ಪ್ರಕೃತಿ ಮೇಲಿನ ದುಷ್ಪರಿಣಾಮಗಳನ್ನು ಸರಿದೂಗಿಸಲು ಹಸಿರು ಆಯವ್ಯಯ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಕೃತಿಯ ಮೇಲಿನ ದುಷ್ಪರಿಣಾಮಗಳನ್ನು ಸರಿದೂಗಿಸಲು 100 ಕೋಟಿ ರೂ. ಮೊತ್ತದ ಹಸಿರು ಆಯವ್ಯಯ (ಇಕೋ ಬಜೆಟ್)ವನ್ನು ಸರ್ಕಾರ ರೂಪಿಸಿದೆ ಎಂದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಳಗಾವಿ: ಪ್ರಕೃತಿಯ ಮೇಲಿನ ದುಷ್ಪರಿಣಾಮಗಳನ್ನು ಸರಿದೂಗಿಸಲು 100 ಕೋಟಿ ರೂ. ಮೊತ್ತದ ಹಸಿರು ಆಯವ್ಯಯ (ಇಕೋ ಬಜೆಟ್)ವನ್ನು ಸರ್ಕಾರ ರೂಪಿಸಿದೆ ಎಂದರು.

ರಾಷ್ಡ್ರೀಯ ಜಿಯಾಗ್ರಾಫರ್ಸ್ ಅಸೋಸಿಯೇಷನ್ ಆಪ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ 44 ನೇ ಇಂಡಿಯನ್ ಜಿಯಾಗ್ರಫಿ ಕಾಂಗ್ರೆಸ್ ನ ಮೂರು ದಿನಗಳ ಸಮ್ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿ ಮಾತನಾಡಿದರು.

ಜೈವಿಕತೆ  ಮತ್ತು ಆರ್ಥಿಕತೆ ಸಮಾನಂತರವಾಗಿ ಹೋಗುತ್ತದೆ. ಜೈವಿಕತೆಗಿಂತ ಆರ್ಥಿಕತೆ ವೇಗವಾಗಿ ಹೋಗುತ್ತಿದೆ.  ಈಗ ಜೈವಿಕ ಆರ್ಥಿಕತೆ ಬರಬೇಕಿದೆ. ಪುನರ್ಬಳಕೆ ಹಾಗೂ ಮರುಬಳಕೆಯ ಮಂತ್ರವನ್ನು ಪಾಲಿಸಬೇಕಿದೆ ಎಂದರು.

ನೀರಿನ ನಿರ್ವಹಣೆಯ ಮಹತ್ವ :

ಕರ್ನಾಟಕ ಅತ್ಯಂತ ಪ್ರಗತಿಪರ ರಾಜ್ಯ , ಹವಾಮಾನ ವೈಪರಿತ್ಯ, ಸುಸ್ಥಿರ ಅಭಿವೃದ್ಧಿ ಕುರಿತು ಚರ್ಚೆಯಾಗುತ್ತಿದ್ದು, ರಾಜ್ಯದ ಅಭಿವೃದ್ದಿಗೆ ಪೂರಕವಾಗುವ ಸಲಹೆಗಳನ್ನು ನೀಡಬೇಕು.

ಸಮ್ಮೇಳನಗಳು ಕೇವಲ ಬಹಳ ದಿನಗಳ ನಂತರ ಸೇರುವ ಸಭೆಗಳಾಗಬಾರದು.  ಹವಾಮಾನ ವೈಪರಿತ್ಯ ಆಗುತ್ತಿದೆ. ಅದರ ನಿಯಂತ್ರಣ,ಬದಲಾವಣೆ  ಹಾಗೂ ಕಾರ್ಬನ್ ಹೆಚ್ಚಳದ ಮಾಡುವ ಬಗ್ಗೆ  ಚರ್ಚೆಯಾಗಬೇಕು. ವಿಕೋಪಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಬೇಕು. ಹವಾಮಾನ ವೈಪರಿತ್ಯದಿಂದಾಗಿ ಬರಪ್ರದೇಶಗಳು ಮರಳುಗಾಡಾಗುತ್ತಿವೆ. ನದಿನೀರು ಸಮುದ್ರವನ್ನು ಸೇರುತ್ತಿಲ್ಲ. ಇದರಿಂದಾಗಿ ಮಳೆಯ ಸಂಭವ ಕಡಿಮೆಯಾಗಿ, ನೀರಿನ ಸಂಪನ್ಮೂಲ ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದ ನೀರಿನ ನಿರ್ವಹಣೆಯ ಬಹಳ ಮಹತ್ವದ್ದಾಗಿದೆ ಎಂದರು.

