ಪ್ರತ್ಯಕ್ಷ ದೃಶ್ಯ
ರಾಜ್ಯ
ನಾಗರಹೊಳೆ: ಹೊಂಚು ಹಾಕಿ ಬೇಟೆಗೆ ಮುಂದಾಗಿದ್ದ ಹುಲಿಯನ್ನೇ ಹೆದರಿಸಿ ಓಡಿಸಿದ ಗೂಳಿ, ವಿಡಿಯೋ!
ಹುಲಿ ಕಂಡರೆ ಮನುಷ್ಯನಿಂದ ಹಿಡಿದು ಇತರ ಎಲ್ಲ ಪ್ರಾಣಿಗಳು ಹೆದರಿ ಓಡುತ್ತವೆ. ಆದರೆ ಇಲ್ಲೊಂದು ತದ್ವಿರುದ್ಧ ಘಟನೆ ನಡೆದಿದೆ.
ಬೆಂಗಳೂರು: ಹುಲಿ ಕಂಡರೆ ಮನುಷ್ಯನಿಂದ ಹಿಡಿದು ಇತರ ಎಲ್ಲ ಪ್ರಾಣಿಗಳು ಹೆದರಿ ಓಡುತ್ತವೆ. ಆದರೆ ಇಲ್ಲೊಂದು ತದ್ವಿರುದ್ಧ ಘಟನೆ ನಡೆದಿದೆ.
ರಾಕೇಶ್ ಪ್ರಕಾಶ್ ಎನ್ನುವವರು ಈ ಕುರಿತು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈ ವಿಲಕ್ಷಣ ಘಟನೆ ನಾಗರಹೊಳೆ ಅರಣ್ಯದಲ್ಲಿ ರಸ್ತೆಯಲ್ಲಿ ನಡೆದಿದೆ.
ದಾರಿ ತಪ್ಪಿದ ಹೋರಿಯೊಂದು ಅರಣ್ಯದ ರಸ್ತೆಯಲ್ಲಿ ಬರುವಾಗ ಸನಿಹದಲ್ಲೇ ಇದ್ದ ಭಾರಿ ಗಾತ್ರದ ಹುಲಿಯೊಂದು ಅದನ್ನು ಹಿಡಿಯಲು ಹೋಗುತ್ತದೆ. ಆಗ ಕೊಂಬು ಬಾಗಿಸಿ ತಿವಿಯಲು ಹೋರಿಯು ಹುಲಿಯತ್ತ ರಭಸದಿಂದ ಮುನ್ನುಗುತ್ತದೆ. ಇದರಿಂದ ಬೆದರಿದ ಹುಲಿ ಪಕ್ಕಕ್ಕೆ ಓಡಿ ದಿಗ್ಬ್ರಮೆಯಿಂದ ಕ್ಷಣಕಾಲ ನಿಲ್ಲುತ್ತದೆ. ಇತ್ತ ಹೋರಿ ತಪ್ಪಿಸಿಕೊಳ್ಳುತ್ತದೆ.
ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಗಿನ ಮಾನಂತವಾಡಿ ರಸ್ತೆಯಲ್ಲಿ ಗೂಳಿಯೊಂದು ಹುಲಿಯನ್ನು ಓಡಿಸಿದೆ. ಇದು ಅಸಾಮಾನ್ಯ ದೃಶ್ಯ ಎಂದು ವಿಡಿಯೋ ಮಾಡಿದ ರಾಕೇಶ್ ಪ್ರಕಾಶ್ ಹೇಳಿದ್ದಾರೆ.

