ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪರಿಷ್ಕೃತ ಪಠ್ಯಪುಸ್ತಕಗಳ ಮರು ಪರಿಷ್ಕರಣೆ: ವೆಬ್ ಸೈಟ್ ನಲ್ಲಿ ಪಠ್ಯ ಭಾಗ ಅಪ್ ಲೋಡ್

ಕರ್ನಾಟಕ ಪಠ್ಯಪುಸ್ತಕಗಳ ಸೊಸೈಟಿ (KTBS) ವೆಬ್‌ಸೈಟ್‌ನಲ್ಲಿ ರಾಜ್ಯ ಸರ್ಕಾರದಿಂದ ಅನುಮೋದಿಸಲಾದ ಪರಿಷ್ಕೃತ ಪಠ್ಯಪುಸ್ತಕಗಳ ಮರುಪರಿಷ್ಕೃತ ಭಾಗಗಳ ದೋಷ ಅಥವಾ ಕಿರುಪುಸ್ತಕದ ವಿದ್ಯುನ್ಮಾನ ಪ್ರತಿ(Soft copy) ಅಪ್‌ಲೋಡ್ ಮಾಡಿದೆ.

ಬೆಂಗಳೂರು: ಕರ್ನಾಟಕ ಪಠ್ಯಪುಸ್ತಕಗಳ ಸೊಸೈಟಿ (KTBS) ವೆಬ್‌ಸೈಟ್‌ನಲ್ಲಿ ರಾಜ್ಯ ಸರ್ಕಾರದಿಂದ ಅನುಮೋದಿಸಲಾದ ಪರಿಷ್ಕೃತ ಪಠ್ಯಪುಸ್ತಕಗಳ ಮರುಪರಿಷ್ಕೃತ ಭಾಗಗಳ ದೋಷ ಅಥವಾ ಕಿರುಪುಸ್ತಕದ ವಿದ್ಯುನ್ಮಾನ ಪ್ರತಿ(Soft copy) ಅಪ್‌ಲೋಡ್ ಮಾಡಿದೆ.

ಪುಸ್ತಕಗಳನ್ನು ಮುದ್ರಿಸಿ ಸೆಪ್ಟೆಂಬರ್ ಮೊದಲ ವಾರದೊಳಗೆ ರಾಜ್ಯದ ಎಲ್ಲಾ 70 ಸಾವಿರ ಶಾಲೆಗಳಿಗೆ ವಿತರಿಸಲಾಗುವುದು ಎಂದು ಕೆಟಿಬಿಎಸ್ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಎಂ.ಪಿ ತಿಳಿಸಿದ್ದಾರೆ.

ಶಾಲೆಗಳು ಪುನರಾರಂಭವಾದ ಮೂರು ತಿಂಗಳ ನಂತರ ಎಲ್ಲಾ ಪರಿಷ್ಕೃತ ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿದೆ. ಶೇಕಡಾ 99ರಷ್ಟು ವಿತರಣೆಯಾಗಿದ್ದು, ಉಳಿದವು ಈ ವಾರದೊಳಗೆ ಶಾಲೆಗಳಿಗೆ ತಲುಪುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಶಿಕ್ಷಣ ಇಲಾಖೆಯು ಪರಿಷ್ಕೃತ ಪಠ್ಯಪುಸ್ತಕಗಳನ್ನು 200 ಕೋಟಿ ರೂಪಾಯಿ ವೆಚ್ಚದಲ್ಲಿ ಮುದ್ರಿಸುತ್ತಿದ್ದು, ಬುಕ್‌ಲೆಟ್‌ಗಳಿಗೆ 12 ಲಕ್ಷ ರೂಪಾಯಿ ವೆಚ್ಚವಾಗಿದೆ. 

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು 6-10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಮತ್ತು 1-10 ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿತ್ತು. 534 ಶೀರ್ಷಿಕೆಗಳಲ್ಲಿ, 83ನ್ನು ಪರಿಷ್ಕರಿಸಿ ಅನುಮೋದಿಸಲಾಗಿದೆ. 

ಆದರೆ ಕೆಲವು ಅಧ್ಯಾಯಗಳ ಬಗ್ಗೆ ಸಮಾಜದ ಹಲವಾರು ವರ್ಗಗಳಿಂದ ಆಕ್ಷೇಪಣೆಗಳ ನಂತರ, ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳ ಮರು ಪರಿಷ್ಕರಣೆಯನ್ನು ಕೈಗೆತ್ತಿಕೊಂಡಿತು. ಎಂಟು ತಿದ್ದುಪಡಿಗಳನ್ನು ಮಾಡಿ ಅವುಗಳನ್ನು ಅನುಮೋದಿಸಿತು. ಈ ಎಂಟು ತಿದ್ದುಪಡಿಗಳನ್ನು ಈಗ ಕಿರುಪುಸ್ತಕದಲ್ಲಿ ಮುದ್ರಿಸಲಾಗಿದೆ.

ಪ್ರತಿ ಶಾಲೆಗೆ ಈಗ ತಲಾ ಒಂದು ಬುಕ್‌ಲೆಟ್ ನೀಡಲಾಗುವುದು, ಆಯಾ ತರಗತಿಗಳ ಶಿಕ್ಷಕರು ನಿರ್ದಿಷ್ಟ ಸಾಲು ಅಥವಾ ಪದ ಕಾಣೆಯಾಗಿದೆ ಅಥವಾ ಅನುಮೋದಿತ ತಿದ್ದುಪಡಿಗಳನ್ನು ಸೇರಿಸಲು ವಿದ್ಯಾರ್ಥಿಗಳನ್ನು ಕೇಳುತ್ತಾರೆ. ಮುಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳನ್ನು ಮುದ್ರಿಸುವಾಗ ತಿದ್ದುಪಡಿಗಳನ್ನು ಸೇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com