ನಾಡಪ್ರಭು ಕೆಂಪೇಗೌಡ ಬಡಾವಣೆಯ 29 ಹಂಚಿಕೆದಾರರಿಗೆ ಬಿಡಿಎನಿಂದ ಪರ್ಯಾಯ ಸೈಟ್‌

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡು ಬೃಹತ್ ಕೊಳಚೆ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸದ್ದಿಲ್ಲದೆ ಜನರಿಗೆ ಹಂಚಿಕೆಯಾದ ನಿವೇಶನಗಳನ್ನು ಬಳಸಿಕೊಂಡಿದ್ದು,...
ನಾಡಪ್ರಭು ಕೆಂಪೇಗೌಡ ಬಡಾವಣೆ
ನಾಡಪ್ರಭು ಕೆಂಪೇಗೌಡ ಬಡಾವಣೆ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡು ಬೃಹತ್ ಕೊಳಚೆ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸದ್ದಿಲ್ಲದೆ ಜನರಿಗೆ ಹಂಚಿಕೆಯಾದ ನಿವೇಶನಗಳನ್ನು ಬಳಸಿಕೊಂಡಿದ್ದು, ಹಲವು ವರ್ಷಗಳ ನಂತರ ಬಿಡಿಎ ಅಂತಿಮವಾಗಿ ಸೈಟ್ ಮಾಲೀಕರಿಗೆ ಪರ್ಯಾಯ ನಿವೇಶನಗಳನ್ನು ನೀಡಲು ನಿರ್ಧರಿಸಿದೆ.

ಯಾವುದೇ ಅಧಿಸೂಚನೆಯೂ ಇಲ್ಲದೆ, ಚಲ್ಲಘಟ್ಟ ಮತ್ತು ಭೀಮನಕುಪ್ಪೆ ಗ್ರಾಮಗಳಲ್ಲಿ(ಬ್ಲಾಕ್ V ಮತ್ತು VI) ಬಿಡಿಎ ಒಟ್ಟು 65 ನಿವೇಶನಗಳನ್ನು ಎಸ್‌ಟಿಪಿ ನಿರ್ಮಿಸಲು ತೆಗೆದುಕೊಂಡಿತ್ತು. ಈ ಬ್ಲಾಕ್‌ಗಳಲ್ಲಿ ಈ ಹಿಂದೆ ಬೇರೆ ಬೇರೆ ಸ್ಥಳಗಳಲ್ಲಿ ಯೋಜಿಸಲಾಗಿದ್ದ ಈ ಘಟಕಗಳನ್ನು ಸ್ಥಳೀಯರ ಆಕ್ಷೇಪಣೆಯ ನಂತರ ಅಲ್ಲಿಗೆ ಸ್ಥಳಾಂತರಿಸಲಾಗಿದೆ.

ಎಸ್ ಟಿಪಿಯಿಂದಾಗಿ ನಿವೇಶನದ ಕಳೆದುಕೊಂಡವರಿಗೆ ಪರ್ಯಾಯ ಸೈಟ್‌ಗಳನ್ನು ಒದಗಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಬಿಡಿಎ ಕಾರ್ಯದರ್ಶಿ ವಿ ಆನಂದ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

"ಎಸ್‌ಟಿಪಿಯಿಂದಾಗಿ ಲೇಔಟ್‌ನ ಐದು ಮತ್ತು ಆರನೇ ಬ್ಲಾಕ್ ನಲ್ಲಿ ಒಟ್ಟು 65 ಹಂಚಿಕೆದಾರರು ತಮ್ಮ ಸೈಟ್‌ಗಳನ್ನು ಕಳೆದುಕೊಂಡಿದ್ದಾರೆ. ನಾವು ಈಗಾಗಲೇ ಸುಮಾರು ಎರಡು ತಿಂಗಳ ಹಿಂದೆ 36 ಸೈಟುಗಳನ್ನು ನೀಡಿದ್ದೇವೆ. ಉಳಿದ 29 ಸೈಟ್ ಗಳನ್ನು ಒಂದೆರಡು ದಿನಗಳಲ್ಲಿ ನೀಡಲಾಗುವುದು. ಅವರಿಗೆ ಈ ಹಿಂದೆ ನೀಡಿದ್ದ ಬ್ಲಾಕ್‌ನಲ್ಲಿಯೇ ನಿವೇಶನಗಳನ್ನು ನೀಡಲಾಗುವುದು ”ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com