ಬೆಂಗಳೂರು: 9 ತಿಂಗಳ ಹಿಂದಿನ ಪ್ರಕರಣದ ಕೊಲೆಗಾರರನ್ನು ಪತ್ತೆ ಹಚ್ಚಲು ಸುಳಿವು ನೀಡಿದ ಅನಾಮಧೇಯ ಪತ್ರ!

ಕಬ್ಬನ್ ಪಾರ್ಕ್ ಪೊಲೀಸರು ಒಂಬತ್ತು ತಿಂಗಳ ಹಿಂದಿನ ಕೊಲೆ ಪ್ರಕರಣವನ್ನು ಭೇದಿಸಿ ಐವರನ್ನು ಬಂಧಿಸಿದ್ದಾರೆ. ಅನಾಮಧೇಯ ಪತ್ರವು ರಹಸ್ಯವನ್ನು ಪರಿಹರಿಸಲು ಸಹಾಯ ಮಾಡಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಬ್ಬನ್ ಪಾರ್ಕ್ ಪೊಲೀಸರು ಒಂಬತ್ತು ತಿಂಗಳ ಹಿಂದಿನ ಕೊಲೆ ಪ್ರಕರಣವನ್ನು ಭೇದಿಸಿ ಐವರನ್ನು ಬಂಧಿಸಿದ್ದಾರೆ. ಅನಾಮಧೇಯ ಪತ್ರವು ರಹಸ್ಯವನ್ನು ಪರಿಹರಿಸಲು ಸಹಾಯ ಮಾಡಿತು.

ಚಿಕ್ಕಬಳ್ಳಾಪುರದ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ರಾಜ್ಯ ಅಧ್ಯಕ್ಷ ಎಚ್.ಜಿ. ವೆಂಕಟಾಚಲಪತಿ ಹಾಗೂ ಅವರ ಪುತ್ರ ಎ.ವಿ. ಶರತ್ ಕುಮಾರ್, ಸಹಚರರಾದ ಆರ್.ಶ್ರೀಧರ್, ಕೆ. ಧನುಷ್, ಯಲಹಂಕದ ಎಂ.ಪಿ. ಮಂಜುನಾಥ್ ಬಂಧಿತರು.

ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಡಿಎಸ್ ರಾಜೇಂದ್ರ ಅವರಿಗೆ ವಾರದ ಹಿಂದೆ ಅನಾಮಧೇಯ ಪತ್ರ ಬಂದಿದ್ದು, ಆರೋಪಿಗಳು ಕುಮಾರ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ಎವಿ ಶರತ್ ಕುಮಾರ್ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆತನ ಮಾಹಿತಿ ಮೇರೆಗೆ ನಾಲ್ವರನ್ನು ಬಂಧಿಸಲಾಗಿದ್ದು, ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಕಾರು ಕೊಡಿಸುವುದಾಗಿ ಎಚ್‌.ಶರತ್‌ ಚಿಕ್ಕಬಳ್ಳಾಪುರ ಹಾಗೂ ಯಲಹಂಕ ವಾಸಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದರು. ಕಾರನ್ನು ಕೊಡಿಸದ ಕಾರಣಕ್ಕೆ ಗ್ರಾಹಕರು ಆತನ ವಿರುದ್ಧ ತಿರುಗಿ ಬಿದ್ದಿದ್ದರು. ಶರತ್‌ ವಿರುದ್ಧವೂ ವಂಚನೆ ಪ್ರಕರಣ ದಾಖಸಿದ್ದರು.

ಕಳೆದ ಮಾರ್ಚ್‌ನಲ್ಲಿ ಹಣ ವಾಪಸ್ ಕೊಡಿಸುವಂತೆ ಹಣ ನೀಡಿದವರು ವೆಂಕಟಾಚಲಪತಿ ಬಳಿ ಕೇಳಿಕೊಂಡಿದ್ದರು. ನಂತರ ಆರೋಪಿಗಳು, ಕೋಣನಕುಂಟೆ ಶರತ್ ಅವರನ್ನು ಅಪಹರಿಸಿ ಗೌರಿಬಿದನೂರಿನ ತೋಟದ ಮನೆಗೆ ಕರೆದೊಯ್ದು ಅಲ್ಲಿ ಕೊಲೆ ಮಾಡಿದ್ದರು. ಮೃತದೇಹವನ್ನು ಚಾರ್ಮಾಡಿ ಘಾಟಿಗೆ ಎಸೆದು ಸಾಕ್ಷ್ಯ ನಾಶ ಪಡಿಸಿದ್ದರು.

