ಒಂದು ಬಸ್‌ಗೆ ಚಾಲಕ ಮಾತ್ರ ಸಾಕು, ಕಂಡಕ್ಟರ್ ಬೇಡ: ಸರ್ಕಾರಕ್ಕೆ ಸಾರಿಗೆ ನಿಗಮ ಪುನಶ್ಚೇತನ ವರದಿ ಸಲ್ಲಿಕೆ

ಸಾರಿಗೆ ನಿಗಮ ಪುನಶ್ಚೇತನಗೊಳಿಸುವ ಅಂತಿಮ ವರದಿ ಮಂಗಳವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಆರ್. ಶ್ರೀನಿವಾಸ ಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ,...
ಕೆಎಸ್ ಆರ್ ಟಿಸಿ ಬಸ್
ಕೆಎಸ್ ಆರ್ ಟಿಸಿ ಬಸ್
Updated on

ಬೆಂಗಳೂರು: ಸಾರಿಗೆ ನಿಗಮ ಪುನಶ್ಚೇತನಗೊಳಿಸುವ ಅಂತಿಮ ವರದಿ ಮಂಗಳವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಆರ್. ಶ್ರೀನಿವಾಸ ಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ, ಈ ಅಂತಿಮ ವರದಿಯನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿತು. ಈ ವರದಿಯಲ್ಲಿ ಪ್ರಮುಖವಾಗಿ ಒಂದು ಬಸ್ಸಿಗೆ ಚಾಲಕನೊಬ್ಬನೇ ಸಾಕು.. ಆತನೆ ನಿರ್ವಾಹಕನ ಕೆಲಸ ನಿರ್ವಹಿಸುವಂತಿರಬೇಕೆಂದು ಶಿಫಾರಸು ಮಾಡಲಾಗಿದೆ.

ಸಾರಿಗೆ ವ್ಯವಸ್ಥೆಯ ಸೋರಿಕೆ ತಡೆಗಟ್ಟುವುದು, ಸಂಪನ್ಮೂಲ ಸೃಜನೆಗೆ ಒತ್ತು ನೀಡುವುದು, ಸಂಸ್ಥೆಗಳ ಉತ್ತಮ ಸೇವೆಯ ಮೂಲಕ ಲಾಭದಾಯಕವಾಗಿ ಕಾರ್ಯನಿರ್ವಹಿಸುವುದು,  ನಾಲ್ಕೂ ಸಾರಿಗೆ ಸಂಸ್ಥೆಗಳ ಸುಸ್ಥಿರ ಕಾರ್ಯ ನಿರ್ವಹಣೆ ಕುರಿತು ವರದಿಯಲ್ಲಿ‌ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಾರ್ಯದರ್ಶಿ ಜಯರಾಂ ರಾಯಪುರ, ಸಾರಿಗೆ ಇಲಾಖೆ ಕಾರ್ಯದರ್ಶಿ ಪ್ರಸಾದ್, ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿಯ ಕೆಲ ಪ್ರಮುಖ ಅಂಶಗಳು
– ಸಾರಿಗೆ ನಿಗಮಗಳ ಆರ್ಥಿಕ ನಷ್ಟ ದೂರ ಮಾಡಲು ಹಲವು ಶಿಫಾರಸು

– ನಾಲ್ಕೂ ಸಾರಿಗೆ ನಿಗಮಗಳಿಗೆ ಮಧ್ಯವರ್ತಿ ಸಂಸ್ಥೆಯಿಂದ ಹಣಕಾಸು ಸಾಲ

– ನಿಗಮಗಳು ತಮ್ಮ ಆದಾಯದಲ್ಲೇ ಮುಂದುವರೆಯುವಂತೆ ಮಾಡುವ ಬಗ್ಗೆ ಸಲಹೆ

– ಸದ್ಯ ನಾಲ್ಕೂ ನಿಗಮಗಳ ಬಳಿ 24 ಸಾವಿರ ಬಸ್ ಗಳಿವೆ

– 2030ರ ಹೊತ್ತಿಗೆ ಬಸ್ ಗಳ ಸಂಖ್ಯೆ 40 ಸಾವಿರಕ್ಕೆ ಏರಿಸಲು ಕ್ರಮವಹಿಸಲು ಶಿಫಾರಸು

– ಬಸ್ ಗಳ ಖರೀದಿಗೆ ಸರ್ಕಾರ ಹಣ ನೀಡದೇ ಮಧ್ಯವರ್ತಿ ಸಂಸ್ಥೆಯಿಂದ ಹಣಕಾಸು ಒದಗಿಸಬೇಕು

– ಒಂದು ಬಸ್ ಗೆ ಚಾಲಕ ಮಾತ್ರ ಸಾಕು. ಚಾಲಕನೇ ನಿರ್ವಾಹಕನ ಕೆಲಸ ಮಾಡುವಂತಿರಬೇಕು

– ಬಸ್ ಗಳನ್ನು ಸ್ಟಾಪ್ ಟು ಸ್ಟಾಪ್ ಮಾತ್ರ ನಿಲ್ಲಿಸುವಂತಿರಬೇಕು
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com