ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ನಿರಾಕರಣೆ: ಚೀನಾ ವಿದ್ಯಮಾನಗಳಲ್ಲಿ ಅಮೆರಿಕ- ವಿಚಾರ ಸಂಕಿರಣ ರದ್ಧು!

ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿರಲಿಲ್ಲ. ಆದರೂ, ನನ್ನ ಹೆಸರು ಆಹ್ವಾನ ಪತ್ರಿಕೆಯಲ್ಲಿ ಹೇಗೆ ಪ್ರಕಟವಾಗಿದೆ ತಿಳಿದಿಲ್ಲ. ನಮ್ಮ ಪಕ್ಷ ಮತ್ತು ನಾನು ಈ ಕಾರ್ಯಕ್ರಮದ ಕಾರ್ಯಸೂಚಿಗೆ ವಿರುದ್ಧವಾಗಿದ್ದೇವೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಭಾರತ– ಚೀನಾ ಫ್ರೆಂಡ್‌ಶಿಪ್‌ ಅಸೋಸಿಯೇಷನ್‌ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಚೀನಾದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕದ ಬಂಡವಾಳಶಾಹಿಗಳ ಹಸ್ತಕ್ಷೇಪ’ ಕುರಿತ ವಿಚಾರ ಸಂಕಿರಣದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿರಾಕರಿಸಿದ್ದರಿಂದ ಕಾರ್ಯಕ್ರಮವೇ ರದ್ದಾಗಿದೆ.

ಭಾನುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ‌  ಹೆಸರು ಕಂಡು ಆಶ್ಚರ್ಯವಾಯಿತು. ಸೈದ್ದಾಂತಿಕವಾಗಿ ನನ್ನ‌ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ದವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು.

ಚೀನಾ ಪರವಾದ ವಿಚಾರ ಸಂಕಿರಣದಲ್ಲಿ ಕಾಂಗ್ರೆಸ್‌ ನಾಯಕರನ್ನು ಅತಿಥಿಗಳನ್ನಾಗಿ ಆಹ್ವಾನಿಸಿದ್ದ ವಿಚಾರ ಬಿಜೆಪಿ– ಕಾಂಗ್ರೆಸ್‌ ನಾಯಕರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಾಗ್ವಾದಕ್ಕೂ ಕಾರಣವಾಗಿತ್ತು.

ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಭಾರತ– ಚೀನಾ ಫ್ರೆಂಡ್‌ಶಿಪ್‌ ಅಸೋಸಿಯೇಷನ್‌ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದಾರೆ. ಚೀನಾ ರಾಯಭಾರಿ ಸುನ್‌ ವೀಡಾಂಗ್‌ ಮತ್ತು ಕಾನ್ಸುಲ್‌ ಜನರಲ್‌ ಕಾಂಗ್‌ ಕ್ಸಿನ್ಹುವಾ ಈ ಕಾರ್ಯಕ್ರಮದ ಇತರ ಮುಖ್ಯ ಅತಿಥಿಗಳಾಗಿದ್ದರು. ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯರಾದ ಡಾ.ಎಲ್‌. ಹನುಮಂತಯ್ಯ, ಮುಖಂಡರಾದ ಡಾ.ಎಚ್‌.ಸಿ. ಮಹದೇವಪ್ಪ, ಪಿ.ಜಿ.ಆರ್‌. ಸಿಂಧ್ಯ ಕೂಡ ಅತಿಥಿಗಳ ಪಟ್ಟಿಯಲ್ಲಿದ್ದರು.

ಮೂಲಗಳ ಪ್ರಕಾರ, ಸಿದ್ದರಾಮಯ್ಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಲು ನಿರಾಕರಿಸಿದ ನಂತರವೂ, ಆಯೋಜಕರು ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರನ್ನು ಮುದ್ರಿಸಿದ್ದಾರೆ. "ಸಮಸ್ಯೆಯು ಅನಗತ್ಯ ವಿವಾದವನ್ನು ಉಂಟುಮಾಡಿದ ಕಾರಣ, ನಾವು ಸೆಮಿನಾರ್  ರದ್ದುಗೊಳಿಸಿದ್ದೇವೆ, ಆದರೆ ಚೀನಾದ ಛಾಯಾಚಿತ್ರ ಪ್ರದರ್ಶನವನ್ನು ನಿಗದಿತ ರೀತಿಯಲ್ಲಿ ನಡೆಸಲಾಗುವುದು ಎಂದು ಮಾಜಿ RBI ಉದ್ಯೋಗಿ ICFA ಕಾರ್ಯದರ್ಶಿ ವಿ ಭಾಸ್ಕರನ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com