ಹುಬ್ಭಳ್ಳಿ: ಎಕ್ಸಲರೇಟ್ ಕಂಪನಿಯ ನೂತನ ಕಚೇರಿ ಉದ್ಘಾಟಿಸಿದ ಸಚಿವ ಅಶ್ವತ್ಥ ನಾರಾಯಣ

ಅಮೆರಿಕದ ಪೆನ್ಸಿಲ್ವೇನಿಯಾ ಪ್ರಾಂತ್ಯದ ವೇನ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಕ್ಸಲರೇಟ್ ಬಹು ರಾಷ್ಟ್ರೀಯ ಕಂಪನಿಯ ಸ್ಥಳೀಯ ಕಚೇರಿಯನ್ನು ಐಟಿ- ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹುಬ್ಬಳ್ಳಿಯಲ್ಲಿಂದು ಉದ್ಘಾಟಿಸಿದರು. ದೇಶಪಾಂಡೆ ಫೌಂಡೇಶನ್ ನಲ್ಲಿ ಈ ಕಚೇರಿಯನ್ನು ತೆರೆಯಲಾಗಿದೆ.
ಡಾ.ಸಿ.ಎನ್. ಅಶ್ವತ್ಥ ನಾರಾಯಣ
ಡಾ.ಸಿ.ಎನ್. ಅಶ್ವತ್ಥ ನಾರಾಯಣ

ಹುಬ್ಬಳ್ಳಿ: ಅಮೆರಿಕದ ಪೆನ್ಸಿಲ್ವೇನಿಯಾ ಪ್ರಾಂತ್ಯದ ವೇನ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಕ್ಸಲರೇಟ್ ಬಹು ರಾಷ್ಟ್ರೀಯ ಕಂಪನಿಯ ಸ್ಥಳೀಯ ಕಚೇರಿಯನ್ನು ಐಟಿ- ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹುಬ್ಬಳ್ಳಿಯಲ್ಲಿಂದು ಉದ್ಘಾಟಿಸಿದರು. ದೇಶಪಾಂಡೆ ಫೌಂಡೇಶನ್ ನಲ್ಲಿ ಈ ಕಚೇರಿಯನ್ನು ತೆರೆಯಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಜ್ಯದ ಎರಡನೇ ಸ್ತರದ ನಗರಗಳಲ್ಲಿ ಉದ್ಯಮ ಸಂಸ್ಕೃತಿ ಬೇರೂರುವುದು ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆ ದೃಷ್ಟಿಯಿಂದ ಸ್ವಾಗತಾರ್ಹ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಜಗತ್ತನ್ನು ಆಳುತ್ತಿವೆ. 20 ವರ್ಷಗಳ ಅನುಭವ ಹೊಂದಿರುವ ಎಕ್ಸಲರೇಟ್ ಕಂಪನಿಯು ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಯುವ ಜನರಿಗೆ ಸೂಕ್ತ ಉದ್ಯೋಗವಕಾಶಗಳನ್ನು ಒದಗಿಸಲಿದೆ ಎಂದು ಅವರು ಹೇಳಿದರು.

21ನೇ ಶತಮಾನದಲ್ಲಿ ಪರಿವರ್ತನೆಗಳು ಕ್ಷೀಪ್ರವಾಗಿ ಸಂಭವಿಸುತ್ತಿವೆ. ಎಕ್ಸಲರೇಟ್ ಕಂಪನಿ ಆರೋಗ್ಯ, ವಿಮೆ, ಆರ್ಥಿಕ ಸೇವೆ ಮತ್ತು ಔದ್ಯಮಿಕ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿದೆ ಎಂದು ಅವರು ವಿವರಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com