ಜಲ ಜೀವನ್ ಮಿಷನ್ ಯೋಜನೆ ಜಾರಿ: ಗದಗ ಜಿಲ್ಲೆಗೆ ಮೊದಲ ಸ್ಥಾನ

ಜಲ ಜೀವನ್ ಮಿಷನ್ (JJM) ಯೋಜನೆ ಅನುಷ್ಠಾನದಲ್ಲಿ ಗದಗ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಧಾರವಾಡ, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆ ನಂತರದ ಸ್ಥಾನಗಳಲ್ಲಿವೆ. ಯೋಜನೆ ಅನುಷ್ಠಾನಕ್ಕೆ ಗ್ರಾಮಸ್ಥರು ನೀಡಿದ ಅಪಾರ ಬೆಂಬಲ ಯಶಸ್ಸಿಗೆ ಕಾರಣವಾಗಿದೆ. 
ಶಿರಹಟ್ಟಿ ತಾಲ್ಲೂಕಿನಲ್ಲಿ ಅಜ್ಜಿಯೊಬ್ಬರು ಕೊಳಾಯಿಯಿಂದ ನೀರು ಹಿಡಿಯುತ್ತಿರುವುದು
ಶಿರಹಟ್ಟಿ ತಾಲ್ಲೂಕಿನಲ್ಲಿ ಅಜ್ಜಿಯೊಬ್ಬರು ಕೊಳಾಯಿಯಿಂದ ನೀರು ಹಿಡಿಯುತ್ತಿರುವುದು
Updated on

ಗದಗ: ಜಲ ಜೀವನ್ ಮಿಷನ್ (JJM) ಯೋಜನೆ ಅನುಷ್ಠಾನದಲ್ಲಿ ಗದಗ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಧಾರವಾಡ, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆ ನಂತರದ ಸ್ಥಾನಗಳಲ್ಲಿವೆ. ಯೋಜನೆ ಅನುಷ್ಠಾನಕ್ಕೆ ಗ್ರಾಮಸ್ಥರು ನೀಡಿದ ಅಪಾರ ಬೆಂಬಲ ಯಶಸ್ಸಿಗೆ ಕಾರಣವಾಗಿದೆ. 

ಗದಗ ಜಿಲ್ಲೆ ಜೆಜೆಎಂ ಯೋಜನೆಯ ಅನುಷ್ಠಾನದಲ್ಲಿ ಶೇ.97.84 ಸಾಧಿಸಿದ್ದರೆ, ಧಾರವಾಡ ಶೇ.95.37, ಮಂಡ್ಯ ಶೇ.77.55, ದಕ್ಷಿಣ ಕನ್ನಡ ಶೇ.75.86, ಕೊಪ್ಪಳ ಶೇ.75.66 ಸಾಧಿಸಿದೆ. 

ಅಬ್ಬಿಗೇರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮೀರ ನಾಯಕ್, ಕೆಲವು ಗ್ರಾಮಸ್ಥರು ಯೋಜನೆಗೆ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದರೂ ನಂತರ ಮನವೊಲಿಸಲಾಯಿತು. ಈಗ, ಬಹುತೇಕ ಎಲ್ಲಾ ಮನೆಗಳು ನೀರಿನ ಸಂಪರ್ಕವನ್ನು ಹೊಂದಿದ್ದು, ಈ ವಾರಾಂತ್ಯದೊಳಗೆ ನಾವು ಕೆಲಸವನ್ನು ಪೂರ್ಣಗೊಳಿಸುತ್ತೇವೆ ಎಂದಿದ್ದಾರೆ. 

ಜೆಜೆಎಂ ಯೋಜನೆಯ ಕಾರ್ಯಪಾಲಕ ಅಭಿಯಂತರ ಆನಂದ್, ಗ್ರಾಮಸ್ಥರು, ಗ್ರಾ.ಪಂ.ಸಿಬ್ಬಂದಿ, ಪಿಡಿಒಗಳು ಹಾಗೂ ಐಎಸ್‌ಎ ತಂಡಕ್ಕೆ ಧನ್ಯವಾದ ಹೇಳಬೇಕು. ನಾವು  ಶೇಕಡಾ 100ರಷ್ಟು ಕೆಲಸಗಳನ್ನು ಪೂರ್ಣಗೊಳಿಸಿದ್ದೇವೆ. ರೋಣ ಮತ್ತು ಶಿರಹಟ್ಟಿ ತಾಲೂಕು ದೊಡ್ಡದಾಗಿರುವುದರಿಂದ ಸಮಯ ತೆಗೆದುಕೊಳ್ಳುತ್ತಿದೆ ಎಂದರು.

ಬೆಳಗಾವಿ, ಗದಗ, ಹುಬ್ಬಳ್ಳಿ ಅಥವಾ ಧಾರವಾಡ ಪ್ರದೇಶವನ್ನು ಜಲಜೀವನ ಮಿಷನ್‌ ಹಂತ-1 ರಲ್ಲಿ ಆಯ್ಕೆ ಮಾಡಲಾಗಿದೆ. ನಾನು ಈ ಹಿಂದೆ ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದಾಗ ಈಗಾಗಲೇ 800 ಗ್ರಾಮಗಳನ್ನು ಸಮೀಕ್ಷೆ ಮಾಡಲಾಗಿತ್ತು. ಈ ಎಲ್ಲಾ ಪ್ರದೇಶಗಳಲ್ಲಿ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಬೆಂಗಳೂರು ನಗರ ಡಿಸಿ ಕೆ ಶ್ರೀನಿವಾಸ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com