ಬೆಂಗಳೂರು: ನಿಜವಾದ ಇಂಧನ, ಗ್ಯಾಸ್ ಬಳಕೆದಾರರು ಯಾರೂ ಬೀದಿಗೆ ಬಂದಿಲ್ಲ, ಬೀದಿಗೆ ಬಂದಿರುವವರು ರಾಜಕಾರಣಿಗಳು ಮಾತ್ರ. ಹೀಗೆ ಕೇಂದ್ರದ ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡು ಕ್ರೀಡಾ ಸಚಿವ ನಾರಾಯಣಗೌಡ ಹೇಳಿಕೆ ನೀಡಿದರು.
ಬೆಲೆ ಏರಿಕೆ ವಿಚಾರವಾಗಿ ಒಂದು ಡ್ರಾಮಾ ನಡೆಯುತ್ತಿದೆ. ಸಮಸ್ಯೆ ಯಾರಿಗೂ ಆಗಿಲ್ಲ, ಇದು ರಾಜಕಾರಣದ ಪಿತೂರಿ. ಕಾಂಗ್ರೆಸ್ ಸರ್ಕಾರ ಇರುವಾಗ ಬೆಲೆ ಏರಿಕೆ ಆಗಿರಲಿಲ್ವಾ? ಬೆಲೆಯಲ್ಲಿ ಏರಿಳಿತ ಸಾಮಾನ್ಯ ಎಂದು ಕೆಸಿ ನಾರಾಯಣಗೌಡ ಹೇಳಿದ್ದಾರೆ.
ದೇಶದ ಮಹಿಳೆಯರಿಗೆ ತೊಂದರೆ ಆಗಬಾರದೆಂದು ಮನೆ ಮನೆಗೆ ಉಚಿತ ಗ್ಯಾಸ್ ಸೌಲಭ್ಯ ಕೊಟ್ಟವರು ಯಾರು? ಇಂಧನ ಬೆಲೆ ಏರಿಳಿತ ಇರುತ್ತದೆ. ಬೆಲೆ ಏರಿಕೆ ಸಮಸ್ಯೆ ಬಗೆಹರಿಸಲು ಪ್ರಧಾನಿ ಸನ್ನದ್ಧವಾಗುತ್ತಿದ್ದಾರೆ. ಕಾಂಗ್ರೆಸ್‌ನವರಿಂದ ನಾವು ಹೇಳಿಸಿಕೊಳ್ಳಬೇಕಾಗಿಲ್ಲ. ಇಂಧನ ಬೆಲೆ ಹೆಚ್ಚಳ ಅಂತ ಪ್ರತಿಭಟನೆ ಮಾಡಿಸುತ್ತಿರುವುದು ರಾಜಕಾರಣ ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಬೆಲೆ ಏರಿಕೆ ತಾತ್ಕಾಲಿಕ ಅದು ಕಡಿಮೆ ಆಗುತ್ತದೆ. ಆದರೆ ಶಾಸಕರದ್ದು, ಸಚಿವರದ್ದು ವೇತನ ಹೆಚ್ಚಳ ಆಗಿಲ್ಲ. ನಾವೂ ಕೂಡ ಕೇಳಿಲ್ಲ. ಶಾಸಕರಿಗೂ ಡೀಸೆಲ್, ಪೆಟ್ರೋಲ್ ಖರ್ಚು ಇರುತ್ತದೆ ಎಂದು ಹೇಳಿದರು.
Advertisement