ಚಂದ್ರನಲ್ಲಿಗೆ 8 ಮಂದಿ ನಾಗರಿಕರ ಪಯಣ: ಜಪಾನ್ ಮೂಲದ ಬಿಲಿಯನೇರ್ ಮಿಷನ್ ನಲ್ಲಿ 'ಬಾಲ್ ವೀರ್' ಖ್ಯಾತಿಯ ನಟ ದೇವ್ ಜೋಷಿ ಭಾಗಿ

ಜಪಾನಿನ ವಾಣಿಜ್ಯೋದ್ಯಮಿ, ಬಿಲಿಯನೇರ್ ಯುಸಾಕು ಮೇಜಾವಾ ಅವರು ಕಳೆದ ವಾರಾಂತ್ಯದಲ್ಲಿ ಚಂದ್ರನಿಗೆ ಮೊದಲ ನಾಗರಿಕ ಮಿಷನ್‌ಗಾಗಿ 'ಡಿಯರ್ ಮೂನ್' ಯೋಜನೆ ಕಾರ್ಯಾಚರಣೆ ಘೋಷಿಸಿದ್ದರು. 'ಡಿಯರ್- ಮೂನ್' ಎಂಬುದು ಕಾರ್ಯಾಚರಣೆಗೆ ಹೆಸರಿಡಲಾಗಿದ್ದು, ಚಂದ್ರನಲ್ಲಿಗೆ ಪ್ರಯಾಣಿಸುವ ಎಂಟು ಮಂದಿಯಲ್ಲಿ ಬಾಲ್ ವೀರ್ ಮಕ್ಕಳ ಹಿಂದಿ ಧಾರವಾಹಿ ಖ್ಯಾತಿಯ ಭಾರತೀಯ ನಟ ದೇವ್ ಜೋಷಿ ಕೂಡ ಇದ್
ಬಾಲವೀರ್ ಖ್ಯಾತಿಯ ದೇವ್ ಜೋಷಿ
ಬಾಲವೀರ್ ಖ್ಯಾತಿಯ ದೇವ್ ಜೋಷಿ
Updated on

ಬೆಂಗಳೂರು: ಜಪಾನಿನ ವಾಣಿಜ್ಯೋದ್ಯಮಿ, ಬಿಲಿಯನೇರ್ ಯುಸಾಕು ಮೇಜಾವಾ ಅವರು ಕಳೆದ ವಾರಾಂತ್ಯದಲ್ಲಿ ಚಂದ್ರನಿಗೆ ಮೊದಲ ನಾಗರಿಕ ಮಿಷನ್‌ಗಾಗಿ 'ಡಿಯರ್ ಮೂನ್' ಯೋಜನೆ ಕಾರ್ಯಾಚರಣೆ ಘೋಷಿಸಿದ್ದರು. 'ಡಿಯರ್- ಮೂನ್' ಎಂಬುದು ಕಾರ್ಯಾಚರಣೆಗೆ ಹೆಸರಿಡಲಾಗಿದ್ದು, ಚಂದ್ರನಲ್ಲಿಗೆ ಪ್ರಯಾಣಿಸುವ ಎಂಟು ಮಂದಿಯಲ್ಲಿ ಬಾಲ್ ವೀರ್ ಮಕ್ಕಳ ಹಿಂದಿ ಧಾರವಾಹಿ ಖ್ಯಾತಿಯ ಭಾರತೀಯ ನಟ ದೇವ್ ಜೋಷಿ ಕೂಡ ಇದ್ದಾರೆ.

ಡ್ರೀಮ್ ಕ್ರ್ಯೂ ಎಂದು ಈ ಪಯಣಕ್ಕೆ ಹೆಸರಿಡಲಾಗಿದ್ದು ಬರುವ ವರ್ಷ 2023 ರ ಕೊನೆಯ ತ್ರೈಮಾಸಿಕದಲ್ಲಿ ಚಂದ್ರನಲ್ಲಿಗೆ ಪಯಣ ಬೆಳೆಸಲಾಗುತ್ತದೆ. ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್ ಅಭಿವೃದ್ಧಿಪಡಿಸಿದ ರಾಕೆಟ್ ಚಂದ್ರನ ಕಕ್ಷೆಯಲ್ಲಿ ಸುತ್ತಿ ವಾರದ ನಂತರ ಭೂಮಿಗೆ ಹಿಂತಿರುಗುತ್ತದೆ. 

2018 ರಲ್ಲಿ, ಮೇಜಾವಾ ಎಂಟು ಸೀಟುಗಳ ರಾಕೆಟ್ ಖರೀದಿಸಿದ್ದರು. ಈ ಕಾರ್ಯಾಚರಣೆಯಡಿ ಪ್ರಪಂಚದಾದ್ಯಂತದ ಅನೇಕ ಪ್ರತಿಭಾವಂತರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಆಯ್ಕೆಯಾದ ಎಂಟು ಮಂದಿಯಲ್ಲಿ ನಟ ದೇವ್ ಜೋಷಿ ಕೂಡ ಒಬ್ಬರು. 

"ಇದು ಒಂದು ಹೆಗ್ಗುರುತು ಯೋಜನೆಯಾಗಿದೆ ಈ ತಂಡದ ಭಾಗವಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ತಂಡದ ಅತ್ಯಂತ ಕಿರಿಯ ವ್ಯಕ್ತಿ ಮತ್ತು ತಂಡದಲ್ಲಿರುವ ಏಕೈಕ ಭಾರತೀಯ, ಇದು ನನಗೆ ಅತ್ಯಂತ ಜವಾಬ್ದಾರಿಯುತ ಅವಕಾಶವಾಗಿದೆ. ನನ್ನ ಪೀಳಿಗೆ ಮತ್ತು ನನ್ನ ದೇಶವನ್ನು ಪ್ರತಿನಿಧಿಸಲು ಸಿಕ್ಕಿರುವುದು ಸಂತೋಷವಾಗಿದೆ ಎಂದು ದೇವ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ(New Indian Express) ತಿಳಿಸಿದ್ದಾರೆ. 

ಇದರ ಆಯ್ಕೆ ಪ್ರಕ್ರಿಯೆಯಲ್ಲಿ, ಸಂಘಟಕರು 249 ದೇಶಗಳು ಮತ್ತು ಪ್ರದೇಶಗಳಿಂದ ಒಂದು ಮಿಲಿಯನ್ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಅಂತಿಮ ಹಂತಗಳಲ್ಲಿ ನಾನು ಮೇಜಾವಾ ಅವರನ್ನು ಭೇಟಿಯಾದೆ. ನಾನು ಯಾವಾಗಲೂ ಬಾಹ್ಯಾಕಾಶದ ಬಗ್ಗೆ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ. ಈ ಯೋಜನೆಯ ಘೋಷಣೆಯನ್ನು ಮಾಡಿದಾಗ ನಾನು ಬಲವೀರ್ ರಿಟರ್ನ್ಸ್ ಸೆಟ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದೆ, ಒಬ್ಬ ಕಲಾವಿದನಾಗಿರುವುದರಿಂದ, ಇದು ನನಗೆ ಆಸಕ್ತಿದಾಯಕವಾಗಿದೆ ಎಂದು ದೇವ್ ಜೋಷಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com