ಮೈಸೂರು: ಬಾಲಕ ಅಪಹರಣ ಪ್ರಕರಣ, ಪುರುಷ ನರ್ಸ್ ಸೇರಿದಂತೆ ಐವರ ಬಂಧನ

12 ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಯುವಕರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಪುರುಷ ನರ್ಸ್ ಕೂಡಾ ಆಗಿದ್ದಾನೆ.  ಮಗುವಿನ ಅಜ್ಜನನ್ನು ನೋಡಿಕೊಳ್ಳಲು ಬಾಲಕನ ಪೋಷಕರು ಈತನನ್ನು ನೇಮಿಸಿಕೊಂಡಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: 12 ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಯುವಕರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಪುರುಷ ನರ್ಸ್ ಕೂಡಾ ಆಗಿದ್ದಾನೆ.  ಮಗುವಿನ ಅಜ್ಜನನ್ನು ನೋಡಿಕೊಳ್ಳಲು ಬಾಲಕನ ಪೋಷಕರು ಈತನನ್ನು ನೇಮಿಸಿಕೊಂಡಿದ್ದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಚಂದ್ರಗುಪ್ತ, ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಿರ್ಜನ ಸ್ಥಳದಲ್ಲಿ ಬಾಲಕನನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ 20 ರಿಂದ 25 ವರ್ಷದ ಯುವಕರ ಗುಂಪನ್ನು ಬಂಧಿಸಲಾಯಿತು ಎಂದು ತಿಳಿಸಿದರು.

ಗುರುವಾರ ಸಂಜೆ 7.15ರಲ್ಲಿ ಕಾರಿನಲ್ಲಿ ಬಾಲಕನನ್ನು ಅಪಹರಿಸಲಾಗಿದೆ ಎಂಬ ಮಾಹಿತಿ ಬಂದ ನಂತರ ನಾವು ಸ್ಥಳಕ್ಕೆ ಧಾವಿಸಿ ಪ್ರತ್ಯಕ್ಷದರ್ಶಿಗಳು ಹಾಗೂ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿಲಾಯಿತು. ಬಾಲಕನನ್ನು ಅಪಹರಣಕಾರರಿಂದ ರಕ್ಷಿಸುವುದು ಪೊಲೀಸರ ಮೊದಲ ಆದ್ಯತೆಯಾಗಿತ್ತು. ಆದ್ದರಿಂದ  ಆದ್ದರಿಂದ ಅಪಹರಣಕಾರರಿಗೆ ಸ್ವಲ್ಪ ಹಣ ನೀಡುವುದಾಗಿ ಹೇಳುವ ಮೂಲಕ ಆಮಿಷವೊಡ್ಡಲಾಯಿತು ಎಂದು ಚಂದ್ರಗುಪ್ತ ಮಾಹಿತಿ ನೀಡಿದರು. 

ಬಾಲಕನನ್ನು ಅಪಹರಣಕಾರರಿಂದ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ರಾತ್ರಿ ಬಾಲಕನನ್ನು ನಿರ್ಜನ ಸ್ಥಳದಲ್ಲಿ ಬಿಟ್ಟು ಹಣದೊಂದಿಗೆ ಪರಾರಿಯಾಗಿದ್ದರು. ಬಾಲಕನನ್ನು  ರಕ್ಷಿಸಿದ ನಂತರ, ಅಪಹರಣಕಾರರ ಪತ್ತೆಗೆ  ನಾಲ್ಕು ತಂಡಗಳನ್ನು ರಚಿಸಿಲಾಗಿತ್ತು. ನಾವು ಅವರನ್ನು ವಿರಾಜಪೇಟೆಯಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಪ್ರಾಥಮಿಕ ತನಿಖೆ ವೇಳೆ ಯುವಕರು ತಮ್ಮ ಸಾಲ ತೀರಿಸಲು ಸುಲಿಗೆಗಾಗಿ ಅಪರಾಧ ಎಸಗಿದ್ದಾರೆ ಎಂದು ಚಂದ್ರಗುಪ್ತ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com