ಚಿಕ್ಕೋಡಿ: ಅಪಘಾತದಲ್ಲಿ ಮೃತಪಟ್ಟ ಬಿಎಸ್‌ಎಫ್ ಯೋಧನಿಗೆ ಅಂತಿಮ ವಿದಾಯ

ಪಶ್ಚಿಮ ಬಂಗಾಳದ ಕಿಶನ್‌ಗಂಜ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಬಿಎಸ್‌ಎಫ್ ಯೋಧ ಸೂರಜ್ ಧೋಂಡಿರಾಮ್ ಸುತಾರ್(30) ಅವರ ಅಂತ್ಯಸಂಸ್ಕಾರವನ್ನು ಸಕಲ...
ಯೋಧನ ಪತ್ನಿಯ ಆಕ್ರಂದನ
ಯೋಧನ ಪತ್ನಿಯ ಆಕ್ರಂದನ

ಬೆಳಗಾವಿ: ಪಶ್ಚಿಮ ಬಂಗಾಳದ ಕಿಶನ್‌ಗಂಜ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಬಿಎಸ್‌ಎಫ್ ಯೋಧ ಸೂರಜ್ ಧೋಂಡಿರಾಮ್ ಸುತಾರ್(30) ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. 

ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ನಿಯೋಜಿಸಲಾಗಿದ್ದ ಬಿಎಸ್‌ಎಫ್ ಯೋಧ ಸೂರಜ್ ಧೋಂಡಿರಾಮ್ ಜುಲೈ 18 ರಂದು ಕಿಶನ್‌ಗಂಜ್‌ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ ದೆಹಲಿಯಿಂದ ವಿಮಾನದಲ್ಲಿ ಬೆಳಗಾವಿಗೆ ತರಲಾಗಿತ್ತು. ನಂತರ ಅವರ ಸ್ವಗ್ರಾಮ ಯದುರವಾಡಿಗೆ ಕೊಂಡೊಯ್ಯಲಾಯಿತು.

ಯೋಧನ ಅಂತ್ಯಕ್ರಿಯೆಯನ್ನು ಚಿಕ್ಕೋಡಿ ತಾಲೂಕಿನ ಯಡೂರವಾಡಿಯಲ್ಲಿರುವ ಅವರ ಸ್ವಗ್ರಾಮದಲ್ಲಿ ಬುಧವಾರ ನೆರವೇರಿಸಲಾಯಿತು. ಕೋಬ್ರಾ ಸ್ಕೂಲ್ ಆಫ್ ಜಂಗಲ್ ವಾರ್ಫೇರ್ ಅಂಡ್ ಟ್ಯಾಕ್ಟಿಕ್ಸ್ (CSJWT) ನ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. 

ಪಶ್ಚಿಮ ಬಂಗಾಳದ ರುಬೀನಾ ಎಂಬ ಹೆಸರಿನ ಯುವತಿಯೊಬ್ಬಳನ್ನ ಲವ್ ಮಾಡಿ ಐದು ವರ್ಷದ ಹಿಂದೆ ಯಡೂರುವಾಡಿಯಲ್ಲೆ ಮನೆಯವರ ಸಮ್ಮುಖದಲ್ಲೆ ಮದುವೆ ಆಗಿದ್ದ ಸೂರಜ್ ರೂಬೀನಾ ದಂಪತಿಗೆ ಮೂರು ವರ್ಷದ ಪುಟ್ಟ ಹೆಣ್ಣು ಮಗು ಇದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com