ನಮ್ಮ ಮೆಟ್ರೋದ 3ನೇ ಹಂತಕ್ಕೆ ಸರ್ಕಾರದ ತಾತ್ವಿಕ ಅನುಮೋದನೆ

ನಮ್ಮ ಮೆಟ್ರೊದ ಮೂರನೇ ಹಂತದ ಯೋಜನೆಗೆ 6,328 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದು ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಾಯಲಾಗುತ್ತಿದೆ.
ನಮ್ಮ ಮೆಟ್ರೊ
ನಮ್ಮ ಮೆಟ್ರೊ
Updated on

ಬೆಂಗಳೂರು: ನಮ್ಮ ಮೆಟ್ರೊದ ಮೂರನೇ ಹಂತದ ಯೋಜನೆಗೆ 6,328 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದು ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಾಯಲಾಗುತ್ತಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ (BMRCL) 3ನೇ ಹಂತದ ಯೋಜನೆಗೆ ಸಿಎಂ ಅನುಮೋದನೆ ನೀಡಿದ್ದಾರೆ. ನಗರಾಭಿವೃದ್ಧಿ ಇಲಾಖೆ ಕೇಂದ್ರಕ್ಕೆ ಅನುಮೋದನೆಗಾಗಿ ಕಳುಹಿಸಲಿದೆ. ಯೋಜನೆಯು ಕೆಲವು ವಾರಗಳ ಹಿಂದೆ ಹಣಕಾಸು ಇಲಾಖೆಯಿಂದ ತಾತ್ವಿಕ ಅನುಮೋದನೆಯನ್ನು ಪಡೆಯಿತು ಎಂದು ತಿಳಿಸಿದ್ದಾರೆ.

3ನೇ ಹಂತದ ಯೋಜನೆಯು 44.65 ಕಿಮೀ ಉದ್ದದವರೆಗೆ ಸಾಗಿ ಎರಡು ಕಾರಿಡಾರ್‌ಗಳನ್ನು ಒಳಗೊಳ್ಳುತ್ತದೆ, ಒಂದು ಹೊರ ವರ್ತುಲ ರಸ್ತೆ ಪಶ್ಚಿಮದಲ್ಲಿ ಮತ್ತು ಇನ್ನೊಂದು ಮಾಗಡಿ ರಸ್ತೆಯ ಮೂಲಕ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇಕಡಾ 20ರಷ್ಟು ವೆಚ್ಚವನ್ನು ಭರಿಸಲಿದ್ದು, ಉಳಿದ ಶೇಕಡಾ 60 ಬಾಹ್ಯ ಬೆಂಬಲ ಮೂಲಕ ನಿರ್ಮಾಣವಾಗುತ್ತದೆ. ಅಂದಾಜು ವೆಚ್ಚವನ್ನು ಮುಂದಿನ ಐದು ವರ್ಷಗಳ ವೆಚ್ಚ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ನಿಗದಿಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

507.29 ಕೋಟಿ ರೂಪಾಯಿಗಳಲ್ಲಿ ಮೆಟ್ರೋ ಇಂಟಿಗ್ರೇಟೆಡ್ ಸ್ಟ್ರಕ್ಚರ್‌ಗಳ ನಿರ್ಮಾಣ
ಕಾರಿಡಾರ್-1 ಜೆಪಿ ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32.15 ಕಿ.ಮೀ ವರೆಗೆ ಓಆರ್‌ಆರ್ 22 ನಿಲ್ದಾಣಗಳನ್ನು ಮುಟ್ಟುತ್ತದೆ, ಕಾರಿಡಾರ್-2 ಹೊಸಹಳ್ಳಿಯಿಂದ ಕಡಬಗೆರೆವರೆಗೆ (ಮಾಗಡಿ ರಸ್ತೆ ಮೂಲಕ) 12.5 ಕಿಮೀ ಮತ್ತು ಒಂಬತ್ತು ನಿಲ್ದಾಣಗಳನ್ನು ಒಳಗೊಂಡಿದೆ. ಅಗತ್ಯವಿರುವ ಒಟ್ಟು ವಿಸ್ತೀರ್ಣ 110 ಎಕರೆ ಆಗಿದ್ದು, ಇದರಲ್ಲಿ ಶೇಕಡಾ 85ರಷ್ಟು ಸರಕಾರಿ ಭೂಮಿ ಹಾಗೂ ಉಳಿದ ಜಾಗ ಖಾಸಗಿಯದ್ದಾಗಿದೆ.

ಕಾರಿಡಾರ್ 1ರಲ್ಲಿ ಬರುವ ಮಟ್ರೋ ನಿಲ್ದಾಣಗಳು: ಜೆಪಿ ನಗರ 4 ನೇ ಹಂತ, ಜೆಪಿ ನಗರ 5 ನೇ ಹಂತ, ಜೆಪಿ ನಗರ, ಕದಿರೇನಹಳ್ಳಿ, ಕಾಮಕ್ಯ ಜಂಕ್ಷನ್, ಹೊಸಕೆರೆಹಳ್ಳಿ, ದ್ವಾರಕಾ ನಗರ, ಮೈಸೂರು ರಸ್ತೆ, ನಾಗರಭಾವಿ ವೃತ್ತ, ವಿನಾಯಕ ಲೇಔಟ್, ಪಾಪಿರೆಡ್ಡಿಪಾಳ್ಯ, ಬಿಡಿಎ ಕಾಂಪ್ಲೆಕ್ಸ್ ನಾಗರಭಾವಿ, ಸುಮನಹಳ್ಳಿ ಕ್ಯಾರೋಸ್ ನಗರ, ಸ್ವಾತಂತ್ರ್ಯ ಹೋರಾಟಗಾರರ ಕಾಲೋನಿ, ಕಂಠೀರವ ನಗರ, ಪೀಣ್ಯ, ಮುತ್ಯಾಲ ನಗರ, ಬಿಇಎಲ್ ಸರ್ಕಲ್, ನಾಗಶೆಟ್ಟಿ ಹಳ್ಳಿ, ಹೆಬ್ಬಾಳ ರೈಲು ನಿಲ್ದಾಣ ಮತ್ತು ಕೆಂಪಾಪುರ. ಒಂಬತ್ತು ನಿಲ್ದಾಣಗಳಲ್ಲಿ, ಇದು ಪ್ರಯಾಣಿಕರಿಗೆ ತಡೆರಹಿತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಮೆಟ್ರೋ, ಉಪನಗರ ರೈಲು ಅಥವಾ BMTC ಯೊಂದಿಗೆ ಸಂಯೋಜಿಸುತ್ತದೆ. ಕಾರಿಡಾರ್-2ರಲ್ಲಿ ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್, ಕಡಬಗೆರೆ ಇರುತ್ತದೆ. ಇದು ಹೊಸಹಳ್ಳಿ ಮತ್ತು ಸುಮನಹಳ್ಳಿ ಕ್ರಾಸ್‌ನ ಎರಡು ನಿಲ್ದಾಣಗಳಲ್ಲಿ ಮೆಟ್ರೊದೊಂದಿಗೆ ಸಂಯೋಜನೆಗೊಳ್ಳಲಿದೆ. ಎರಡೂ ಕಾರಿಡಾರ್‌ಗಳಿಗೆ ಸುಂದನಕಟ್ಟೆಯಲ್ಲಿ ಸಾಮಾನ್ಯ ಡಿಪೋವನ್ನು ಯೋಜಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com