ಈ ವರ್ಷದ ವಿಟಿಯು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡಬಲ್ ಡಿಗ್ರಿ ಪಡೆಯುವ ಅವಕಾಶ

ಎರಡನೇ ಡಿಗ್ರಿ ಪಡೆಯಲು ವಿದ್ಯಾರ್ಥಿಗಳು ಹೆಚ್ಚುವರಿ ವರ್ಷಗಳನ್ನು ಕಾಲೇಜಿನಲ್ಲಿ ಕಳೆಯಬೇಕಾಗುವುದು. 2021- 22ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರುವ ವಿದ್ಯಾರ್ಥಿಗಳಿಗೆ ಈ ಸವಲತ್ತು ಅನ್ವಯವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡಬಲ್ ಎಂಜಿನಿಯರಿಂಗ್ ಡಿಗ್ರಿ ಪಡೆಯುವ ಆಯ್ಕೆಯನ್ನು ಒದಗಿಸಿದೆ. ಹೆಚ್ಚುವರಿ ಎರಡನೇ ಡಿಗ್ರಿ ಪಡೆಯಲು ವಿದ್ಯಾರ್ಥಿಗಳು ಹೆಚ್ಚುವರಿ ವರ್ಷಗಳನ್ನು ಕಾಲೇಜಿನಲ್ಲಿ ಕಳೆಯಬೇಕಾಗುವುದು. 


ಒಂದು ಡಿಗ್ರಿ ಪಡೆಯಲು ಎಂಜಿನಿಯರಿಂಗ್ ವಿದ್ಯಾರ್ಥಿ ಕನಿಷ್ಟ 4 ವರ್ಷಗಳ ಕಾಲ ವ್ಯಾಸಂಗ ಮಾಡಬೇಕು. ಇದು ಎಲ್ಲರಿಗೂ ಗೊತ್ತಿರುವುದೇ. ಡಬಲ್ ಡಿಗ್ರಿ ಪಡೆಯಲು ಇಚ್ಛಿಸುವ ಎಂಜಿನಿಯರಿಂಗ್ ವಿದ್ಯಾರ್ಥಿ ಹೆಚ್ಚುವರಿ 2 ವರ್ಷ ಅಂದರೆ ಒಟ್ಟು 6 ವರ್ಷಗಳ ಕಾಲ ವ್ಯಾಸಂಗ ಮಾಡಬೇಕಾಗುತ್ತದೆ. 

2021- 22ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರುವ ವಿದ್ಯಾರ್ಥಿಗಳಿಗೆ ಈ ಸವಲತ್ತು ಅನ್ವಯವಾಗಲಿದೆ. ವಿಟಿಯು ಒದಗಿಸಿರುವ ಈ ಸವಲತ್ತಿಗೆ ವ್ಯಾಸಂಗ ಮಂಡಳಿ ಮತ್ತು ಶೈಕ್ಷಣಿಕ ಮಂಡಳಿ ಇನ್ನೂ ಅಂತಿಮ ಆನುಮೋದನೆ ನೀಡಬೇಕಿದೆ. ಈ ವರ್ಷದಿಂದಲೇ ಈ ನೂತನ ವ್ಯವಸ್ಥೆ ಜಾರಿಯಾಗುವ ಬಗ್ಗೆ ವಿಟಿಯು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com