ಬೆಂಗಳೂರು: ಐಷಾರಾಮಿ ಪಬ್ ನಲ್ಲಿ ವ್ಯಕ್ತಿಯೋರ್ವನಿಗೆ ಥಳಿಸಿ ದವಡೆ ಮುರಿದ ಬೌನ್ಸರ್ ಗಳು! 

ಚೆನ್ನೈ ಮೂಲದ ಸ್ಟಾರ್ಟ್ ಅಪ್ ಮಾಲಿಕ- ಬೌನ್ಸರ್ ಗಳ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿ ಬೌನ್ಸರ್ ಗಳು ಆ ವ್ಯಕ್ತಿಯ ದವಡೆ ಮುರಿದಿರುವ ಘಟನೆ ಕೋರಮಂಗಲದ 5 ನೇ ಬ್ಲಾಕ್ ನ ಐಷಾರಾಮಿ ಪಬ್ ನಲ್ಲಿ ನಡೆದಿದೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ಬೆಂಗಳೂರು: ಚೆನ್ನೈ ಮೂಲದ ಸ್ಟಾರ್ಟ್ ಅಪ್ ಮಾಲಿಕ- ಬೌನ್ಸರ್ ಗಳ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿ ಬೌನ್ಸರ್ ಗಳು ಆ ವ್ಯಕ್ತಿಯ ದವಡೆ ಮುರಿದಿರುವ ಘಟನೆ ಕೋರಮಂಗಲದ 5 ನೇ ಬ್ಲಾಕ್ ನ ಐಷಾರಾಮಿ ಪಬ್ ನಲ್ಲಿ ನಡೆದಿದೆ. 

ದೊಮ್ಮಲೂರಿನ ಪಟೇಲ್ ರಾಮ ರೆಡ್ಡಿ ರಸ್ತೆಯಲ್ಲಿರುವ ಮನೆಯಲ್ಲಿರುವ ಶ್ರೀರಾಮ್ ತಿರುಮಲೈ ಎಂಬ 32 ವರ್ಷದ ಸಂತ್ರಸ್ತ ವ್ಯಕ್ತಿ ಹಾಗೂ ಆತನ 10 ಮಂದಿ ಸ್ನೇಹಿತರು ಬರ್ತ್ ಡೇ ಆಚರಣೆಗಾಗಿ ಪಬ್ ಗೆ ಆಗಮಿಸಿದ್ದರು. ಈ ವೇಳೆ ಶ್ರೀರಾಮ್ ತಿರುಮಲೈ ಅವರ ಫೋನ್ ಗೆ ಕರೆ ಬಂದಿದ್ದು, ಸದ್ದು ಗದ್ದಲದ ಕಾರಣದಿಂದಾಗಿ ಕರೆ ಸ್ವೀಕರಿಸಲಾಗದ್ದಕ್ಕೆ ಪಬ್ ನಿಂದ ಹೊರ ಬಂದು ಕರೆ ಸ್ವೀಕರಿಸಿದ್ದಾರೆ. ಕರೆ ಮುಕ್ತಾಯಗೊಳಿಸಿ ವಾಪಸ್ ಪಬ್ ಒಳಗೆ ಪ್ರವೇಶಿಸಲು ಯತ್ನಿಸಿದಾಗ ಬೌನ್ಸರ್ ಗಳು ತಡೆದಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು ಬೌನ್ಸರ್ ಗಳು ಆತನನ್ನು ಟೆರೆಸ್ ಗೆ ಕರೆದೊಯ್ದು ಮುಖಕ್ಕೆ ಪಂಚ್ ಮಾಡಿದ್ದಾರೆ. ಪಬ್ ನಿಂದ ಹೊರಹಾಕಬೇಕಾದರೆ ಆತನ ಸ್ನೇಹಿತರು ಬಂದು ರಕ್ಷಿಸಿದ್ದಾರೆ. 

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದೊಗೆ ಮಾತನಾಡಿರುವ ಶ್ರೀರಾಮ್, ತಾವು ಸ್ಟಾರ್ಟ್ ಅಪ್ ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಹಲ್ಲೆಗೊಳಗಾದ ಶ್ರೀರಾಮ್ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.
 
ಶಂಕಿತರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಬೌನ್ಸರ್ ಗಳು ಏಕೆ ಅನುಮತಿ ನಿರಾಕರಿಸಿದರು ಎಂಬುದನ್ನು ತಿಳಿಯುವುದಕ್ಕಾಗಿ ಸಿಸಿಟಿವಿ ಫುಟೇಜ್ ನ್ನು ಪರಿಶೀಲಿಸಲಾಗಿದೆ.  ಸಂತ್ರಸ್ತ ವ್ಯಕ್ತಿ ಪಬ್ ನಿಂದ ಹೊರ ಹೋಗಬೇಕಾದರೆ ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ನೀಡದೇ ಹೊರಹೋಗಿದ್ದಾರೆ, ಮ್ಯಾನೇಜ್ಮೆಂಟ್ ನ ಪ್ರಕಾರ ಗ್ರಾಹಕರು ಹೊರಹೋಗಿ ಮರಳಿ ಬರುವುದಾದರೆ ಈ ಬಗ್ಗೆ ಗಾರ್ಡ್ ಗಳಿಗೆ ತಿಳಿಸಬೇಕೆಂಬ ನಿಯಮವಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com