ಬೆಂಗಳೂರಿನ ಕೋರಮಂಗಲದ ಘನ ತ್ಯಾಜ್ಯ ನಿರ್ವಹಣೆ ಮಾದರಿ ಯಲಹಂಕದಲ್ಲಿ ನಿರ್ಮಾಣ
ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಇರುವಾಗ, ಕೋರಮಂಗಲ ವಾರ್ಡ್ ಸಂಖ್ಯೆ 151 ಜನರು ಕಸ ವಿಲೇವಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.
Published: 14th September 2021 02:49 PM | Last Updated: 14th September 2021 04:56 PM | A+A A-

ಸಾಂಕೇತಿಕ ಚಿತ್ರ
ಬೆಂಗಳೂರು: ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಇರುವಾಗ, ಕೋರಮಂಗಲ ವಾರ್ಡ್ ಸಂಖ್ಯೆ 151 ಜನರು ಕಸ ವಿಲೇವಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳ ಮನೆಯಲ್ಲಿ ತಯಾರಾಗುವ ಕಸವನ್ನು ರೆಸ್ಟೋರೆಂಟ್‌ಗಳು ಇಂಧನದ ರೂಪದಲ್ಲಿ ಬಳಸುತ್ತವೆ. ಈಗ, ಅದೇ ಘನ ತ್ಯಾಜ್ಯ ನಿರ್ವಹಣೆ (SWM) ಮಾದರಿಯನ್ನು ಯಲಹಂಕದಲ್ಲಿ ಕೂಡ ನಿರ್ಮಿಸಲು ಸಜ್ಜಾಗಿದ್ದಾರೆ.
ಕೋರಮಂಗಲ ಹವಾಮಾನ ಕ್ರಿಯಾ ಯೋಜನೆ (ಕೆಸಿಎಲ್‌ಎಪಿ) ಯ ಸದಸ್ಯರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಆರ್‌ಡಬ್ಲ್ಯೂಎ) ಮತ್ತು ತಜ್ಞರೊಂದಿಗೆ, ಯಲಹಂಕ ವಲಯದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾದರಿಯನ್ನು ನಿರ್ಮಿಸಲು ಮುಂದಾಗಿದ್ದಾರೆ. ಯಲಹಂಕದ ಅಧಿಕಾರಿಗಳು ಮತ್ತು ಆರ್‌ಡಬ್ಲ್ಯೂಎಗಳು ಆಮ್ಲಜನಕರಹಿತ ಜೈವಿಕ ಅನಿಲ ಸ್ಥಾವರವನ್ನು ಪರಿಶೀಲಿಸಿದ್ದಾರೆ. ಅಲ್ಲಿ ಐದರಿಂದ ಆರು ಟನ್‌ಗಳಷ್ಟು ವಿಂಗಡಿಸಲಾದ ತ್ಯಾಜ್ಯವನ್ನು ಅನಿಲವಾಗಿ ಪರಿವರ್ತಿಸಲಾಗುತ್ತದೆ.
ಕೆಸಿಎಲ್‌ಎಪಿ ಸ್ಥಾಪಕರಾದ ಪದ್ಮಶ್ರೀ ಬಲರಾಮ್ ಅವರು ಎರಡು ಎಕರೆ ಭೂಮಿಯಲ್ಲಿ ನಿರ್ಮಿಸಿದ್ದು, ವಾರಕ್ಕೆ 40 ಟನ್ ತ್ಯಾಜ್ಯವನ್ನು ಘಟಕದಲ್ಲಿ ಉತ್ಪಾದಿಸುತ್ತಾರೆ. "ಐದು ಟನ್‌ಗಳಿಗಿಂತ ಕಡಿಮೆ ಸಾಮರ್ಥ್ಯವಿರುವ ಘಟಕವನ್ನು ಸ್ಥಾಪಿಸುವುದು ಕಷ್ಟವೇನಲ್ಲ. ಇದಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಪಿಸಿಬಿ) ಅನುಮತಿಯ ಅಗತ್ಯವಿಲ್ಲ, ಆದರೆ ಅದನ್ನು ಉಳಿಸಿಕೊಳ್ಳುವುದು ಮತ್ತು ಪ್ರತ್ಯೇಕವಾದ ತ್ಯಾಜ್ಯದ ನಿರಂತರ ಪೂರೈಕೆ ಮಾಡುವುದು ಮುಖ್ಯ ಎನ್ನುತ್ತಾರೆ.
ಈಗ ಬಯೋ-ಸಿಎನ್‌ಜಿಯಿಂದ ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ ಉತ್ಪತ್ತಿಯಾಗುವ ಜೈವಿಕ ಅನಿಲಕ್ಕೆ ಆಟೋ ಟಿಪ್ಪರ್‌ಗಳಲ್ಲಿ ಇಂಧನವನ್ನು ಬದಲಿಸುವ ಕೆಲಸ ಮಾಡುತ್ತಿದ್ದಾರೆ. ಎಸ್‌ಡಬ್ಲ್ಯೂಎಂ ಮಾದರಿಯಲ್ಲಿ ಹೆಚ್ಚಿನ ರೆಸ್ಟೋರೆಂಟ್‌ಗಳು, ಅಪಾರ್ಟ್ ಮೆಂಟ್ ಸಂಕೀರ್ಣಗಳು, ವಸತಿ ಕೇಂದ್ರಗಳು ಮತ್ತು ಸಮುದಾಯ ಅಡುಗೆ ಸೇವೆಗಳನ್ನು ಸೇರಿಸುವ ಯೋಜನೆ ಇದೆ ಎಂದರು.
ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಅಶೋಕ್ ಡಿ ಆರ್, ಈಗ ಯಲಹಂಕದಲ್ಲಿ ಅದೇ ಕಾರ್ಯ ಮಾದರಿಯನ್ನು ಪುನರಾವರ್ತಿಸಲು ಬಜೆಟ್ ಪಡೆಯುವುದರೊಂದಿಗೆ ಅಂತಿಮ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಹೇಳಿದರು.