ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶ್ರೀ ನಿರಾಕರಣೆ

ಪೋಕ್ಸೋ ಪ್ರಕರಣದಲ್ಲಿನ ಪ್ರಮುಖ ಮುರುಘಾ ಮಠದ ಸ್ವಾಮೀಜಿ ಡಾ. ಶಿವಮೂರ್ತಿ ಮುರುಘಾ ಶರಣರು ತಮ್ಮ ವಿರುದ್ಧದ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಆರೋಪಗಳನ್ನು ನಿರಾಕರಿಸಿದ್ದಾರೆ.
ಡಾ. ಶಿವಮೂರ್ತಿ ಮುರುಘಾ ಶ್ರೀ
ಡಾ. ಶಿವಮೂರ್ತಿ ಮುರುಘಾ ಶ್ರೀ

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿನ ಪ್ರಮುಖ ಮುರುಘಾ ಮಠದ ಸ್ವಾಮೀಜಿ ಡಾ. ಶಿವಮೂರ್ತಿ ಮುರುಘಾ ಶರಣರು ತಮ್ಮ ವಿರುದ್ಧದ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಆರೋಪಗಳನ್ನು ನಿರಾಕರಿಸಿದ್ದಾರೆ. ತಾನು ಮತ್ತಿನ ಔಷಧಿಯೊಂದಿಗೆ ಬಾಲಕಿಯರಿಗೆ ಹಣ್ಣು ಮತ್ತು ಚಾಕೊಲೇಟ್ ನೀಡಿಲ್ಲ ಎಂದಿದ್ದಾರೆ. ಚಾರ್ಚ್ ಶೀಟ್ ನೊಂದಿಗೆ ಪೊಲೀಸರಿಗೆ ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿರುವ ಸ್ವಾಮೀಜಿ, ಮದ್ಯ ಸೇವಿಸುವ ಅಭ್ಯಾಸ ಇಲ್ಲ ಎಂದು ತಿಳಿಸಿದ್ದಾರೆ. 

ಹಿಂಬಾಗಿಲಿನಿಂದ ಬಾಲಕಿಯರು ತನ್ನ ಕೊಠಡಿಗೆ ಬರುತ್ತಿದ್ದರು ಎಂಬ ಆರೋಪವನ್ನು ನಿರಾಕರಿಸಿರುವ ಸ್ವಾಮೀಜಿ, ಹಿಂಬಾಗಿಲಿನಿಂದ ಯಾರಿಗೂ ಅವಕಾಶವಿರಲಿಲ್ಲ. ಅಪೌಷ್ಟಿಕತೆಯಿಂದ ಬಳಲುತ್ತಿದ್ದವರಿಗೆ ಮಾತ್ರ ಹಣ್ಣು, ಡ್ರೈ ಫ್ರೂಟ್ಸ ಮತ್ತು ಚಾಕೋಲೇಟ್ ನೀಡುತ್ತಿದ್ದಾಗಿ ಹೇಳಿದ್ದಾರೆ. ಸ್ನಾನ ಮಾಡಲು ಇತರರಿಂದ ನೆರವಿನ ಆರೋಪವನ್ನು ಅವರು ನಿರಾಕರಿಸಿದ್ದು, ನಾಲ್ಕು ವರ್ಷಗಳಿಂದ ಹಿಂದೆ ಹಾಸ್ಟೆಲ್ ವಾರ್ಡನ್ ರಶ್ಮಿ ಅವರನ್ನು ನೇಮಕ ಮಾಡಲಾಗಿತ್ತು. ಮಠದಲ್ಲಿ ಅವರ ಯಾವಾಗ ಬರುತ್ತಾರೆ, ಹೋಗುತ್ತಾರೆ ಎಂಬುದು ತಿಳಿದಿಲ್ಲ ಎಂದಿದ್ದಾರೆ.

