ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಮಸಾಲೆ ದೋಸೆ-ಫಿಲ್ಟರ್ ಕಾಫಿ ಸವಿದ ಸ್ಟಾರ್ ಬಕ್ಸ್ ಸಹ ಸಂಸ್ಥಾಪಕ ಜೆವ್ ಸೀಗಲ್

ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಅದರಲ್ಲಿ ಭಾಗವಹಿಸಲು ಬಂದಿದ್ದ ಸ್ಟಾರ್‌ಬಕ್ಸ್ ಸಹ-ಸಂಸ್ಥಾಪಕ (Starbucks co founder) ಜೆವ್ ಸೀಗಲ್ (Zev Siegl) ನಿನ್ನೆ ಸಾಯಂಕಾಲ ಬೆಂಗಳೂರಿನ ಪ್ರಸಿದ್ಧ ವಿದ್ಯಾರ್ಥಿ ಭವನ ಹೊಟೇಲ್ ಗೆ (Vidyarthi Bhavan) ಹೋಗಿ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಸವಿದಿದ್ದಾರೆ. 
ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಮಸಾಲೆ ದೋಸೆ-ಫಿಲ್ಟರ್ ಕಾಫಿ ಸವಿದ ಸ್ಟಾರ್ ಬಕ್ಸ್ ಸಹ ಸಂಸ್ಥಾಪಕ ಜೆವ್ ಸೀಗಲ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಅದರಲ್ಲಿ ಭಾಗವಹಿಸಲು ಬಂದಿದ್ದ ಸ್ಟಾರ್‌ಬಕ್ಸ್ ಸಹ-ಸಂಸ್ಥಾಪಕ (Starbucks co founder) ಜೆವ್ ಸೀಗಲ್ ನಿನ್ನೆ ಸಾಯಂಕಾಲ ಬೆಂಗಳೂರಿನ ಪ್ರಸಿದ್ಧ ವಿದ್ಯಾರ್ಥಿ ಭವನ ಹೊಟೇಲ್ ಗೆ (Vidyarthi Bhavan) ಹೋಗಿ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಸವಿದಿದ್ದಾರೆ. 

ವಿಶ್ವದ ಅತಿದೊಡ್ಡ ಕಾಫಿ ಸರಪಳಿ ಸಂಸ್ಥೆಯಾದ ಸ್ಟಾರ್‌ಬಕ್ಸ್‌ನ ಸಹ-ಸಂಸ್ಥಾಪಕರು ನಿನ್ನೆ ವಿದ್ಯಾರ್ಥಿ ಭವನ ಉಪಾಹಾರ ಗೃಹಕ್ಕೆ ಕಾಲಿಟ್ಟರು. Zev Siegl ಒಂದು ಕಪ್ ಅತ್ಯುತ್ತಮ ಫಿಲ್ಟರ್ ಕಾಫಿಯೊಂದಿಗೆ ಮಸಾಲಾ ದೋಸೆಯನ್ನು ಸವಿದು ಆನಂದಿಸಿದರು. 

ಅವರ ಭೇಟಿಯ ಚಿತ್ರಗಳನ್ನು ವಿದ್ಯಾರ್ಥಿ ಭವನವು ಹಂಚಿಕೊಂಡಿದೆ, ದಕ್ಷಿಣ ಭಾರತದ ಖ್ಯಾತ ಸಾಂಪ್ರದಾಯಿಕ ಸಸ್ಯಾಹಾರಿ ಉಪಾಹಾರ ಗೃಹ ವಿದ್ಯಾರ್ಥಿ ಭವನವಾಗಿದ್ದು, 1943 ರಲ್ಲಿ ಸಣ್ಣ ವಿದ್ಯಾರ್ಥಿಗಳ ಉಪಾಹಾರ ಗೃಹವಾಗಿ ಪ್ರಾರಂಭವಾಯಿತು.

ಸೀಗಲ್ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2022 ಗಾಗಿ ಬೆಂಗಳೂರಿನಲ್ಲಿದ್ದಾರೆ. ಅವರು ರೆಸ್ಟೋರೆಂಟ್‌ಗಾಗಿ ಅದರ ಅತಿಥಿ ಪುಸ್ತಕದಲ್ಲಿ ಟಿಪ್ಪಣಿಯನ್ನು ಸಹ ಬರೆದಿದ್ದಾರೆ. ಅದರಲ್ಲಿ, “ನನ್ನ ಸ್ನೇಹಿತರೇ, ನಿಮ್ಮ ಪ್ರಸಿದ್ಧ ಆಹಾರ, ಕಾಫಿ ಮತ್ತು ದೋಸೆಯನ್ನು ಸವಿದಿದ್ದು, ನಿಮ್ಮ ಆತಿಥ್ಯ, ಗೌರವ ನನಗೆ ತೀವ್ರ ಸಂತೋಷವನ್ನುಂಟುಮಾಡಿದೆ.. ಸಿಯಾಟೆಲ್ ಗೆ ಇಲ್ಲಿನ ಅದ್ಭುತ ಅನುಭವದೊಂದಿಗೆ ಮರಳುತ್ತೇನೆ, ಧನ್ಯವಾದಗಳು'' ಎಂದು ಬರೆದು ಮೂರು ಸ್ಟಾರ್ ಗುರುತುಗಳನ್ನು ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com