ಎಸ್ಕಾಂ ಗಳಿಂದ ಯುಪಿಸಿಎಲ್ ಗೆ 2.6 ಲಕ್ಷ ಕೋಟಿ ರೂಪಾಯಿ ಬಾಕಿ: ಕಲ್ಲಿದ್ದಲು ಆಮದು ಮೇಲೆ ಪರಿಣಾಮ

ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಯುಪಿಸಿಎಲ್) ನ ಕಲ್ಲಿದ್ದಲು ಆಧಾರಿತ ಎರಡು ಘಟಕಗಳು (ತಲಾ 600 ಮೆಗಾ ವ್ಯಾಟ್ ಸಾಮರ್ಥ್ಯ) ಕಲ್ಲಿದ್ದಲು ಕೊರತೆಯಿಂದಾಗಿ ಮುಚ್ಚಿವೆ.
ವಿದ್ಯುತ್ ಪೂರೈಕೆ (ಸಂಗ್ರಹ ಚಿತ್ರ)
ವಿದ್ಯುತ್ ಪೂರೈಕೆ (ಸಂಗ್ರಹ ಚಿತ್ರ)

ಉಡುಪಿ: ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಯುಪಿಸಿಎಲ್) ನ ಕಲ್ಲಿದ್ದಲು ಆಧಾರಿತ ಎರಡು ಘಟಕಗಳು (ತಲಾ 600 ಮೆಗಾ ವ್ಯಾಟ್ ಸಾಮರ್ಥ್ಯ) ಕಲ್ಲಿದ್ದಲು ಕೊರತೆಯಿಂದಾಗಿ ಮುಚ್ಚಿವೆ. ಇತ್ತ ನಾಲ್ಕು ವಿದ್ಯುತ್ ವಿತರಣೆ ಸಂಸ್ಥೆಗಳಾದ ಎಸ್ಕಾಂಗಳು ಯುಪಿಸಿಎಲ್ ಗೆ 2,671 ಕೋಟಿ ರೂಪಾಯಿಗಳನ್ನು ಬಾಕಿ ಪಾವತಿ ಮಾಡಬೇಕಿದೆ.

ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ ಎಸ್ಕಾಂಗಳಿಗೆ ಬಾಕಿ ಇರುವ ಹಣವನ್ನು ಪಾವತಿ ಮಾಡುವಂತೆ ಸೂಚನೆ ನೀಡಿದೆ. ಹೆಸ್ಕಾಮ್ ಒಟ್ಟಾರೆ 1,385 ಕೋಟಿ ರೂಪಾಯಿಗಳ ಬಾಕಿ ಹೊಂದಿದ್ದರೆ, ಜೆಸ್ಕಾಂ 563 ಕೋಟಿ ರೂಪಾಯಿಗಳ ಬಾಕಿ ಮೊತ್ತ ಹೊಂದಿದೆ. ಮೈಸೂರಿನ ಸಿಇಎಸ್ ಸಿ 499 ಕೋಟಿ ರೂಪಾಯಿ ಹಾಗೂ ಬೆಸ್ಕಾಂ 224 ಕೋಟಿ ರೂಪಾಯಿ ಹಾಗೂ ಮೆಸ್ಕಾಮ್ 17 ಕೋಟಿ ರೂಪಾಯಿಗಳನ್ನು ಬಾಕಿ ಹೊಂದಿದೆ.

ಮೂಲಗಳ ಪ್ರಕಾರ ಸಾಕಷ್ಟು ಮಳೆಯಾಗುತ್ತಿರುವುದರ ಪರಿಣಾಮ, ಸಾಕಷ್ಟು ಪ್ರಮಾಣದಲ್ಲಿ ಜಲವಿದ್ಯುತ್ ಪೂರೈಕೆಯಾಗುತ್ತಿದ್ದು ಥರ್ಮಲ್ ವಿದ್ಯುತ್ ನತ್ತ ಅವಲಂಬನೆಯಾಗುವ ಸನ್ನಿವೇಶ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಬರಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಸರ್ಕಾರ ಆತ್ಮನಿರ್ಭರತೆಯನ್ನು ಉತ್ತೇಜಿಸುತ್ತಿದೆಯಾದರೂ ಯುಪಿಸಿಎಲ್ ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶದಲ್ಲಿರುವುದರಿಂದ ಆಮದು ಮಾಡಿಕೊಳ್ಳುವ ಕಲ್ಲಿದ್ದಲ ಮೇಲೆಯೇ ಆಧಾರಿತವಾಗಿದೆ. ಹೈ ಕ್ಯಾಲೊರಿಫಿಕ್ ಮೌಲ್ಯದ ಕಲ್ಲಿದ್ದಲನ್ನು ಆಸ್ಟ್ರೇಲಿಯಾ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾಗಳಿಂದ ಪ್ರತಿ ಟನ್ ಗೆ 185 ಡಾಲರ್ ಹಣ ನೀಡಿ ಆಮದು ಮಾಡಿಕೊಳ್ಳಲಾಗುತ್ತದೆ.

ದೇಶೀಯ ಕಲ್ಲಿದ್ದಲನ್ನು ಬಳಕೆ ಮಾಡಿದರೆ ಎಮಿಷನ್ ಮಟ್ಟ ನಿಗದಿತ ಪ್ರಮಾಣವನ್ನು ಮೀರದಂತೆ ಎಚ್ಚರ ವಹಿಸಲು ಶೇ.20 ರಷ್ಟು ಮಾತ್ರ ಬ್ಲೆಂಡ್ ಮಾಡಬೇಕಾಗುತ್ತದೆ. ಹೆಸ್ಕಾಮ್ ನ ಅತಿ ಹೆಚ್ಚಿನ ಮೊತ್ತದ ಬಾಕಿ ಯುಪಿಸಿಎಲ್ ಕಾರ್ಯಾಚಾರಣೆಗಳಿಗೆ ಅಡ್ಡಿಯಾಗಿದೆ. ಬೆಸ್ಕಾಂಗೆ ಇಲ್ಲಿಂದ ಉತ್ಪಾದನೆಯಾಗುವ ಒಟ್ಟಾರೆ ವಿದ್ಯುತ್ ನ ಶೇ.50 ರಷ್ಟು ಸಿಗುತ್ತಿದೆ. ಹೆಸ್ಕಾಂ ಶೇ.30 ರಷ್ಟು ವಿದ್ಯುತ್ ನ್ನು ಪಡೆಯುತ್ತಿದೆ. ಮೆಸ್ಕಾಮ್ ಗೆ ಹೆಚ್ಚಿನ ವಿದ್ಯುತ್ ಲಭ್ಯವಾಗುವಂತೆ ಸರ್ಕಾರ ವಿತರಣೆಯ ಯೋಜನೆಯನ್ನು ಮರುರಚನೆ ಮಾಡದೇ ಇದ್ದಲ್ಲಿ ಉಡುಪಿ ಜನತೆ ಕತ್ತಲಲ್ಲಿರಬೇಕಾಗುತ್ತದೆ ಎಂದು ಮೆಸ್ಕಾಮ್ ಹೇಳಿದೆ. ಯುಪಿ ಸಿಎಲ್ ನ ಕಾರ್ಯಕಾರಿ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಈ ಬಗ್ಗೆ ಮಾತನಾಡಿದ್ದು, ಮುಂದಿನ 15 ದಿನಗಳಲ್ಲಿ ಕಲ್ಲಿದ್ದಲನ್ನು ಆಮದು ಮಾಡಿ ಕಾರ್ಯಾಚರಣೆ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com