ಡಿಸೇಲ್ ಮೇಲಿನ ತೆರಿಗೆ ಇಳಿಸದಿದ್ದರೇ ಅನಿರ್ದಿಷ್ಟಾವಧಿ ಮಷ್ಕರ: ಲಾರಿ ಮಾಲೀಕರ ಎಚ್ಚರಿಕೆ

ಡೀಸೆಲ್‌ ಮೇಲೆ ವಿಧಿಸಿರುವ ವ್ಯಾಟ್‌ ಅನ್ನು ರಾಜ್ಯ ಸರ್ಕಾರ ಕಡಿಮೆ ಮಾಡಬೇಕು ಇಲ್ಲವಾದಲ್ಲಿ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡೀಸೆಲ್‌ ಮೇಲೆ ವಿಧಿಸಿರುವ ವ್ಯಾಟ್‌ ಅನ್ನು ರಾಜ್ಯ ಸರ್ಕಾರ ಕಡಿಮೆ ಮಾಡಬೇಕು ಇಲ್ಲವಾದಲ್ಲಿ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಡಿಸೇಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ 

ಕಳೆದ ಒಂದು ವರ್ಷದಲ್ಲಿ ಡೀಸೆಲ್ ಬೆಲೆ 26 ರೂಪಾಯಿಯಷ್ಟು ಹೆಚ್ಚಾಗಿದೆ.‌ ರಾಜ್ಯದಲ್ಲಿರುವ ಆರು ಲಕ್ಷ ಲಾರಿಗಳಲ್ಲಿ ಶೇ. 30 ರಷ್ಟು ಲಾರಿಗಳು ಶೆಡ್ ಸೇರಿವೆ. ದಿನದಿಂದ‌ ದಿನಕ್ಕೆ ಡೀಸೆಲ್‌ ಬೆಲೆ ಗಗನಕ್ಕೆ ಏರುತ್ತಾ ಶತಕ ಬಾರಿಸಿದೆ.‌‌ ಅದರೂ‌ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.‌ ಡೀಸೆಲ್‌‌ ಬೆಲೆ ಏರಿಕೆಯಾಗುತ್ತಿರುವುದರಿಂದ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ‌ ಏರಿಕೆಯಾಗಿದ್ದು ಜನ ಸಾಮಾನ್ಯರಿಗೆ ದೊಡ್ಡ ಹೊರೆಯಾಗತ್ತಿದೆ ಎಂದರು.

ವ್ಯಾಟ್‌ ಇಳಿಕೆಯಾಗದೇ ಇದ್ದರೆ ಅಕ್ಟೋಬರ್ 23 ರಂದು ಲಾರಿ‌ ಮಾಲೀಕರು ಸಭೆ ಮಾಡಿ‌ ಅನಿವಾರ್ಯವಾಗಿ ಲಾರಿ ಮುಷ್ಕರ ಮಾಡಬೇಕಾಗುತ್ತೆ.‌ ಅಷ್ಟರ ಒಳಗಡೆ ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ವ್ಯಾಟ್ ಕಡಿಮೆ‌ ಮಾಡಬೇಕು. ಇಲ್ಲವಾದಲ್ಲಿ 6 ಲಕ್ಷ ಲಾರಿಗಳು ರಸ್ತೆಗಿಳಿಯದೇ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಡೀಸಲ್ ಬೆಲೆ ಏರಿಕೆಯಿಂದ ಸಾರಿಗೆ ಉದ್ಯಮಕ್ಕೆ ಬಹಳಷ್ಟು ಹೊಡೆತ ನೀಡಿದೆ. ಅವರಲ್ಲಿ ಹಲವರು ತಮ್ಮ ಪರವಾನಗಿಯನ್ನು ಒಪ್ಪಿಸಿದ್ದಾರೆ. ನೂರಾರು ಖಾಸಗಿ ಬಸ್ ಆಪರೇಟರ್‌ಗಳು ಅರ್ಧದಷ್ಟು ಕಾರ್ಯಾಚರಣೆಯನ್ನು ಕಡಿತಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com