ಕರ್ನಾಟಕ ಹೈಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ರಿತು ರಾಜ್ ಅವಸ್ಥಿ 

ಅಲಹಾಬಾದ್ ಹೈಕೋರ್ಟ್ ನ ಹಿರಿಯ ನ್ಯಾಯಾಧೀಶ, ಜಸ್ಟೀಸ್ ರಿತು ರಾಜ್ ಅವಸ್ತಿ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ

ಬೆಂಗಳೂರು: ಅಲಹಾಬಾದ್ ಹೈಕೋರ್ಟ್ ನ ಹಿರಿಯ ನ್ಯಾಯಾಧೀಶ, ಜಸ್ಟೀಸ್ ರಿತು ರಾಜ್ ಅವಸ್ಥಿ  ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.

ರಾಷ್ಟ್ರಪತಿಗಳು ಅಂಕಿತ ಹಾಕಿದ ನಂತರ ಕಾನೂನು ಮತ್ತು ನ್ಯಾಯ ಸಚಿವಾಲಯ ನಿನ್ನೆ ಅಧಿಸೂಚನೆ ಹೊರಡಿಸಿದೆ. 1960ರ ಜುಲೈ 3ರಂದು ಜನಿಸಿದ ಜಸ್ಟೀಸ್ ಅವಸ್ಥಿ ಕಾನೂನು ಪದವಿಯನ್ನು 1986ರಲ್ಲಿ ಲಕ್ನೊ ವಿಶ್ವವಿದ್ಯಾಲಯದಿಂದ ಮುಗಿಸಿದ್ದರು. 1987ರಲ್ಲಿ ಅಡ್ವೊಕೇಟ್ ಆಗಿ ದಾಖಲಾತಿ ಮಾಡಿಕೊಂಡ ನಂತರ ಸಿವಿಲ್, ಸರ್ವಿಸ್ ಮತ್ತು ಶಿಕ್ಷಣ ವಿಷಯಗಳಲ್ಲಿ ಅಲಹಾಬಾದ್ ಹೈಕೋರ್ಟ್ ನ ಲಕ್ನೊ ಪೀಠದ ಮೂಲಕ ವ್ಯಾಜ್ಯಗಳ ಅಭ್ಯಾಸ ನಡೆಸುತ್ತಿದ್ದರು. 

2009ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಬಡ್ತಿ ಹೊಂದುವ ಮೊದಲು ಲಕ್ನೊದಲ್ಲಿ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2010ರಲ್ಲಿ ಶಾಶ್ವತ ನ್ಯಾಯಾಧೀಶರಾದರು. ಕರ್ನಾಟಕ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ಸತೀಶ್ ಚಂದ್ರ ತೆಲಂಗಾಣ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.

ಕರ್ನಾಟಕ ಹೈಕೋರ್ಟ್‌ನ ಮತ್ತೊಬ್ಬ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ, ಕರ್ನಾಟಕ ಹೈಕೋರ್ಟ್‌ನ ಇಬ್ಬರು ಪ್ರಮುಖ ನ್ಯಾಯಾಧೀಶರನ್ನು ಮುಖ್ಯ ನ್ಯಾಯಮೂರ್ತಿಗಳಾಗಿ ಉನ್ನತೀಕರಿಸಲಾಗಿದೆ.

ಅವರ ಸುಮಾರು 10 ತಿಂಗಳ ಅಧಿಕಾರಾವಧಿಯಲ್ಲಿ, ನ್ಯಾಯಮೂರ್ತಿ ಶರ್ಮಾ ನೇತೃತ್ವದ ವಿಭಾಗೀಯ ಪೀಠವು ಕೆಲವು ಪ್ರಮುಖ ಆದೇಶಗಳನ್ನು ನೀಡಿತು. ಬಂಜರು ಸರ್ಕಾರಿ ಭೂಮಿಯಲ್ಲಿ ಮರಗಳನ್ನು ನೆಡುವುದು ಅಪರಾಧವಲ್ಲ ಎಂದು ತೀರ್ಪು ನೀಡಿದ್ದು, 'ಕಾವೇರಿ ಕರೆ' ಯೋಜನೆಯ ವಿರುದ್ಧ ಸಲ್ಲಿಸಲಾದ ಪಿಐಎಲ್ ಅನ್ನು ವಜಾಗೊಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com