ದೇಶದಲ್ಲೇ ಮೊದಲು: ಎಂಜಿ ರಸ್ತೆಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ 5G ನೆಟ್‌ವರ್ಕ್ ಪರೀಕ್ಷೆ!

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಪ್ರಾಯೋಗಿಕ ಯೋಜನೆಯಡಿಯಲ್ಲಿ 5G ನೆಟ್‌ವರ್ಕ್ ಅನ್ನು ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ಪಾತ್ರವಾಗಿದೆ.
ಎಂಜಿ ರಸ್ತೆ ಮೆಟ್ರೋ ನಿಲ್ದಾಣ
ಎಂಜಿ ರಸ್ತೆ ಮೆಟ್ರೋ ನಿಲ್ದಾಣ
Updated on

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಪ್ರಾಯೋಗಿಕ ಯೋಜನೆಯಡಿಯಲ್ಲಿ 5G ನೆಟ್‌ವರ್ಕ್ ಅನ್ನು ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ಪಾತ್ರವಾಗಿದೆ.

ಎಂಜಿ ರಸ್ತೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ರಿಲಯನ್ಸ್ ಜಿಯೋ 5ಜಿ ನೆಟ್‌ವರ್ಕ್ ಸ್ಥಾಪಿಸಿದ್ದು ಸುಮಾರು 200 ಮೀಟರ್ ವ್ಯಾಪ್ತಿಗೆ 5G ನೆಟ್‌ವರ್ಕ್ ಸಿಗುತ್ತಿದ್ದು  1.45 Gbps ಡೌನ್‌ಲೋಡ್ ಮತ್ತು 65 Mbps ಅಪ್‌ಲೋಡ್ ವೇಗವನ್ನು ಸಾಧಿಸಿದೆ. ಇದು 4Gಗಿಂತ 50 ಪಟ್ಟು ವೇಗವಾಗಿದೆ.

ಪ್ರಾಯೋಗಿಕ ಪರೀಕ್ಷೆ ಬಗ್ಗೆ ಟ್ವೀಟ್ ಮಾಡಿರುವ ಬಿಎಂಆರ್ಸಿಎಲ್ ಎಂಜಿ ರಸ್ತೆಯಲ್ಲಿ 5 ಜಿ ನೆಟ್‌ವರ್ಕ್ ಪರೀಕ್ಷೆ ನಡೆದಿದ್ದು ಇದು 4ಜಿ ನೆಟ್‌ವರ್ಕ್ ಗಿಂತಲೂ 50 ಪಟ್ಟು ವೇಗವಾಗಿದೆ ಎಂದು ಟ್ವೀಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com