‘ಹಣ ಕಳೆದುಕೊಂಡವರು ಮನವಿಯ ಮೇರೆಗೆ ವೆಂಕಟಾಚಲಪತಿ ತನ್ನ ಪುತ್ರ ಎ.ವಿ.ಶರತ್‌ನಿಗೆ ಹಣ ವಸೂಲಿ ಮಾಡುವಂತೆ ಸೂಚಿಸಿದ್ದರು. ತನ್ನ ಸ್ನೇಹಿತರು ಹಾಗೂ ಹಣ ಕಳೆದುಕೊಂಡವರ ಜತೆಗೆ ಸೇರಿಕೊಂಡು ಎಚ್.ಶರತ್‌ನನ್ನು ಅಪಹರಣಕ್ಕೆ ಯೋಜನೆ ರೂಪಿಸಿದ್ದರು. ಬನಶಂಕರಿ ಬಳಿ ಕರೆಸಿಕೊಂಡು ಅಲ್ಲಿಂದ ಅಪಹರಣ ಮಾಡಲಾಗಿತ್ತು. .

ಅಪಹರಣದ ಬಳಿಕ ಆರೋಪಿಗಳು ಶರತ್‌ ಅವರ ಮೊಬೈಲ್‌ ಅನ್ನೇ ಕಸಿದುಕೊಂಡು ‘ನಾನು ಕೆಲಸಕ್ಕೆಂದು ಹೊರರಾಜ್ಯಕ್ಕೆ ತೆರಳುತ್ತಿದ್ದೇನೆ. ನನ್ನ ಹುಡುಕುವುದು ಬೇಡ’ ಎಂದು ಪೋಷಕರಿಗೆ ಸಂದೇಶ ಕಳುಹಿಸಿದ್ದರು. ಸಿನಿಮೀಯ ರೀತಿಯಲ್ಲಿ ಆತನ ಮೊಬೈಲ್‌ ಅನ್ನು ಲಾರಿಯಲ್ಲಿ ಮೊಬೈಲ್‌ ಎಸೆಯಲಾಗಿತ್ತು. ಮೊಬೈಲ್ ಬಿದ್ದಿದ್ದ ಲಾರಿ ಮೈಸೂರು ಮಾರ್ಗವಾಗಿ ಕೇರಳ ರಾಜ್ಯಕ್ಕೆ ತೆರಳಿತ್ತು. ಬಳಿಕ ಮೊಬೈಲ್‌ ಸಹ ಸ್ವಿಚ್ಡ್‌ ಆಫ್ ಆಗಿತ್ತು.

ಘಟನೆ ನಡೆದು ಕೆಲವು ತಿಂಗಳಾದ ಮೇಲೆ ಕೇಂದ್ರ ವಿಭಾಗದ ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಗೆ ವ್ಯಕ್ತಿಯೊಬ್ಬರು ಪತ್ರ ಬರೆದು ಕೊಲೆಯ ಸುಳಿವು ನೀಡಿದ್ದರು. ಹಲ್ಲೆಯ ವಿಡಿಯೊಗಳನ್ನು ಪೆನ್‌ಡ್ರೈವ್‌ವೊಂದರಲ್ಲಿ ಕಳುಹಿಸಿದ್ದರು. ಈ ದೃಶ್ಯಾವಳಿ ಗಮನಿಸಿದ ಪೊಲೀಸರು ತನಿಖೆಗೆ ವಿಶೇಷ ತಂಡ ರಚಿಸಿ ರಹಸ್ಯ ಕಾರ್ಯಾಚರಣೆ ನಡೆಸಿದ್ದರು. ವಿಡಿಯೊ ಪರಿಶೀಲನೆ ನಡೆಸಿದಾಗ ಶರತ್‌ಗೆ ಹಲ್ಲೆ ನಡೆಸುತ್ತಿರುವುದು ಆರೋಪಿಗಳ ಚಹರೆ ಗೊತ್ತಾಗಿತ್ತು. ಅದನ್ನೇ ಆಧರಿಸಿ ಐವರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com