ಎಲೆಕ್ಟ್ರಿಕ್‌ ವಾಹನ ಬಳಕೆಗೆ ಉತ್ತೇಜನ: ರಾಜ್ಯಾದ್ಯಂತ 500 ಚಾರ್ಜಿಂಗ್‌ ಕೇಂದ್ರ ಸ್ಥಾಪನೆ: ಸುನೀಲ್‌ ಕುಮಾರ್

ಇಡೀ ವಿಶ್ವವೇ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಹೀಗಾಗಿ ಕರ್ನಾಟಕ ಸಾರಿಗೆ ಮತ್ತು ಇಂಧನ ಇಲಾಖೆ ಕೂಡ ವಿದ್ಯುತ್ ವಾಹನಗಳಿಗೆ ಉತ್ತೇಜನ ನೀಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ.
ವಿಶ್ವ ವಿದ್ಯುತ್‌ ಚಾಲಿತ ವಾಹನಗಳ ದಿನಾಚರಣೆಯಲ್ಲಿ ಸಚಿವ ಸುನೀಲ್ ಕುಮಾರ್
ವಿಶ್ವ ವಿದ್ಯುತ್‌ ಚಾಲಿತ ವಾಹನಗಳ ದಿನಾಚರಣೆಯಲ್ಲಿ ಸಚಿವ ಸುನೀಲ್ ಕುಮಾರ್

ಬೆಂಗಳೂರು: ಇಡೀ ವಿಶ್ವವೇ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಹೀಗಾಗಿ ಕರ್ನಾಟಕ ಸಾರಿಗೆ ಮತ್ತು ಇಂಧನ ಇಲಾಖೆ ಕೂಡ ವಿದ್ಯುತ್ ವಾಹನಗಳಿಗೆ ಉತ್ತೇಜನ ನೀಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. 

ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಪ್ರೋತ್ಸಾಹಿಸಲು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ 500ಕ್ಕೂ ಹೆಚ್ಚು ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಇದ್ದು, ಬೆಂಗಳೂರು ನಗರದಲ್ಲೇ 136 ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ವಿಶ್ವ ವಿದ್ಯುತ್‌ ಚಾಲಿತ ವಾಹನಗಳ ದಿನಾಚರಣೆ’ ಅಂಗವಾಗಿ ಗುರುವಾರ ಕಂಠೀರವ ಕ್ರೀಡಾಂಗಣದ ಬಳಿ ಹಮ್ಮಿಕೊಂಡಿದ್ದ ವಿದ್ಯುತ್‌ ಚಾಲಿತ ವಾಹನಗಳ ಜಾಥಾದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವಿದ್ಯುತ್‌ ಚಾಲಿತ ವಾಹನಗಳು ಭವಿಷ್ಯದಲ್ಲಿ ಅನಿವಾರ್ಯವಾಗುವ ಕಾರಣದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇವುಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಯುವಕರು ಇಂತಹ ವಾಹನಗಳನ್ನು ಹೆಚ್ಚಾಗಿ ಬಳಸಬೇಕು ಎಂದರು.

ಪರಿಸರ ಸ್ನೇಹಿ ವಾಹನ ಬಳಸಿ’ ಫಲಕ ಬಿಡುಗಡೆಗೊಳಿಸಿದ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರವು ವಿದ್ಯುತ್‌ ಚಾಲಿತ ವಾಹನಗಳಿಗೆ ಸಬ್ಸಿಡಿ ನೀಡುತ್ತದೆ. ಇದರಿಂದ ಪರಿಸರ ಮಾಲಿನ್ಯವನ್ನೂ ತಡೆಯಬಹುದು. ಈ ನಿಟ್ಟಿನಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಹೆಚ್ಚಾಗಬೇಕು ಎಂದು ಹೇಳಿದರು.

ಹೊಸದಾಗಿ ಸ್ಥಾಪಿಸುವ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಪೆಟ್ರೋಲ್‌ ಬಂಕ್‌ಗಳ ಸಮೀಪವೇ ಮಾಡಬೇಕು. ವಿದ್ಯುತ್‌ ಚಾಲಿತ ವಾಹನಗಳ ದರ ಪೆಟ್ರೋಲ್‌ ಬಳಕೆಯ ವಾಹನಗಳಿಗಿಂತ ಕಡಿಮೆ ಇರಬೇಕು ಎಂದು ಹೇಳಿದರು.

ಎಲೆಕ್ಟ್ರಿಕಲ್ ವಾಹನದ ಬೆಲೆ ಸುಮಾರು 1.25 ಲಕ್ಷ ರೂ. ಆದರೆ ಬ್ಯಾಟರಿಯ ಬೆಲೆ 30,000-40,000 ರೂ. ಇದು ನೋಂದಣಿ ಶುಲ್ಕ ಮತ್ತು ತೆರಿಗೆಯನ್ನು ಮನ್ನಾ ಮಾಡಿದರೂ ಸಹ,
ಬೆಲೆ ಅಧಿಕವಾಗಿದೆ ಎಂದು ಹಿರಿಯ ಸಾರಿಗೆ ಅಧಿಕಾರಿಯೊಬ್ಬರು ಹೇಳಿದರು.

ಪಿಪಿಪಿ ಮಾದರಿ ಸೇರಿದಂತೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು ಪ್ರಮುಖ ಸಮಸ್ಯೆಯಾಗಿದೆ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕೇವಲ 136 ಚಾರ್ಜಿಂಗ್ ಕೇಂದ್ರಗಳಿವೆ ಎಂದು ತಿಳಿಸಿದ್ದಾರೆ.

ತಮ್ಮ ಸಮಸ್ಯೆಗಳ ಪಟ್ಟಿ ಮಾಡಲು ಸೆಪ್ಟೆಂಬರ್ 18 ರಂದು ಎಲ್ಲಾ ವಿದ್ಯುತ್ ಚಾಲಿತ ವಾಹನಗಳಪ ಉತ್ಪಾದಕರು ಮತ್ತು ಮಧ್ಯಸ್ಥಗಾರರ ಸಭೆ ಕರೆಯಲಾಗಿದೆ ಎಂದು ಸಚಿವ ವಿ.ಸುನೀಲ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಕರ್ನಾಟಕದಲ್ಲಿ 500 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ರಸ್ತೆಯಲ್ಲಿರುವ ಶೇಕಡಾ 75 ರಷ್ಟು ವಾಹನಗಳು ದ್ವಿಚಕ್ರ ವಾಹನಗಳೇ ಆಗಿರುವುದರಿಂದ ದೊಡ್ಡ ಗುರಿ ದ್ವಿಚಕ್ರ ವಾಹನಗಳೆ ಆಗಿವೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ, ನಾಲ್ಕು ಚಕ್ರದ ವಾಹನಕ್ಕೆ 200 ಕಿಮೀ ಚಾರ್ಜ್ ಮಾತ್ರ ಇರುತ್ತದೆ, ಹಾಗಾಗಿ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವುದು ಅತ್ಯಗತ್ಯ ಎಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com