮಿಟೆಡ್‌ಗೆ ನೋಟಿಸ್ ಜಾರಿಗೊಳಿಸಿದ್ದು ಎಪಿಸೋಡ್ ಪ್ರಸಾರ ಮಾಡದಂತೆ ಮಧ್ಯಂತರ ಆದೇಶ ನೀಡಿದ್ದಾರೆ.

"ಎ ಮರ್ಡರ್ಡ್ ಮದರ್" ಎಪಿಸೋಡ್ ಅರ್ಜಿದಾರರ ಮತ್ತು ಇನ್ನೊಬ್ಬರ ವಿಚಾರಣೆಯ ದೃಶ್ಯಗಳನ್ನು ಒಳಗೊಂಡಿದೆ. ತನಿಖೆಯ ಸಮಯದಲ್ಲಿ ದಾಖಲಾದ ಸಂದರ್ಶನ ಮತ್ತು ಒಂದು ತಪ್ಪೊಪ್ಪಿಗೆಯ ರೆಕಾರ್ಡ್ ಮಾಡಿದ ವೀಡಿಯೊವನ್ನು ಒಳಗೊಂಡಿದೆ.  ಗೌಪ್ಯತೆಯನ್ನು ಉಲ್ಲಂಘಿಸುವುದರ ಹೊರತಾಗಿ, ವಿಷಯವು ಯಾವುದೇ ಸಮರ್ಥನೆಯಿಲ್ಲದೆ, ಸಾರ್ವಜನಿಕರಿಂದ ಅಪಹಾಸ್ಯ ಮತ್ತು ಕಿರುಕುಳಕ್ಕೆ ಒಳಗಾಗುತ್ತದೆ ಎಂದು ವಕೀಲರು ವಾದಿಸಿದ್ದಾರೆ.

ಅರ್ಜಿದಾರರು ಸಿವಿಲ್ ನ್ಯಾಯಾಲಯದ ಮುಂದೆ ತಾತ್ಕಾಲಿಕ ತಡೆಯಾಜ್ಞೆಯ ಅರ್ಜಿಯೊಂದಿಗೆ ಪ್ರತಿವಾದಿಗಳ ವಿರುದ್ಧ ಮೊಕದ್ದಮೆ ಹೂಡಿದ್ದರು, ಆದರೆ ಮಧ್ಯಂತರ ಆದೇಶವನ್ನು ನೀಡುವಲ್ಲಿ ವಿಳಂಬವಾಗಿತ್ತು, ಒಟಿಟಿ ವೇದಿಕೆಯಲ್ಲಿ ಎಲ್ಲಾ ನೋಂದಾಯಿತ ಬಳಕೆದಾರರಿಗೆ ವೀಕ್ಷಣೆಗೆ ಲಭ್ಯವಿದೆ, ಇದು ಅರ್ಜಿದಾರರನ್ನು ಕಿರುಕುಳಕ್ಕೆ ದೂಡುತ್ತದೆ, ಹೀಗಾಗಿ ಪ್ರಸಾರ ನಿರ್ಬಂದಿಸುವಂತೆ ಅವರು ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com