ಮಾಂಡೌಸ್ ಚಂಡಮಾರುತದ ಎಫೆಕ್ಟ್: ಕೋಲಾರ, ತುಮಕೂರಿನಲ್ಲಿ ಅಪಾರ ಪ್ರಮಾಣದ ಬೆಳೆ ನಾಶ: ಮತ್ತೆ ತಟ್ಟಲಿದೆ ಬೆಲೆ ಏರಿಕೆ ಬಿಸಿ!

ಮಾಂಡೌಸ್ ಚಂಡಮಾರುತವು ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೊಯ್ಲಿಗೆ ಸಿದ್ಧವಾಗಿರುವ ಬೆಳೆಗಳನ್ನು ನಾಶಪಡಿಸಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ.
ಚಂಡಮಾರುತದಿಂದ ಹಾನಿಗೊಳಗಾದ ಸ್ಟೀಟ್ ಕಾರ್ನ್
ಚಂಡಮಾರುತದಿಂದ ಹಾನಿಗೊಳಗಾದ ಸ್ಟೀಟ್ ಕಾರ್ನ್
Updated on

ಕೋಲಾರ/ತುಮಕೂರು: ಮಾಂಡೌಸ್ ಚಂಡಮಾರುತವು ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೊಯ್ಲಿಗೆ ಸಿದ್ಧವಾಗಿರುವ ಬೆಳೆಗಳನ್ನು ನಾಶಪಡಿಸಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಟೊಮೆಟೊ ಮತ್ತು ರಾಗಿ ಬೆಳೆಗಳು ಹೆಚ್ಚು ಹಾನಿಗೊಳಗಾಗಿದ್ದು ಈಗ ಈ ವಸ್ತುಗಳ ಬೆಲೆ ಏರಿಕೆಯಾಗುವ ಭೀತಿಯಿದೆ.

ಅಲ್ಪ ಪ್ರಮಾಣದ ಸ್ವೀಟ್ ಕಾರ್ನ್ ಮತ್ತು ಟೊಮೇಟೊ ಕಟಾವು ಮಾಡಿ ಮಾರುಕಟ್ಟೆಗೆ ಕಳುಹಿಸಲಾಗಿದೆ ಎಂದು ರೈತರು ತಿಳಿಸಿದ್ದಾರೆ. ವಿಶಾಲವಾದ ಭೂಮಿಯಲ್ಲಿ ರಾಗಿ ಬೆಳೆ ನಾಶವಾಗಿದ್ದು, ವರ್ಷವಿಡೀ ರಾಗಿ ಕಾಂಡವನ್ನು ಜಾನುವಾರುಗಳಿಗೆ ಮೇವಾಗಿ ಬಳಸುವುದರಿಂದ ಹೈನುಗಾರರು ಹಾನಿಗೊಳಗಾಗುವ ಸಾಧ್ಯತೆಯಿದೆ.

ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಗೆ ಭಾನುವಾರ ಕೇವಲ 1,866 ಕ್ವಿಂಟಾಲ್ ಟೊಮೆಟೊ ಬಂದಿದ್ದರೆ,  ಬೇರೆ ದಿನದಲ್ಲಿ 10,000 ಕ್ವಿಂಟಲ್‌ ಗೂ ಹೆಚ್ಚು  ಟಮೊಟೋ ಬರುತ್ತದೆ. 15 ಕೆಜಿ ಕ್ರೇಟ್‌ಗೆ ಕನಿಷ್ಠ 360 ರೂ. ಆಗಿದೆ.

ತಮಿಳುನಾಡಿಗೆ ಹೆಚ್ಚಿನ ಉತ್ಪನ್ನಗಳನ್ನು ಸಾಗಿಸುವ ಅನೇಕ ಟ್ರಕ್‌ಗಳು ಸಾಕಷ್ಟು ದಾಸ್ತಾನುಗಳನ್ನು ಸ್ವೀಕರಿಸಿಲ್ಲ. ಸೋಮವಾರ ಮತ್ತು ಮಂಗಳವಾರ ಟೊಮೆಟೊ ಬರುವಿಕೆಗಾಗಿ ಕಾಯುತ್ತಿವೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಸಮೀಪದ ಶೆಟ್ಟಿಹಳ್ಳಿಯಲ್ಲಿ ಯುವ ರೈತ ಮುರಳಿ ಎಂಬುವರು ತಮ್ಮ ಆರು ಎಕರೆ ಜಮೀನಿನಲ್ಲಿದ್ದ ಸಿಹಿಜೋಳದ ಬೆಳೆಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ವಿಜಯ ಲಕ್ಷ್ಮಿ ತಿಳಿಸಿದ್ದಾರೆ.

ಎರಡೂವರೆ ತಿಂಗಳಿಂದ ಬೆಳೆಗಾಗಿ ಕಾಯುತ್ತಿದ್ದೆ, ಇನ್ನೂ 10 ದಿನಗಳಲ್ಲಿ ಬೆಳೆ ಕೊಯ್ಲು ಮಾಡಲು ನಿರ್ಧರಿಸಿದ್ದೆ, ಆದರೆ ಸೈಕ್ಲೋನ್ ನಿಂದಾಗಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ, ಹವಾಮಾನ ವೈಪರೀತ್ಯದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಫಂಗಲ್ ಸೋಂಕನ್ನು ತಡೆಗಟ್ಟುವ ಬಗ್ಗೆ ರೈತರಿಗೆ ತಿಳುವಳಿಕೆ ನೀಡುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಈರುಳ್ಳಿ ಉತ್ಪಾದನೆ ಮಾಡಿದ್ದರೂ ಗದಗದಲ್ಲಿ ಸಮರ್ಥ ಶೈತ್ಯಾಗಾರ ಸೌಲಭ್ಯಗಳ ಕೊರತೆ ಇದೆ. ಜಿಲ್ಲೆಯ ಕೃಷಿ ಮಾರುಕಟ್ಟೆ ಉತ್ಪನ್ನ ಸಮಿತಿಯು ಎರಡು ಕೋಲ್ಡ್ ಸ್ಟೋರೇಜ್ ಘಟಕಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೇ ರೈತರು ಬೆಳೆ ಶೇಖರಣೆ ಮಾಡಲು ಹರಸಾಹಸ ಪಡುತ್ತಿದ್ದು, ಕೂಡಲೇ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com