ಐಟಿಐ ಅಲ್ಪಾವಧಿ ಕೋರ್ಸ್ ಗೆ ಕೌಶಲ್ಯಾಭಿವೃದ್ಧಿ ನಿಗಮದಿಂದ ಪ್ರಮಾಣ ಪತ್ರ: ಸಚಿವ ಅಶ್ವತ್ಥ ನಾರಾಯಣ

ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗದಲ್ಲಿ ಉನ್ನತೀಕರಿಸಿರುವ 150 ಐಟಿಐಗಳಲ್ಲಿ ಅಲ್ಪಾವಧಿ ಕೋರ್ಸ್ ಗಳನ್ನು ಮಾಡುವವರಿಗೆ ಇನ್ನು ಮುಂದೆ ಕೌಶಲ್ಯ ಅಭಿವೃದ್ಧಿ ನಿಗಮವೇ ಪ್ರಮಾಣ ಪತ್ರಗಳನ್ನು ನೀಡಲಿದೆ ಎಂದು ಉನ್ನತ ಶಿಕ್ಷಣ...
ಡಾ ಸಿ ಎನ್ ಅಶ್ವಥ್ ನಾರಾಯಣ
ಡಾ ಸಿ ಎನ್ ಅಶ್ವಥ್ ನಾರಾಯಣ
Updated on

ಬೆಂಗಳೂರು: ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗದಲ್ಲಿ ಉನ್ನತೀಕರಿಸಿರುವ 150 ಐಟಿಐಗಳಲ್ಲಿ ಅಲ್ಪಾವಧಿ ಕೋರ್ಸ್ ಗಳನ್ನು ಮಾಡುವವರಿಗೆ ಇನ್ನು ಮುಂದೆ ಕೌಶಲ್ಯ ಅಭಿವೃದ್ಧಿ ನಿಗಮವೇ ಪ್ರಮಾಣ ಪತ್ರಗಳನ್ನು ನೀಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಸೋಮವಾರ ಹೇಳಿದ್ದಾರೆ.

ಇಂದು ಈ ವಿಚಾರ ತಿಳಿಸಿರುವ ಸಚಿವರು, ಈ ಸಂಬಂಧ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ನವದೆಹಲಿಯಲ್ಲಿರುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಮತ್ತು ತರಬೇತಿ ಮಂಡಳಿ ನಡುವೆ ಒಡಂಬಡಿಕೆ ಆಗಿದೆ. ಹೀಗಾಗಿ ಇನ್ನು ಮುಂದೆ ಪ್ರಮಾಣಪತ್ರದ ವಿಷಯದಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ ಎಂದರು.

ಸೋಮವಾರ ದೆಹಲಿಯಲ್ಲಿ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ. ಉನ್ನತಿಕರಿಸಿರುವ ಐಟಿಐಗಳಲ್ಲಿ ವಿದ್ಯಾರ್ಥಿಗಳಲ್ಲದೆ ಇತರರು ಸಾಮಾನ್ಯವಾಗಿ ಈ ಅಲ್ಪಾವಧಿ ಕೋರ್ಸ್ ಗಳನ್ನು ಮಾಡಬಹುದು. ಇಂತಹ 23 ಅಲ್ಪಾವಧಿ ಕೋರ್ಸ್ ಗಳು ರಾಜ್ಯದಲ್ಲಿ ಲಭ್ಯವಿದ್ದು, ಇವುಗಳ ಅವಧಿ ಕನಿಷ್ಠ 3 ತಿಂಗಳಿನಿಂದ ಗರಿಷ್ಠ 6 ತಿಂಗಳಾಗಿದೆ ಎಂದರು.

ಆದರೆ ಇದುವರೆಗೆ ಇಂತವರಿಗೆ ಯಾರು ಪ್ರಮಾಣ ಪತ್ರ ನೀಡಬೇಕು ಎಂಬ ಗೊಂದಲವಿತ್ತು. ಇದನ್ನು ಬಗೆಹರಿಸಲು ಹಲವು ದಿನಗಳಿಂದ ಪ್ರಯತ್ನಿಸಲಾಗುತ್ತಿತ್ತು. ಈಗ ಈ ಸಮಸ್ಯೆ ಬಗೆಹರಿದಿರುವುದು ಸಂತಸ ತಂದಿದೆ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಫಂಡಮೆಂಟಲ್ ಆಫ್ ಇನೋವೇಷನ್ ಅಂಡ್ ಟೆಕ್ನಾಲಜಿ, ಜೂನಿಯರ್ ಪ್ರಾಡಕ್ಟ್ ಡಿಸೈನರ್, ಆಟೋ ಎಲೆಕ್ಟ್ರಿಕಲ್ ಡಿಸೈನ್ ಟೆಕ್ನಿಷಿಯನ್, ಆಟೋಮೊಬೈಲ್ ರಿಪೇರ್ ಅಂಡ್ ಮೈನ್ಟೆನೆನ್ಸ್ ಜೂನಿಯರ್, ಸಿಎಎಂ ಪ್ರೋಗ್ರಾಮರ್, ಸಿಎನ್ಸಿ ಮಷೀನಿಂಗ್, ಜೂನಿಯರ್ ರೋಬೋಟ್ ಆಪರೇಟರ್ ಮುಂತಾದ ಅಲ್ಪಾವಧಿ ಕೋರ್ಸುಗಳನ್ನು ಮಾಡುವವರಿಗೆ ಇದು ಅನುಕೂಲವಾಗಲಿದೆ ಎಂದು ಸಚಿವರು ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com