ದೂದ್ ಸಾಗರ್ ಜಲಪಾತದ ರೈಲು ಮಾರ್ಗದಲ್ಲಿ ವಿಸ್ತಾಡೋಮ್ ಕೋಚ್ ಅಳವಡಿಕೆ; ಯೋಜನೆ ಕೈಗೂಡುವುದೆಂತು?

ಪಶ್ಚಿಮ ಘಟ್ಟ ಹಾಗೂ ದೂದ್ ಸಾಗರ್ ಜಲಪಾತಗಳ ಮೂಲಕ ಹಾದು ಹೋಗುವ ರೈಲುಗಳಿಗೆ ವಿಸ್ಟಾಡೋಮ್ ಕೋಚ್ ಗಳನ್ನು ಅಳವಡಿಸಲು ನೈಋತ್ಯ ರೈಲ್ವೆ (ಎಸ್ ಡಬ್ಲ್ಯುಆರ್) ಯೋಜನೆ ಹೊಂದಿದೆ.
ದೂದ್ ಸಾಗರ್ ಜಲಪಾತದ ಬಳಿ ರೈಲು
ದೂದ್ ಸಾಗರ್ ಜಲಪಾತದ ಬಳಿ ರೈಲು

ಹುಬ್ಬಳ್ಳಿ: ಪಶ್ಚಿಮ ಘಟ್ಟ ಹಾಗೂ ದೂದ್ ಸಾಗರ್ ಜಲಪಾತಗಳ ಮೂಲಕ ಹಾದು ಹೋಗುವ ರೈಲುಗಳಿಗೆ ವಿಸ್ಟಾಡೋಮ್ ಕೋಚ್ ಗಳನ್ನು ಅಳವಡಿಸಲು ನೈಋತ್ಯ ರೈಲ್ವೆ (ಎಸ್ ಡಬ್ಲ್ಯುಆರ್) ಯೋಜನೆ ಹೊಂದಿದೆ.

ಶೀಘ್ರವೇ ಪ್ರಯಾಣಿಕರು ದೂದ್ ಸಾಗರ್ ನಲ್ಲಿ ವಿಸ್ಟಾಡೋಮ್ ಮೂಲಕ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ದೂದ್ ಸಾಗರ್ ಕ್ಯಾಸ್ಕೇಡ್ ಮೂಲಕ ಹಾದು ಹೋಗುವ ರೈಲು ಮಾರ್ಗದಲ್ಲಿ ವಿಸ್ತಾಡೋಮ್ ಕೋಚ್ ಗಳ ಅಳವಡಿಕೆ ಈ ಪ್ರದೇಶದ ದೀರ್ಘಾವಧಿ ಬೇಡಿಕೆಯಾಗಿತ್ತು. ಪರಿಣಾಮವಾಗಿ ಈಗ ನೈಋತ್ಯ ರೈಲ್ವೆ ಇಲಾಖೆ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಪೈಕಿ ಒಂದಕ್ಕೆ ವಿಸ್ಟಾಡೋಮ್ ಕೋಚ್ ಅಳವಡಿಸಲಾಗುತ್ತದೆ ಈ ಬಗ್ಗೆ ದಕ್ಷಿಣ ರೈಲ್ವೆ, ಕೊಂಕಣ ರೈಲ್ವೆ ಮತ್ತು ಕೇಂದ್ರ ರೈಲ್ವೆ ವಲಯಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಬೆಳಗಾವಿ, ಲೋಂಡಾ, ದೂದ್ ಸಾಗರ್, ಮದ್ಗಾಂವ್, ಕಾರವಾರ ಹಾಗೂ ಮಂಗಳೂರು ಮಾರ್ಗವಾಗಿ ಸಂಚರಿಸುವ ಎರ್ನಾಕುಲಮ್ ನಿಂದ ಪುಣೆಗೆ ತೆರಳುವ ಪೂರ್ಣಾ ಎಕ್ಸ್ ಪ್ರೆಸ್ ರೈಲಿಗೆ ವಿಸ್ಟಾಡೋಮ್ ನ್ನು ಅಳವಡಿಸುವುದು ಸೂಕ್ತ. ಈ ರೈಲು ವಾರದಲ್ಲಿ ಎರಡು ಬಾರಿ ಸಂಚರಿಸಲಿದ್ದು, ಹೆಚ್ಚು ಮಂದಿ ಪ್ರಯಾಣಿಸುತ್ತಾರೆ. ಈ ರೈಲು ಹಲವು ಪ್ರವಾಸಿ ತಾಣಗಳಿಂದ, ಪಶ್ಚಿಮ ಘಟ್ಟ, ನಾಲ್ಕು ರಾಜ್ಯಗಳಿಂದ ಬರುವ ಹಿನ್ನೆಲೆಯಲ್ಲಿ ಇದೇ ರೈಲು ಸೂಕ್ತ ಎಂಬ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ. 

ಬೇರೆ ವಲಯಗಳೊಂದಿಗೆ ಮಾತುಕತೆ ಪೂರ್ಣಗೊಂಡ ಬಳಿಕ ಪ್ರಸ್ತಾವನೆಯನ್ನು ಕೇಂದ್ರ ರೈಲ್ವೆ ಮಂಡಳಿಗೆ ಕಳಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com