ಶಾಲಾ ಶಿಕ್ಷಣ ಸೂಚ್ಯಂಕದಲ್ಲಿ ಸುಧಾರಣೆ: 14ನೇ ಸ್ಥಾನದಲ್ಲಿ ಕರ್ನಾಟಕ

ಕರ್ನಾಟಕದಲ್ಲಿ ಒಟ್ಟಾರೆಯಾಗಿ ಶಾಲಾ ಶಿಕ್ಷಣದಲ್ಲಿ ಸುಧಾರಣೆ ಕಂಡುಬಂದಿದೆ. 2018-19 ರಲ್ಲಿ 5 ನೇ ಹಂತದಿಂದ (751-800) 3ನೇ ಹಂತ(ಅಂಕ  851-900) ಗ್ರೇಡಿಂಗ್ ನ್ನು ಪಡೆದುಕೊಂಡಿದೆ. ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕದ ಪ್ರಕಾರ ದೇಶದಲ್ಲಿ 14 ನೇ ಸ್ಥಾನದಲ್ಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಒಟ್ಟಾರೆಯಾಗಿ ಶಾಲಾ ಶಿಕ್ಷಣದಲ್ಲಿ ಸುಧಾರಣೆ ಕಂಡುಬಂದಿದೆ. 2018-19 ರಲ್ಲಿ 5 ನೇ ಹಂತದಿಂದ (751-800) 3ನೇ ಹಂತ(ಅಂಕ 851-900) ಗ್ರೇಡಿಂಗ್ ನ್ನು ಪಡೆದುಕೊಂಡಿದೆ. ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕದ ಪ್ರಕಾರ ದೇಶದಲ್ಲಿ 14 ನೇ ಸ್ಥಾನದಲ್ಲಿದೆ. (PGI) ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ 2020-21ರ ಗ್ರೇಡ್ ಸೂಚ್ಯಂಕ ತಿಳಿಸಿದೆ. 

ಆದಾಗ್ಯೂ, ಶಿಕ್ಷಣ ಮತ್ತು ಸಮಾನ ಶಿಕ್ಷಣದಲ್ಲಿ ಸರ್ಕಾರದ ಒಳಗೊಳ್ಳುವಿಕೆಯಲ್ಲಿ ರಾಜ್ಯವು ನಿಧಾನಗತಿಯ ಬೆಳವಣಿಗೆಯನ್ನು ತೋರಿಸಿದೆ. ವಿವಿಧ ಕ್ಷೇತ್ರಗಳಲ್ಲಿ, ಕರ್ನಾಟಕವು ವಿದ್ಯಾರ್ಥಿಗಳ ದಾಖಲಾತಿ ಮತ್ತು ಧಾರಣದಲ್ಲಿ ಶೇಕಡಾ 5ರಷ್ಟು ಹೆಚ್ಚಳವನ್ನು ತೋರಿಸಿದೆ. ಸುಧಾರಿತ ಮೂಲಸೌಕರ್ಯ ಸೌಲಭ್ಯಗಳಲ್ಲಿ ರಾಜ್ಯವು ಶೇಕಡಾ 25 ರಷ್ಟು ಹೆಚ್ಚಳವನ್ನು ಕಂಡಿದೆ.

ಆದರೆ ಸಮಾನ ಶಿಕ್ಷಣತೆಯಲ್ಲಿ ಏರಿಕೆ ಕಂಡುಬಂದಿಲ್ಲ.ಅದು ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ, ಇದು ಸಾಮಾಜಿಕ ಅಂತರವನ್ನು ಕಡಿಮೆ ಮಾಡಲು ಮತ್ತು ಎಲ್ಲರಿಗೂ ಸಮಾನ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸಿದೆ. ಕೊನೆಯದಾಗಿ, ಸರ್ಕಾರಿ ಭಾಗದಲ್ಲಿ ಪ್ರಗತಿ ಶೇಕಡಾ 4ರಷ್ಟು ಮಾತ್ರ ಪ್ರಗತಿಯಿದೆ. ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಡಿಜಿಟಲ್ ಹಾಜರಾತಿ, ಡಿಜಿಟಲ್‌ನಲ್ಲಿ ಹಣ ವರ್ಗಾವಣೆ, ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ತೆಗೆದುಕೊಂಡ ಸಮಯ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಮತ್ತು ಪಾರದರ್ಶಕ ಮೂಲಕ ಶಿಕ್ಷಕರ ವರ್ಗಾವಣೆಯನ್ನು ತೋರಿಸುತ್ತದೆ. 

PGI ಮೌಲ್ಯಮಾಪನವು ಶ್ರೇಯಾಂಕಗಳಿಗೆ ವಿರುದ್ಧವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಶ್ರೇಣಿಗಳು/ಹಂತಗಳಾಗಿ ವರ್ಗೀಕರಿಸುತ್ತದೆ. ಶ್ರೇಣೀಕರಣವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಂದೇ ಮಟ್ಟದಲ್ಲಿ ಪರಿಗಣಿಸುತ್ತದೆ. ಒಂದು ರಾಜ್ಯದ ಇತರರ ವೆಚ್ಚದಲ್ಲಿ ಸುಧಾರಣೆಯನ್ನು ತೋರಿಸುವ ಪ್ರವೃತ್ತಿಯನ್ನು ತೆಗೆದುಹಾಕುತ್ತದೆ.

ಇದು ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆಯ ಬದಲಾವಣೆಯನ್ನು ವೇಗಗೊಳಿಸಲು ರಾಜ್ಯಗಳು/ವಿಶ್ವವಿದ್ಯಾಲಯಗಳ ಕಾರ್ಯಕ್ಷಮತೆಯನ್ನು ಏಕರೂಪದ ಪ್ರಮಾಣದಲ್ಲಿ ಅಳೆಯುತ್ತದೆ. ವ್ಯವಸ್ಥೆಯಲ್ಲಿನ ಕಾರ್ಯಕ್ಷಮತೆ ಮತ್ತು ಅಂತರಗಳ ನಿರ್ಣಾಯಕ ಕ್ಷೇತ್ರಗಳನ್ನು ಒಳಗೊಂಡಂತೆ ಶಾಲೆಯ ಸ್ಥಿತಿಯ ಒಳನೋಟಗಳನ್ನು ತೋರಿಸುವುದು ಸೂಚ್ಯಂಕವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com