ಮುರುಘಾ ಮಠದ ಅಕ್ಕಮಹಾದೇವಿ ಹಾಸ್ಟೆಲ್ ನ ಅಪ್ರಾಪ್ತ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯದಿಂದ ನರಳುತ್ತಿರುವುದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ. ಸಂತ್ರಸ್ತೆ ಈಗ ಮದುವೆಯಾಗಿದ್ದು,ಸ್ವಾಮೀಜಿ ಮತ್ತಿಬ್ಬರ ವಿರುದ್ಧ ದಾಖಲಾಗಿರುವ ಭಾಗಶ: ಜಾರ್ಜ್ ಶೀಟ್ ನಲ್ಲಿ ಆಕೆಯ ಹೇಳಿಕೆ ದಾಖಲಾಗಿದೆ. ಎಲ್ಲರೂ ನಿದ್ರೆಗೆ ಹೋದ ನಂತರ, ವಾರ್ಡನ್ ನಮ್ಮನ್ನು  ಹಿಂಬಾಗಿಲಿನಿಂದ ಸ್ವಾಮೀಜಿ ಕೊಠಡಿಗೆ ಕಳುಹಿಸುತ್ತಿದ್ದರು. ಅಲ್ಲಿ ಸ್ವಾಮೀಜಿ ಹಣ್ಣು ನೀಡಿ ಅಸಭ್ಯವಾಗಿ ಸ್ಪರ್ಶಿಸುತ್ತಿದ್ದರು ಎಂದು ಆಕೆ ತನ್ನ ಸಂಕಷ್ಟವನ್ನು ಹಂಚಿಕೊಂಡಿದ್ದಾಳೆ. 

ಬೆಳಗ್ಗೆ 4-30ಕ್ಕೆ ಸ್ವಾಮೀಜಿ  ಅಲಾರಾಂ ಗಡಿಯಾರ ಸೆಟ್ ಮಾಡಿ ಹಿಂಬಾಗಿಲಿನಿಂದ ಹಾಸ್ಟೆಲ್ ಗೆ ಕಳುಹಿಸುತ್ತಿದ್ದರು ಎಂದು ಸಂತ್ರಸ್ತೆ ಹೇಳಿರುವುದಾಗಿ ಬಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಅಪ್ರಾಪ್ತ ಬಾಲಕಿಯರನ್ನು ತನ್ನ ಕೊಠಡಿ ಕೆಲಸಕ್ಕಾಗಿ ಸ್ವಾಮೀಜಿ ಬಳಸುತ್ತಿದ್ದಾಗಿ ಅವರ ಸಹಾಯಕರು ಪೊಲೀಸರಿಗೆ ಹೇಳಿದ್ದಾರೆ. ಆದರೆ, ಕೆಲಸ ಕಳೆದುಕೊಳ್ಳುವ ಭಯದಲ್ಲಿ ಅವರು ಮೌನವಾಗಿದ್ದರು. ಬಾಲಕಿಯರೊಂದಿಗೆ ಹಾಸ್ಟೆಲ್ ವಾರ್ಡನ್  ಸ್ವಾಮೀಜಿ ಕೊಠಡಿಗೆ ತೆರಳುತ್ತಿದ್ದರು ಮತ್ತು ಗಂಟೆಗಟ್ಟಲೇ ಅಲ್ಲಿರುತ್ತಿದ್ದರು. ಆ ಸಂದರ್ಭದಲ್ಲಿ ಇತರರಿಗೆ ಅವಕಾಶವಿರಲಿಲ್ಲ ಎಂದು ಮತ್ತೋರ್ವರು ಹೇಳಿದ್ದಾರೆ. 

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯೊಂದರ ಪ್ರಕಾರ, ಆರೋಪಿಯಿಂದ ಸಂಗ್ರಹಿಸಲಾದ ರಕ್ತ ಮತ್ತು ಮೂತ್ರದ ಸ್ಯಾಂಪಲ್ ನಲ್ಲಿ ಮದ್ಯ ಅಥವಾ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ.ಈಥೈಲ್ ಆಲ್ಕೋಹಾಲ್, ಮಾದಕ ದ್ರವ್ಯಗಳು, ಬಾರ್ಬಿಟ್ಯುರೇಟ್‌ಗಳು, ಬೆಂಜೊಡಿಯಜೆಪೈನ್ ಗುಂಪಿನ ಔಷಧಗಳು ಮತ್ತು ಆಲ್ಕಲಾಯ್ಡ್‌ಗಳು ಮತ್ತಿತರ ಅವಶೇಷಗಳು ಮಾದರಿಗಳಲ್ಲಿ ಪತ್ತೆಯಾಗಿಲ್ಲ ಎಂದು ಜಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com