ಕ್ಷುಲ್ಲಕ ದೂರುಗಳು: ಮೂವರಿಗೆ ಉಪಲೋಕಾಯುಕ್ತ ಎಚ್ಚರಿಕೆ

ಕರ್ನಾಟಕದ ಲೋಕಾಯುಕ್ತಕ್ಕೆ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ, ನಿಷ್ಪ್ರಯೋಜಕ, ತಪ್ಪು, ಕಿರಿಕಿರಿ ಉಂಟುಮಾಡುವಂತಹ ದೂರುಗಳು ಬರುತ್ತಿದ್ದು, ಇಂತಹ ಪ್ರಕರಣಗಳನ್ನು ತಡೆಯುವುದಕ್ಕಾಗಿ ಕ್ರಮಕ್ಕೆ ಇಲಾಖೆ ಮುಂದಾಗಿದೆ. 
ಲೋಕಾಯುಕ್ತ
ಲೋಕಾಯುಕ್ತ
Updated on

ಬೆಂಗಳೂರು: ಕರ್ನಾಟಕದ ಲೋಕಾಯುಕ್ತಕ್ಕೆ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ, ನಿಷ್ಪ್ರಯೋಜಕ, ತಪ್ಪು, ಕಿರಿಕಿರಿ ಉಂಟುಮಾಡುವಂತಹ ದೂರುಗಳು ಬರುತ್ತಿದ್ದು, ಇಂತಹ ಪ್ರಕರಣಗಳನ್ನು ತಡೆಯುವುದಕ್ಕಾಗಿ ಕ್ರಮಕ್ಕೆ ಇಲಾಖೆ ಮುಂದಾಗಿದೆ. 

ಕೆಲವು ದೂರುಗಳ ಕಾರ್ಯ ವಿಧಾನದ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಉಪಲೋಕಾಯುಕ್ತ ನ್ಯಾ.ಕೆ.ಎನ್ ಫಣೀಂದ್ರ, ಇಂತಹ ಕ್ಷುಲ್ಲಕ ದೂರುಗಳನ್ನು ನೀಡುವ ವ್ಯಕ್ತಿಗಳ ವಿರುದ್ಧ ಏಕೆ ಲೋಕಾಯುಕ್ತ ಕಾಯ್ದೆ, 1984 ರ ಸೆಕ್ಷನ್ 20 ಅಡಿಯಲ್ಲಿ ಕ್ರಮ ಕೈಗೊಂಡು, ತನಿಖೆ ನಡೆಸಬಾರದು ಎಂದು ಪ್ರಶ್ನಿಸಿದ್ದಾರೆ. 

ಮಂಡ್ಯ ಜಿಲ್ಲೆಯ ಪುರಸ್ಕೃತ ಯುವಕ ಟಿಎಲ್ ನಾಗರಾಜು ಎಂಬಾತ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನಿಯರ್ ಗಳ ವಿರುದ್ಧ ದೂರು ನೀಡಿ, ಚನ್ನಪಟ್ಟಣದಲ್ಲಿ ನೀರಿನ ತೆರಿಗೆಯ ಸಂಗ್ರಹದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಕ್ಕೆ ಅವು ಪೂರಕವಾಗಿರಲಿಲ್ಲ. 

ಈ ದೂರುದಾರ ವ್ಯಕ್ತಿ ರಾಮನಗರ-ಚನ್ನಪಟ್ಟಣಕ್ಕೆ ನೀರಿನ ಪೂರೈಕೆ ಯೋಜನೆಯಲ್ಲಿ ಗುತ್ತಿಗೆಯನ್ನು ನಿರ್ದಿಷ್ಟ ವ್ಯಕ್ತಿಯ ಪರವಾಗಿ ಪರಿಗಣಿಸದೇ ಇದ್ದದ್ದಕ್ಕೆ ಆಕ್ರೋಶಗೊಂಡು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂಬ ವಿಷಯ ಅರಿತ ನ್ಯಾಯಮೂರ್ತಿಗಳಿಗೆ, ಈತ ನೀಡುತ್ತಿರುವ ಮೂರನೇ ದೂರು ಇದಾಗಿದೆ. ಈ ಹಿಂದೆಯೂ ಇಂಥಹದ್ದೇ ದೂರುಗಳನ್ನು ನೀಡಿದ್ದು ಇತ್ತೀಚೆಗಷ್ಟೇ ಅವುಗಳು ಇತ್ಯರ್ಥಗೊಂಡಿವೆ ಎಂಬುದು ಬಹಿರಂಗಗೊಂಡಿದೆ.

ಇದನ್ನೂ ಓದಿ: ರಾಮನಗರ: ಉಪ ಲೋಕಾಯುಕ್ತರ ಭೇಟಿ ಎಪೆಕ್ಟ್; ಬಾಲಕಿಯರ ವಸತಿ ನಿಲಯಕ್ಕೆ ಉತ್ತಮ ಸೌಕರ್ಯಗಳ ಪೂರೈಕೆ
 
ಮತ್ತೊಂದು ಪ್ರಕರಣದಲ್ಲಿ ಚಿತ್ರದುರ್ಗದ ಮೇಗಲಕೊಟ್ಟಿಗೆಯ ಜಿ ಶಾಂತಪ್ಪ ಎಂಬುವವರು, ಜಿಲ್ಲೆಯಲ್ಲಿ ಎಂಜಿಎನ್ಆರ್ ಇಜಿ ಯೋಜನೆಯಡಿ ಕಳಪೆ ಗುಣಮಟ್ಟದ ಕಾಮಗಾರಿ, ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಗಿಡಗಳನ್ನು ಬೆಳೆಸುವುದಕ್ಕಾಗಿ ನೀಡಿದ್ದ ಅನುದಾನದಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು.

ಆದರೆ ಈ ಆರೋಪಕ್ಕೆ ಆಧಾರಗಳಿರಲಿಲ್ಲ. ಈ ಬಗ್ಗೆ ದೂರುದಾರರನ್ನು ವಿಚಾರಣೆ ನಡೆಸಿದಾಗ ಉಪಲೋಕಾಯುಕ್ತರ ಬಳಿ ಆತ ತಾನು ತಪ್ಪು ಮಾಹಿತಿಯನ್ನಾಧರಿಸಿ ತನಗೆ ಕೆಲವು ಕಿಡಿಗೇಡಿಗಳು ನೀಡಿದ್ದ ಮಾಹಿತಿಯನ್ನಾಧರಿಸಿ ದೂರು ನೀಡಿರುವುದಾಗಿಯೂ, ವೈಯಕ್ತಿವಾಗಿ ಅಧಿಕಾರಿಗಳ ಕೆಲಸ ಸಮಾಧಾನ ತಂದಿದೆ ಹಾಗೂ ಅದರಲ್ಲಿ ಯಾವುದೇ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇಲ್ಲವೆಂದೂ ಹೇಳಿದ್ದಾರೆ. 

ಇಂತಹ ಕ್ಷುಲ್ಲಕ ದೂರುಗಳಲ್ಲಿ ತನಿಖೆ ನಡೆಸುವುದಕ್ಕೆ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 9 ರ ಅಡಿಯಲ್ಲಿ ಅಗತ್ಯವಿರುವ ಅಂಶಗಳು ಇಲ್ಲದೇ ಇರುವುದನ್ನು ನ್ಯಾ. ಫಣೀಂದ್ರ ಗಮನಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com