ಸುಸ್ಥಿರ ಅಭಿವೃದ್ಧಿಗೆ  ನೀರಿನ ಸಂಪನ್ಮೂಲ:

ರಾಜ್ಯದಲ್ಲಿ 4.5 ಲಕ್ಷ ಹೆಕ್ಕೇರ್ ಪ್ರದೆಶ ಸವಳು ಜವಳು ಭೂಮಿಯಾಗಿದೆ. ನೀರಿನ ಹರಿವಿಗೆ ಜಾಗವಿಲ್ಲದೇ ನಿಂತನೀರಾಗಿ ಭೂಮಿಯಲ್ಲಿನ ಫಲವತ್ತತೆ ಕಡಿಮೆಯಾಗುತ್ತಿದೆ.  ನಾವು ನೀರಾವರಿ ಯೋಜನೆಗೆ ಹಣ ವೆಚ್ಚ ಮಾಡುತ್ತಿದ್ದರೂ,‌ ಅದರಿಂದ ಜಮೀನು ಹಾಳು ಮಾಡುವುದಾದರೆ ಏನು ಪ್ರಯೋಜನ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರು ಸವಳು ಜವಳು ನಿವಾರಣೆಗೆ ಯೋಜನೆ ರೂಪಿಸಿ ಒಂದೂವರೆ ಲಕ್ಷ ಎಕರೆ ಜಮೀನು ಸವಳು ಜವಳು ನಿವಾರಣೆ ಮಾಡಲಾಯಿತು. ಇವು ಮನುಷ್ಯ ನಿರ್ಮಿತ ವಿಪತ್ತುಗಳಾಗಿವೆ. ನೀರು ಯಾರಿಗೆ ಸೇರಿದೆ ಎನ್ನುವುದು ಮೂಲಭೂತ ಪ್ರಶ್ನೆಯಾಗಿದೆ. ಪ್ರಾಕೃತಿಕ ಸಂಪತ್ತನ್ನು ಬಳಕೆ ಮಾಡುವಲ್ಲಿ ನಾವು ಸರಿಯಾದ ಮಾರ್ಗ ಅನುಸರಿಸುತ್ತಿಲ್ಲ. ಇಂತಹ ಮೂಲಭೂತ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಿದಾಗ  ಸುಸ್ಥಿರ ಅಭಿವೃದ್ಧಿಗೆ  ಜಲ ಸಂಪನ್ಮೂಲ ಪೂರಕವಾಗಿರುವಂತೆ ನೀತಿಗಳನ್ನು  ರೂಪಿಸಬಹುದಾಗಿದೆ ಎಂದರು.

ನೀತಿ ವೈಜ್ಞಾನಿಕವಾಗಿರಬೇಕು:

ಮನುಷ್ಯ ಮತ್ತು ಪ್ರಾಕೃತಿಕ ಸಂಪತ್ತಿನ ನಡುವಿನ ಸಂಬಂಧದ ಬಗ್ಗೆ ಸಂಶೋಧನೆಯಾಗಬೇಕು. ಪ್ರಾಕೃತಿಕ ಸಂಪತ್ತನ್ನು ನಮ್ಮ ಹಿರಿಯರು ನಮಗೆ ಬಿಟ್ಡು ಹೋಗಿದ್ದಾರೆ‌ . ನಾವು ನಮ್ಮ ಮುಂದಿನ ಪೀಳಿಗೆಗೆ ಬಿಟ್ಡು ಹೋಗದಿದ್ದರೆ, ನಾವು ಭವಿಷ್ಯದಿಂದ ಕದಿಯುತ್ತಿದ್ದೇವೆ ಎಂದರ್ಥ. ಆದ್ದರಿಂದ ಅತ್ಯಂತ ವೈಜ್ಞಾನಿಕವಾಗಿ, ಪ್ರಕೃತಿಗೆ ಹತ್ತಿರವಾಗಿರುವಂತಹ ನೀತಿ ರೂಪಿಸಬೇಕು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,  ಸಚಿವರಾದ ಸಿ.ಸಿ.ಪಾಟೀಲ್, ಡಾ. ಸಿ.ಎನ್ ಅಶ್ವತ್ಥ್ ನಾರಾಯಣ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಹಾಗೂ ಮತ್ತಿತರರು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com