ಬೆಂಗಳೂರು: 4 ವರ್ಷದ ಬಾಲಕನಿಗೆ ಕಿರುಕುಳ; ಬಿಷಪ್ ಕಾಟನ್ ಶಾಲೆಯ ವಿರುದ್ಧ ಪ್ರಕರಣ ದಾಖಲು

ನಾಲ್ಕು ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಿಷಪ್ ಕಾಟನ್ ಬಾಲಕರ ಶಾಲೆಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಾಲ್ಕು ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಿಷಪ್ ಕಾಟನ್ ಬಾಲಕರ ಶಾಲೆಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

ಜುಲೈನಲ್ಲಿ ತರಗತಿಗಳು ಪ್ರಾರಂಭವಾದ ಒಂದು ವಾರದ ನಂತರ, ತರಗತಿಯಲ್ಲಿ 'ತುಂಟಾಟ' ಮಾಡಿದ ಕಾರಣಕ್ಕಾಗಿ ತನ್ನ ಮಗನನ್ನು ಪದೇ ಪದೇ ಹೊಡೆದಿದ್ದಾರೆ ಎಂದು ಮಗುವಿನ ಪೋಷಕ ರಿವು ಚಕ್ರವರ್ತಿ TNIEಗೆ ತಿಳಿಸಿದ್ದಾರೆ.

ಶಾಲೆಯಲ್ಲಿ ತನಗೆ ಹೊಡೆಯಲಾಗುತ್ತಿದೆ ಎಂದು ಮಗ ಹಲವು ಬಾರಿ ಹೇಳಿದ್ದು, ನಂತರ ಶಾಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಅಲ್ಲಿ ಯಾವುದೇ ಭರವಸೆ ಸಿಗದ ಕಾರಣ ಶಾಲೆಯ ವಿರುದ್ಧ ದೂರು ದಾಖಲಿಸಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾಗಿ ಚಕ್ರವರ್ತಿ ಹೇಳಿದ್ದಾರೆ. ಇನ್ನು ಪೊಲೀಸರು ಆಗಸ್ಟ್ 18ರಂದು ಶಾಲೆಯ ವಿರುದ್ಧ ನಾನ್-ಕಾಗ್ನೈಸಬಲ್ ರಿಪೋರ್ಟ್ (ಎನ್‌ಸಿಆರ್) ದಾಖಲಿಸಿದ್ದಾರೆ.

ತರಗತಿಯಲ್ಲಿ ಅನುಚಿತ ವರ್ತನೆ ಹಾಗೂ ಸರಿಯಾಗಿ ಓದದ ಕಾರಣಕ್ಕೆ ಎಲ್‌ಕೆಜಿ ವಿದ್ಯಾರ್ಥಿಯ ತುಟಿ ಮತ್ತು ಕೈಗಳಿಗೆ ಗಾಯವಾಗಿದೆ ಎಂದು ದೂರಿನ ಪ್ರತಿಯಲ್ಲಿ ತಿಳಿಸಲಾಗಿದೆ. ಶಾಲೆ ಪ್ರಾರಂಭವಾದ ಮೊದಲ ವಾರದಲ್ಲೇ ಮಗ ನನ್ನ ಬಳಿ ಹೇಳಿಕೊಂಡಿದ್ದ. ಆದರೆ ನಾನು ಆ ಕಡೆ ಹೆಚ್ಚು ಗಮನಕೊಡಲಿಲ್ಲ. ಆದರೆ ಅವನನ್ನು ಶಾಲೆಯಿಂದ ಕರೆದೊಯ್ಯುವಾಗ ಅವನ ಕೈ ಮೇಲೆ ಗಾಯದ ಗುರುತುಗಳನ್ನು ಗಮನಿಸಿದೆ. ತಕ್ಷಣವೇ ಶಾಲೆಯ ಅಧಿಕಾರಿಗಳೊಂದಿಗೆ ಅಪಾಯಿಂಟ್ಮೆಂಟ್ ಪಡೆಯಲು ಪ್ರಯತ್ನಿಸಿದ್ದೇವೆ ಎಂದು ಚಕ್ರವರ್ತಿ ಹೇಳಿದರು.

