ಕೊಡಗಿನ ಭತ್ತದ ಗದ್ದೆ, ಅಡಿಕೆ ಎಸ್ಟೇಟ್ ಗಳಲ್ಲಿ ರಾಸಾಯನಿಕ ಸಿಂಪಡಿಸುವ ಡ್ರೋನ್ ಗಳು ಈಗ ಅತ್ಯಂತ ಜನಪ್ರಿಯ!

ಕೋವಿಡ್-19 ಸಾಂಕ್ರಾಮಿಕ ಎದುರಾದಾಗಿನಿಂದಲೂ ಕಾರ್ಮಿಕರ ಸಮಸ್ಯೆ ತಲೆದೋರಿದ್ದು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅವಲಂಬನೆ ಹೆಚ್ಚಾಗಿದೆ.
ಡ್ರೋನ್ ಮೂಲಕ ನಡೆಸಲಾಗುತ್ತಿರುವ ಕೃಷಿ ಚಟುವಟಿಕೆ
ಡ್ರೋನ್ ಮೂಲಕ ನಡೆಸಲಾಗುತ್ತಿರುವ ಕೃಷಿ ಚಟುವಟಿಕೆ

ಮಡಿಕೇರಿ: ಕೋವಿಡ್-19 ಸಾಂಕ್ರಾಮಿಕ ಎದುರಾದಾಗಿನಿಂದಲೂ ಕಾರ್ಮಿಕರ ಸಮಸ್ಯೆ ತಲೆದೋರಿದ್ದು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅವಲಂಬನೆ ಹೆಚ್ಚಾಗಿದೆ.

ಕೊಡಗು ಜಿಲ್ಲೆಯ ಎಸ್ಟೇಟ್ ಗಳು ಭತ್ತದ ಗದ್ದೆಗಳಲ್ಲಿ ರಾಸಾಯನಿಕ, ಕೀಟನಾಶಕಗಳ ಸಿಂಪಡನೆ ಕೆಲಸಗಳಿಗೆ ಈಗ ಡ್ರೋನ್ ಗಳೇ ಹೆಚ್ಚು ಜನಪ್ರಿಯತೆ ಗಳಿಸಿವೆ.

ಈ ರೀತಿ ಡ್ರೋನ್ ಮೂಲಕ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವವರ ಪೈಕಿ ಕರಡಿಗೋಡು ಗ್ರಾಮದ ಅಡಿಕೆ ಬೆಳೆಗಾರ ವಿಕ್ರಮ್ ಅಪ್ಪಯ್ಯ ಕೂಡ ಒಬ್ಬರು. ಕೃಷಿ ಚಟುವಟಿಕೆಗಳಲ್ಲಿ ಡ್ರೋನ್ ಬಳಕೆಯಾಗುವ ಮಾಹಿತಿಯನ್ನು ಇವರು ಮೊದಲಿಗೆ ಪಡೆದಿದ್ದು ಸಾಮಾಜಿಕ ಜಾಲತಾಣದ ಗ್ರೂಪ್ ಮೂಲಕ ಹಾಗೂ ಮೇ ತಿಂಗಳಲ್ಲಿ ಮೊದಲ ಬಾರಿಗೆ ಎಸ್ಟೇಟ್ ನಾದ್ಯಂತ ಡ್ರೋಣ್ ಬಳಕೆ ಮಾಡಿ ಪ್ರಯೋಗಿಸಿದರು

"ಎಸ್ಟೇಟ್ ಕೆಲಸಗಳಿಗೆ ಡ್ರೋಣ್ ಬಳಕೆಯನ್ನು ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ಗ್ರೂಪ್ ನಿಂದ ಕೇಳಿ ತಿಳಿದುಕೊಂಡೆ. ಶಿಲೀಂಧ್ರನಾಶಕವನ್ನು ಡ್ರೋನ್ ಗಳ ಮೂಲಕ ಸಿಂಪಡಣೆಯನ್ನು ಮಾಡಲಾಯಿತು. ಎಲ್ಲಾ ಮರಗಳಿಗೂ ಸಮವಾಗಿ ಶಿಲೀಂಧ್ರನಾಶಕವನ್ನು ಸಿಂಪಡಿಸಲಾಯಿತು, ಸಾಮಾನ್ಯವಾಗಿ 10 ಎಕರೆ ಎಸ್ಟೇಟ್ ಗೆ ಶಿಲೀಂಧ್ರನಾಶಕ ಸಿಂಪಡಿಸುವುದಕ್ಕೆ 7-8 ದಿನಗಳಾಗುತ್ತವೆ. ಆದರೆ ಡ್ರೋನ್ ಗಳ ಮೂಲಕ ಕೇವಲ 4 ಗಂಟೆಗಳಲ್ಲಿ ಕೆಲಸ ಮುಗಿದಿತ್ತು, ಮೊದಲ ಬಾರಿಯ ಯಶಸ್ಸಿನ ನಂತರ ಸೆಪ್ಟೆಂಬರ್ ನಲ್ಲಿ ಶಿಲೀಂಧ್ರನಾಶಕ ಸಿಂಪಡನೆಗೆ ಮತ್ತೊಮ್ಮೆ ಡ್ರೋಣ್ ನ್ನು ಬಾಡಿಗೆಗೆ ಪಡೆದಿದ್ದೇನೆ"ಸ್ ಎನ್ನುತ್ತಾರೆ ವಿಕ್ರಮ್ ಅಪ್ಪಯ್ಯ

ಗೋಣಿಕೊಪ್ಪದಲ್ಲಿರುವ ಸ್ಥಳೀಯ ಕೃಷಿ ಸಂಸ್ಥೆ ಒಮೇಗಾದಿಂದ ಡ್ರೋಣ್ ಬಾಡಿಗೆಗೆ ದೊರೆಯುತ್ತದೆ. ಡ್ರೋನ್ ಪಡೆಯುವುದಕ್ಕೆ ಪೂರ್ವಬುಕ್ಕಿಂಗ್ ಮಾಡಬೇಕು, "ಸಮಯ ಉಳಿತಾಯವಾಗುವುದರಿಂದ ಹಲವಾರು ರೈತರು ಡ್ರೋಣ್ ಪಡೆಯುವುದಕ್ಕೆ ಮುಂದಾಗುತ್ತಿದ್ದಾರೆ ಎನ್ನುತ್ತಾರೆ ಒಮೇಗಾದ ಮಾಲೀಕ ನಾಜ್ ಚೆಂಗಪ್ಪ 

ಒಂದು ಎಕರೆ ಅಡಿಕೆ ತೋಟಕ್ಕೆ ರಾಸಾಯನಿಕ ಸಿಂಪಡನೆಗೆ 2,200 ರೂಪಾಯಿ ವೆಚ್ಚವಾಗುತ್ತದೆ. ಒಂದು ಎಕರೆ ಭತ್ತದ ಗದ್ದೆಗಳಿಗೆ 950 ರೂಪಾಯಿ ಆಗಲಿದೆ. ಆದರೆ ಈ ಸೌಲಭ್ಯಗಳನ್ನು ಕಾಫಿ ಎಸ್ಟೇಟ್ ಗಳಿಗೆ ಬಳಕೆ ಮಾಡಲು ಸಾಧ್ಯವಾಗುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com