ಬೆಂಗಳೂರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಪಲ್ಗುಣಿ ಗ್ರಾಮದ ಕಲಾನಾಥೇಶ್ವರ ದೇವಸ್ಥಾನಕ್ಕೆ ಮರದ ರಥವನ್ನು ಕೊಡುಗೆಯಾಗಿ ನೀಡುವ ಹರಕೆ ಹಿಂಪಡೆದಿದ್ದಾರೆ.
2019ರಲ್ಲಿ ಬಿಜೆಪಿಯ ನಾಯಕ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ದೇವಸ್ಥಾನಕ್ಕೆ ರಥವನ್ನು ನೀಡುವುದಾಗಿ ಕುಮಾರಸ್ವಾಮಿ ಹರಕೆ ಹೊತ್ತುಕೊಂಡಿದ್ದರು.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಶಾಸಕ ಎಂ ಪಿ ಕುಮಾರಸ್ವಾಮಿ, ರಥ ನಿರ್ಮಾಣಕೆಕ 40 ಲಕ್ಷ ರು ಅಗತ್ಯವಿದೆ, ಸರ್ಕಾರದಿಂದ 25 ಲಕ್ಷ ಸಹಾಯ ಧನ ಕೋರಿದ್ದೇನೆ, ಸರ್ಕಾರ ನೀಡಿರುವ 25 ಲಕ್ಷ ಹಣದ ಜೊತೆಗೆ ಉಳಿದ ಹಣವನ್ನು ಹೊಂದಿಸಲು ಸಾಧ್ಯವಾಗಲಿಲ್ಲ, ಹೀಗಾಗಿ ರಥ ನೀಡುವ ಯೋಜನೆಯನ್ನು ಕೈ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಯಡಿಯೂರಪ್ಪ ದೀರ್ಘಾವದಿಯಲ್ಲಿ ಮುಖ್ಯಮಂತ್ರಿಯಾಗಿರಲಿಲ್ಲ ಎಂದು ಹೇಳಿದ್ದಾರೆ. ರಥ ನಿರ್ಮಾಣಕ್ಕಾಗಿ ಲೋನ್ ಪಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ರಥ ನಿರ್ಮಾಣಕ್ಕೆ ಆರ್ಡರ್ ಮಾಡಲು ಹಣದ ವ್ಯವಸ್ಥೆ ಮಾಡುವಂತೆ ಗ್ರಾಮದ ನಿವಾಸಿಗಳಿಗೆ ಹೇಳಿದ್ದೆ. ಆದರೆ, ಇದುವರೆಗೆ ಭಕ್ತರಿಂದ ಕೇವಲ 50 ಸಾವಿರ ರೂ ಹಣ ಸಂಗ್ರಹವಾಗಿದೆ. 2021ರ ಜನವರಿಯಲ್ಲಿ ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಕುಮಾರಸ್ವಾಮಿ 25 ಲಕ್ಷ ರೂ. ಹಣ ನೀಡುವಂತೆ ಕೋರಿದ್ದರು.
ಎಂಪಿ ಕುಮಾರಸ್ವಾಮಿ ಅವರ ಮನವಿಯನ್ನು ಪರಿಗಣಿಸಿದ್ದ ಯಡಿಯೂರಪ್ಪ ಅಂದಿನ ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿ ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಕಲಾನಾಥೇಶ್ವರ ದೇವಸ್ಥಾನಕ್ಕೆ 25 ಲಕ್ಷ ರೂ. ಹಣ ನೀಡುವಂತೆ ಹೇಳಿದ್ದರು, ಆದರೆ, ಹಣ ಇನ್ನೂ ಬಿಡುಗಡೆಯಾಗಿಲ್ಲ.
Advertisement