ಈ ಘಟನೆಯನ್ನು ಮುಚ್ಚಿಹಾಕಲು ಶಾಲೆಯ ಆಡಳಿತ ಮಂಡಳಿ ಪ್ರಯತ್ನಿಸಿತು. ಆರಂಭದಲ್ಲಿ ದೈಹಿಕ ಶಿಕ್ಷೆಯಲ್ಲ. ಹುಡುಗರ ನಡುವಿನ ಜಗಳದಿಂದ ಉಂಟಾದ ಗಾಯಗಳನ್ನು ಎಂದು ಹೇಳಿದರು. ಆದಾಗ್ಯೂ, ಹೆಚ್ಚಿನ ವಿಚಾರಣೆಯ ನಂತರ, ಶಾಲೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ಶಿಸ್ತು ಮಾಡಲು ಕೆಲವೊಮ್ಮೆ 'ಶಿಕ್ಷೆ' ನೀಡುತ್ತಾರೆ ಎಂದು ಒಪ್ಪಿಕೊಂಡರು. ಅಲ್ಲದೆ ಘಟನೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದರು.

ಇದಾದ ಸುಮಾರು ಒಂದು ತಿಂಗಳ ನಂತರ, ಮಗ ನನ್ನನ್ನು ಶಾಲೆಯಲ್ಲಿ ನಿಂದಿಸುತ್ತಿದ್ದಾರೆ ಎಂದು ಹೇಳಿದನು. ಅಲ್ಲದೆ ಈ ವಿಚಾರವನ್ನು ಪೋಷಕರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದು ಇದರಿಂದ ಆತ ಆತಂಕಕ್ಕೊಳಗಾಗಿದ್ದನು. ದೂರಿನಲ್ಲಿ ಮಗುವಿಗೆ ದೈಹಿಕ ಕಿರುಕುಳ ನೀಡಿದ್ದು ಮಾತ್ರವಲ್ಲದೆ ಕೋಣೆಯಲ್ಲಿ ಕೂಡಿಹಾಕಲಾಗಿತ್ತು ಎಂದು ಉಲ್ಲೇಖಿಸಿದ್ದಾರೆ.

'ನಾನು ಅವರಿಗೆ ಈ ಬಗ್ಗೆ ಹಲವಾರು ಇಮೇಲ್‌ಗಳನ್ನು ಕಳುಹಿಸಿದ್ದೇನೆ. ಶಾಲೆಯಿಂದ ನನ್ನ ಮಗನನ್ನು ಬಿಡಿಸುವುದಾಗಿ ನಾನು ತೀರ್ಮಾನಿಸಿದ್ದರಿಂದ ಹಲವು ಬಾರಿ ಶಾಲಾ ಕಚೇರಿಗೆ ಕರೆ ಮಾಡಿದ್ದೆ ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೆಲ ಬಾರಿ ಕರೆ ಸ್ವೀಕರಿಸಿದರು ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಕಡಿತಗೊಳಿಸುತ್ತಿದ್ದರು. ಹೀಗಾಗಿ ಈ ವಿಚಾರವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡ ನಂತರ ಶಾಲೆಯಿಂದ ಟಿಸಿ ಪಡೆಯಲು ಸಾಧ್ಯವಾಯಿತು.  ಪದೇ ಪದೇ ಪ್ರಯತ್ನಿಸಿದರೂ, ಘಟನೆಯ ಕುರಿತು ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಶಾಲೆ ನಿರಾಕರಿಸಿತು. ಶಾಲೆಯ ಹಂಗಾಮಿ ಪ್ರಾಂಶುಪಾಲರಾದ ಲಾವಣ್ಯ ಮಿತ್ರನ್ ಅವರು ಪ್ರಶ್ನೆಗಳನ್ನು ಇಮೇಲ್ ಮೂಲಕ ಮಾತ್ರ ಉತ್ತರಿಸಲಾಗುವುದು ಎಂದು TNIEಗೆ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com